ಶಹಾಪುರ.
ಭಾರತೀಯ ಹತ್ತಿ ನಿಗಮದಿಂದ ಅನುಮತಿಸಲಾದ, ಕೃಷಿ ಉತ್ಪನ್ನ ಮಾರುಕಟ್ಟೆ ಅಧಿನದಲ್ಲಿ ಶಹಾಪುರ ತಾಲುಕಿನಲ್ಲಿ ಒಟ್ಟು 14 ಕಾಟನ್ ಮಿಲ್ ಕೇಂದ್ರಗಳಲ್ಲಿ ಹತ್ತಿ ಖರೀದಿ ಕೆಂದ್ರಗಳಿಗೆ ಪರವಾನಿಗೆ ನೀಡಲಾಗಿದ್ದು. ಪ್ರಥಮದಲ್ಲಿ ರೈತರಿಗೆ ಅನೂಕೂಲವಾಗಲೆಂದು, ಗುರು ಮಣಿಕಂಠರವರ ಮಾಲಿಕತ್ವದಲ್ಲಿ, ಮಣಿಕಂಠ ಹತ್ತಿ ಮಿಲ್ ನಲ್ಲಿ ವ್ಯಾಪಾರಕ್ಕೆ ಚಾಲನೆ ನೀಡಲಾಗಿದೆ, ರೈತರು ಅಕ್ರಮವಾಗಿ ಹಳ್ಳಿಗಳಲ್ಲಿ ಬರುವ ಹತ್ತಿ ಖರೀದಿದಾರರಿಂದ ಎಚ್ಚರಿಕೆ ವಹಿಸಬೇಕು ಎಂದು ಸಣ್ಣ ಕೈಗಾರಿಕಾ ಸಾರ್ವಜನಿಕ ಉದ್ಯಮಗಳ ಮಂತ್ರಿ ಶರಣಬಸಸಪ್ಪಗೌಡ ದರ್ಶನಪುರವರು ಹೆಳಿದರು. ಅವರು ಹುಲಕಲ್ ಸಮೀಪದಲ್ಲಿರುವ ಮಣಿಕಂಠ ಕಾಟನ ಮಿಲ್ ಅವರಣದಲ್ಲಿ ಎರ್ಪಡಿಸಲಾದ, ಭಾರತೀಯ ಹತ್ತಿ ನಿಗಮದ ಹತ್ತಿ ಖರೀದಿ ಕೇಂದ್ರ ಉಧ್ಘಾಟಿಸಿ ಮಾತನಾಡಿದರು, ಹತ್ತಿಯನ್ನು ಪ್ರತಿ ಕ್ವೀಂಟಾಲ್ ಗೆ 7521 ರೂ,ಗಳನ್ನು ಸರ್ಕಾರ ನಿಗಿದಿತಗೊಳಿಸಿದೆ, ರೈತರು ಸೂಕ್ತ ದಾಖಲಾತಿಗಳನ್ನು ನೀಡಿ ಹತ್ತಿ ವ್ಯಾಪಾರ ಮಾಡಿಕೊಳ್ಳಬೇಕು ಎಂದರು,,ಸಿಸಿಐ ಹತ್ತಿ ಖರೀದಿ ಕೆಂದ್ರದ ಅಧಿಕಾರಿ ಕಿರಣ ಪುರೋಹಿತ ಮಾತನಾಡಿ, ರೈತರು ನೇರವಾಗಿ ಹತ್ತಿ ಕೇಂದ್ರಕ್ಕೆ ಬಂದು ಪಾಣಿ ನೀಡಿ ಬ್ಯಾಂಕ್ ಪಾಸ್ ಬುಕ್ ಗೆ ಆಧಾರ ಲಿಂಕ್ ಮಾಡಿದ ಖಾತೆಯನ್ನು ನೀಡಿ ತಮ್ಮ ಬೇಳೆ ಖರೀದಿ ಹಣವನ್ನು ಖಾತೆಯಿಂದ ಪಡೆಯಬಹುದಾಗಿದೆ, ತಾಂತ್ರಿಕ ತೊಂದರೆಗಳು ಉಂಟಾದಲ್ಲಿ ಸಮಸ್ಯೆಗೆ ಸ್ಪಂಧನೆ ಮಾಡಿ ರೈತರಿಗೆ ಅನೂಕೂಲ ಮಾಡಿಕೊಡಲಾಗುತ್ತದೆ ಎಂದರು, ಮಣಿಕಂಠ ಕಾಟನ್ ಮಿಲ್ ಮಾಲಿಕರಾದ. ಗುರು ಮಣಿಕಂಠರವರು ಪ್ರಾಸ್ತಾವಿಕವಾಗಿ ಮಾತನಾಡಿ, ರೈತರಿಗೆ ಅನೂಕೂಲಕರವಾಗುವಂತೆ ನೀಯಮಗಳನ್ನು ಸಡಿಲಿಕೆ ಮಾಡಿ ಹತ್ತಿ ಖರೀದಿಗೆ ಮುಂದಾಗಬೇಕು, ಮತ್ತು ರೈತರಿಗೆ ಇರುವ ಸಮಸ್ಯೆಗಳಿಗೆ ಸರ್ಕಾರ ಸ್ಪಂಧನೆ ಮಾಡಬೇಕು ಸಚಿವರಲ್ಲಿ ಮನವಿ ಮಾಡಿಕೊಂಡರು,ರೈತ ಸಂಘದ ಅಧ್ಯಕ್ಷರಾದ ಕಾಂತು ಪಾಟೀಲ್ ಮಾತನಾಡಿದರು, ವೇದಿಕೆಯಲ್ಲಿ ಎ,ಪಿ,ಎಮ್,ಸಿ, ಅಧ್ಯಕ್ಷರಾದ ಶ್ರೀಮತಿ ಬಸ್ಸಮ್ಮ ಸಗರ, ಉಪಾದ್ಯಕ್ಷರಾದ ಬಸವರಾಜ ಹಯ್ಯಾಳ ಬಿ, ಮುಖಂಡರಾದ ಸಿದ್ದಲಿಂಗಣ್ಣ ಆನೆಗುಂದಿ, ಕರವೇ ಉತ್ತರ ಕರ್ನಾಟಕ ಅಧ್ಯಕ್ಷರಾದ ಶರಣು ಗದ್ದುಗೆ, ಶಿವಮಾಂತ ಚಂದಾಪುರ, ಶರಣು ಮಂದರವಾಡ್,ಮಲ್ಲಪ್ಪ ಗೋಗಿ, ಸೇರಿದಂತೆ ಎಪಿಎಮ್,ಸಿ, ಅಧಿಕಾರಿಗಳು ರೈತರು ಭಾಗವಹಿಸಿದ್ದರು,