೧೫ ಲಕ್ಷ,ರೂ ವೆಚ್ಚದಲ್ಲಿ ಶ್ರೀ ಮರೆಮ್ಮದೇವಿ ದೇವಸ್ಥಾನ ಕಂಪೌ0ಡ ನಿರ್ಮಾಣ -ಸಚಿವ ದರ್ಶನಾಪುರ.

ಶ್ರೀ ಮರೆಮ್ಮದೇವಿ ಶಿಖರ ಉಧ್ಘಾಟನೆ

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ಸರ್ಕಾರದಲ್ಲಿ ಮಠ ಮಂದಿರಗಳ ಅಭಿವೃದ್ದಿ ಜೀರ್ಣೋಧ್ದಾರ ಕಾರ್ಯಕ್ರಮಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಾಕಷ್ಟು ಅನುಧಾನ ನೀಡಿದೆ, ಅದರಂತೆ ಶಹಾಪುರ ಮತಕ್ಷೇತ್ರದಲ್ಲಿ ಅಂದಾಜು ೧,೫ ಕೊಟಿಗೂ ಹೆಚ್ಚು ಅನುಧಾನ ಮಠ ಮತ್ತು ಮಂದಿರದ ಧಾರ್ಮಿಕ ಕ್ಷೇತ್ರಗಳ ಪುನರಜ್ಜೀವನಕ್ಕೆ ನೀಡಲಾಗಿದೆ, ಅದರಂತೆ ನಗರದಲ್ಲಿ ಪ್ರತಿಷ್ಟಿತ ದೇವಿನಗರದ ಶ್ರೀ ಮರೆಮ್ಮದೇವಿ ದೇವಸ್ಥಾನಕ್ಕೆ ಕಂಪೌAಡ ಗೋಡೆ ನಿರ್ಮಾಣಕ್ಕೆ ೧೫ ಲಕ್ಷ,ರೂ ಮಂಜೂರಿ ಮಾಡಲಾಗುತ್ತದೆ ಎಂದು ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉಧ್ಯಮಗಳ ಮಂತ್ರಿ ಶರಣಬಸ್ಸಪ್ಪಗೌಡ ದರ್ಶನಾಪುರವರು ಹೇಳಿದರು, ಅವರು ದೇವಿನಗರದ ಶ್ರೀ ಮರೆಮ್ಮದೇವಿ ದೇವಿಸ್ಥಾನದ ಶಿಖರ ಲೋಕಾರ್ಪಣೆ ಮಾಡಿ ಮಾಡಿ ಮಾತನಾಡಿದರು,ಮುಂದುವರೆದು ಮಾತನಾಡಿದ ಅವರು ಪ್ರತಿಯೊಬ್ಬರ ಆರಾಧ್ಯ ದೈವ ಶ್ರೀ ಮರೆಮ್ಮದೇವಿ ದಸರಾ ಹಬ್ಬದ ಸುಭ ಗಳಿಗೆಯಲ್ಲಿ ಸರ್ವರಿಗೂ ಆರೋಗ್ಯ ಆಯುಷ್, ನೀಡಿ ಕಾಪಾಡಲಿ ಎಂದು ಹಾರೈಸಿದ ಅವರು.ದಾನಿಗಳಿಗಿಂತಲೂ ಶ್ರಮಿಕರ ಪರಿಶ್ರಮ ಮಹತ್ವದ್ದಾಗಿದೆ, ಅದರಂತೆ ಪ್ರತಿಯೊಬ್ಬರು ತನು,ಮನ,ಧನ,ಗಳಿಂದ ಶ್ರಮವಹಿಸಿದಲ್ಲಿ ಮಂದಿರ ಮಠಗಳು ಅಭಿವೃದ್ದಿ ಸಾಧ್ಯವೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು,ಈ ಕಾರ್ಯಕ್ರಮದಲ್ಲಿ ಶ್ರೀ ಮರೆಮ್ಮದೇವಿ ಮಂದಿರಕ್ಕೆ ಪ್ರತಿಸಂಧರ್ಭದಲ್ಲೂ ಸಾಹಾಯ ಸಹಕಾರ ನೀಡಿತ್ತಾ ಬಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಆರಬೊಳರವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು,

ವೇದಿಕೆಯಲ್ಲಿ ಬಸವರಾಜ ಹೆರುಂಡಿ, ಸಣ್ಣ ನಿಂಗಣ್ಣ ನಾಯ್ಕೊಡಿ, ಮಾಹಾದೇವಪ್ಪ ಸಾಲಿಮನಿ, ನಗರ ಆಶ್ರೆಯ ಸಮಿತಿ ಅಧ್ಯಕ್ಷರಾದ ವಸಂತ ಸುರುಪುರಕರ್, ರುದ್ರಣ್ಣ ಚೆಟ್ರಕಿ, ನಗರಸಭೆ ಸದಸ್ಯರಾದ ಶಿವುಕುಮಾರ ತಳವಾರ, ಕಾಂಗ್ರೆಸ್ ವಕ್ತಾರರಾದ ಮಲ್ಲಣ್ಣ ಹುಳುಂಡಗೇರಿ, ದಲಿತ ಹಿರಿಯ ಮುಖಂಡರಾದ ಸೋಪಣ್ಣ ದರಿಯಾಪುರ ಭೀಮರಾಯ ದೊಡ್ಡಮನಿ, ವಿಜಯಕುಮಾರ ಎದರಮನಿ, ಸಾಹೇಬಣ್ಣ ಪರ‍್ಲೆ, ಬಸವರಾಜ ನಾಯ್ಕಲ್, ವೆಂಕಟೇಶ ಆಲೂರ, ಲಿಯಾಕತಪಾಷಾ, ಸೇರಿದಂತೆ ಅನೇಕ ಗಣ್ಯರು ಹಿರಿಯರು ಮುಖಂಡರು ಶ್ರೀ ಮರೆಮ್ಮದೇವಿ ಟ್ರಷ್ಟ ಮಂಡಳಿ ಕಾರ್ಯಕರ್ತರು ಭಾಗವಹಿಸಿದ್ದರು, ಪ್ರಥಮದಲ್ಲಿ ದಲಿತ ಮುಖಂಡರಾದ ರುದ್ರಪ್ಪ ಹುಲಿಮನಿ ಪ್ರಾಸ್ತಾಚವಿಕವಾಗಿ ಮಾತನಾಡಿದರು, ಸಮಾರಂಭದಲ್ಲಿ ಶ್ರೀ ಮರೆಮ್ಮದೇವಿ ಸೇವಾ ಸಮಿತಿ ಅಧ್ಯಕ್ಷರಾದ ಹಣಮಂತ ದೊಡಮನಿ, ಕಾರ್ಯದರ್ಶಿಗಳಾದ ಚಂದ್ರಶೇಖರ ಸಾಗರವರು ಸೇರಿದಂತೆ ಅನೆಕ ಭಕ್ತರು ಆಗಮಿಸಿದ್ದರು,

Leave a Reply

Your email address will not be published. Required fields are marked *

English Kannada