ಇಂದಿನಿಂದ‌ ನ.20 ರವರೆಗೆ ಕಾಲುವೆ ನೀರಿಗೆ ವಾರಬಂದಿ ನಿರ್ಭಂದ- ಸಚಿವ ದರ್ಶನಾಪುರ

. ಆಲಮಟ್ಟಿ ಯಲ್ಲಿ ನೆಡದ ನೀರಾವರಿ‌ ಸಲಹಾ ಸಮಿತಿ ಅಧ್ಯಕ್ಷರಾದ ಆರ್.ಬಿ.ತಿಮ್ಮಾಪುರವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.ಈ ಸಭೆಯಲ್ಲಿ ಸಣ್ಣ ಕೈಗಾರಿಕಾ ಸಾರ್ವಜನಿಕ ‌ಉಧ್ಯಮಗಳ ಮಂತ್ರಿ.ಶರಣಬಸ್ಸಪ್ಪಗೌಡ ದರ್ಶನಾಪುರ ಮತ್ತು.ಕೆ.ಆರ್.ಡಿ.ಬಿ.ಅಧ್ಯಕ್ಷರಾದ ಡಾ.ಅಜಯಸಿಂಗ್ ರವರು ಸೂಕ್ತ ಮಾರ್ಗದರ್ಶನ ದ ಮೇರೆಗೆ ನ.16 ರಿಂದ ನ.20 ವರೆಗೆ ನಾಲ್ಕು ದಿನಗಳ ಕಾಲ ಯಾವುದೇ ವಾರಾಬಂದಿ ಮಾಡದೆ ಕಾಲುವೆಗೆ ನೀರು ಹರಿಸಬೇಕು.ಇದರಿಂದ ಕೊನೆಯ ಭಾಗದಲ್ಲಿನ ರೈತರಿಗೂ ಕಾಲುವೆ ನೀರು ದೊರೆಯಲು ಸಾಧ್ಯವಾಗುತ್ತದೆ.ಎನ್ನುವ ಸದುದ್ದೇಶಗಳಿಂದ ನಾಲ್ಕು ದಿನಗಳ ಕಾಲ ಸಮರ್ಪಕವಾಗಿ ನೀರು ಹರಿಬೇಕು.ಎಂದು ಅವರು ಸಭೆಯಲ್ಲಿ ತಿಳಿಸಿ ಚರ್ಚಿಸಿದರು.ಸೂಕ್ತ ಕ್ರಮ ಕೈಗೊಂಡು ನಾಲ್ಕು ದಿನಗಳ ವಾರಾಬಂದಿ ಪದ್ದತಿ ‌ನಿರ್ಭಂದ ಮಾಡಲಾಗಿದೆ ಎಂದರು.ಈ ಸಭೆಯಲ್ಲಿ ಸಲಹಾ ಸಮಿತಿಸದಸ್ಯರು ನೀರಾವರಿ ಇಲಾಖೆ‌ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

English Kannada