೧೪ ವರ್ಷಗಳ ಸುಧಿರ್ಘ ಸೇವೆಯಲ್ಲೆ ೫ ಸಾವಿರ ಶವಗಳಿಗೆ ಪಿ,ಎಮ್,
ಶಹಾಪುರ,
ಶಹಾಪುರ ಸರ್ಕಾರಿ ಆಸ್ಪತ್ರೆಗೆ ಡಿ,ಗ್ರೂಪ್ ನೌಕರನಾಗಿ ಬಂದು ಸರಿಸುಮಾರು ೧೪ ವರ್ಷಗಳ ಕಾಲ ದಿನದ ೨೪ ಗಂಟೆಗಳ ಕಾಲ ತನ್ನ ಕರ್ತವ್ಯನಿಷ್ಟೆಯಿಂದ ೫೦೦೦ ಸಾವಿರಕ್ಕೂ ಅಧಿಕ ಶವಗಳನ್ನು ಪೊಸ್ಟಮಾಟಮ್ ಮಾಡುವಲ್ಲಿ ವೈಧ್ಯರೊಂದಿಗೆ ಸಹಕಾರಿಯಾಗಿ, ಸಾವಿರಕ್ಕೂ ಲೆಕ್ಕಕ್ಕಿಲದ ಅನಾಥ ಶವಗಳನ್ನು ಸಂಸ್ಕಾರ ಮಾಡಿದ ಸರಳ ಜೀವಿ, ಕಾಯಕವನ್ನೆ ನೆಂಬಿದ ಕರ್ಮದಾತ, ಅಮೃತ ಪಾಟಿಲ್ ಇಂದು ಸರ್ಕಾರಿ ಆಸ್ಪತ್ರೆಯಲ್ಲಿ ಸರ್ವರ ಕಾರ್ಯಚಟುವಟಿಕೆಗಳಿಗೂ ಕೊಂಡಿಯಾಗಿದ್ದಾರೆ. ಇನ್ನೇರಡು ವರ್ಷ ಸೇವೆಯಲ್ಲಿರುವ ಈ ಅಮೃತ ಪಾಟಿಲ ರವರು ೬೮ ವಯಸ್ಸಿನ ಪ್ರಾಯದವರಾಗಿದ್ದಾರೆ. ಆಸ್ಪತ್ರೆಗೆ ಬರುವ ನಾನಾ ತರಹದ ರೋಗಿಗಳಿಗೆ ಯಾವುದೆ ಅಂಜು ಅಳಕಿಲ್ಲದೆ ಮತ್ತು ಹೇಸಿಗೆ ಸ್ವಾಭಾವ ತೊರ್ಪಡಿಸದೆ ಗಾಯಾಳುಗಳಿಗೆ ಸ್ವಚ್ಚಂದವಾಗಿ ತೊಳೆದು ಡ್ರೆಸ್ಸಿಂಗ್ ಮಾಡುತ್ತಾರೆ,ಅಫಘಾತಕ್ಕಿಡಾದ ಗಾಯಳುಗಳಿಗೂ ಅಮೃತ ಪಾಟೀಲರವರು ಮಾನಸಿಕವಾಗಿ ಸೈರ್ಯ ತುಂಬುವರೊAದಿಗೆ ಅವರಿಗೆ ತೊಳೆದು ಪ್ರಥಮ ಚಿಕಿತ್ಸಾ ಮೂರ್ತಿಗಳಾಗಿದ್ದು ಪುಣ್ಯದಕಾರ್ಯವಾಗಿದೆ, ಬಹಳ ದಿನಗಳಿಂದ ಭಾವಿ ಕೆರೆಗಳಲ್ಲಿ,ನದಿಗಳಲ್ಲಿ ಬಿದ್ದು ಕೊಳತ ಶವಗಳಿಗೆ ಸ್ಪೂರ್ತಿಯಾಗಿರುವ ಈ ಅಮೃತ ಪಾಟಿಲ ಶವವನ್ನು ಅಂದವಾಗಿ ಪಿಎಮ್, ಮಾಡಿಸಿ ಬಟ್ಟೆಯಲ್ಲಿಟ್ಟು ಅಚ್ಚಕಟ್ಟಾಗಿಸುತ್ತಾರೆ,ಮತ್ತು ಶಸ್ತçಚಿಕಿತ್ಸೆಗೆ ವೈಧ್ಯರು ಮಾಡುವಾಗ ಈ ಅಮೃತ ಪಾಟಿಲ ಸಂಪೂರ್ಣ ಜವಾಬ್ದಾರಿಯಾಗಿ ಕರ್ತವ್ಯ ನಿರ್ವಹಣೆ ಮಾಡುವದರೊಂದಿಗೆ ಇಲ್ಲಿನ ಎಲ್ಲ ವೈಧ್ಯರ ಮತ್ತು ಸಿಬ್ಬಂದಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ, ಶವಶರೀರ ಸೇವೆಯನ್ನು ಪರಮಾತ್ಮನ ಕರುಣೆ ಎಂದು ನೆಂಬಿದ ಅಮೃತ ಪಾಟೀಲರವರು ಆಹೋರಾತ್ರಿಯಲ್ಲೂ ತಮ್ಮ ಸೇವೆಯನ್ನು ಆರೋಗ್ಯ ಸೇವೆಗೆ ಮುಡುಪಾಗಿಸಿದ್ದು ಅವರ ದೃಡ ಸಂಕಲ್ಪಗಳಿಗೆ ಸಾಕ್ಷಿಯಾಗಿವೆ, ಸಮಯಕ್ಕನುಸಾರವಾಗಿ ಮನೆಯಲ್ಲಿನ ಮಕ್ಕಳ ಬದುಕಿನ ಕಾಳಜಿ ಮತ್ತು ಸಂಸಾರದಡೆಗೆ ಗಮನ ನೀಡದೆ ಸೇವೆಗೆ ಹಾಜಿರಾದ ಸಾಕಷ್ಟು ನಿರ್ಧೇಶನಗಳಿವೆ, ಇವರ ಸೇವೆಯನ್ನು ಪರಿಗಣಿಸಿ ಸೆ,೧೭ರಂದು ನಡೆಯುವ ಹೈ,ಕ,ವಿಮೋಚನಾ ದಿನಾಚರಣೆಯಂದು ಅಮೃತ ಪಾಟೀಲರನ್ನು ತಾಲುಕಾ ಜಿಲ್ಲಾ ಆಡಳಿತ ಅವರಿಗೆ ಗೌರವಿಸಿ ಸನ್ಮಾನಿಸಿ ಗೌರವಿಸಲಿ ಎನ್ನವದೆ ಜನಮನದಾಸೆಯಾಗಿದೆ.
ಶ್ರೀಮತಿ ಮೈನಾಬಾಯಿ ಮಲ್ಲಿಕಾರ್ಜುನ ಕಂಚಿ ಸಾಹು ದಂಪತಿಗಳರವರ ಮಗನಾಗಿ ಮಾ,೮ ೧೯೬೮ರಲ್ಲಿ ಅಮೃತ ಪಾಟೀಲ ಶಹಾಪುರ ತಾಲುಕಿನಮದ್ದರ್ಕಿ ಗ್ರಾಮದ ರೈತಾಪಿ ಮನೆತನದಲ್ಲಿ ಜನಿಸಿದರು, ಎಸ್,ಎಸ್,ಎಲ್,ಸಿಯವರೆಗಿನ ಅಭ್ಯಾಸಮಾಡಿದ ಅಮೃತ ಪಾಟೀಲ್,ಮಾ,೧೯ ೧೯೯೨ರಲ್ಲಿ ಅರೋಗ್ಯ ಸೇವೆಗೆ ಸೇರ್ಪಡೆಗೊಂಡರು, ಪ್ರಥಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಚುಂಚಕುಪ್ಪೆ ಬೆಂಗಳೂರಿನಲ್ಲಿ ಸೇವೆ ಮಾಡಿಕೊಂಡು ಆ,೧೫ ೨೦೧೦ರಂದು ಶಹಾಪುರ ಸರ್ಕಾರಿ ಆಸ್ಪತ್ರೆಗೆ ವರ್ಗಾವಣೆಯಾಗಿ ಹಾಜರಿಯಾದರು, ಅಂದಿನಿAದ ಇಂದಿನವರೆಗೂ ೧೪ ವರ್ಷಗಳ ಕಾಲ ಸುದೀರ್ಘತೆಯಲ್ಲಿ ಅಮೃತ ಪಾಟೀಲರವರು
ಏರಡು ಬಾರಿ ಡಿ ಗ್ರೂಪ್ ನಿಂದ ಪದನ್ನೋದನ್ಮತಿ ಬಂದರೂ ಬೇಡವೆಂದು ನಿರಾಕರಿಸಿದ ಅಮೃತ ಪಾಟಿಲ ಇನ್ನೂ ಡಿ ಗ್ರೂಪ್ ನೌಕರರನಾಗಿಯೇ ನಿವೃತ್ತಿ ಜೀವನ ಭಯಸಿದ್ದಾರೆ, ಓರ್ವ ಗಂಡು ಮಗನಾಗಿದ್ದು ಅವರು ಸಹ ಆರೋಗ್ಯ ಇಲಾಖೆಯಲ್ಲಿ ಸೇವೆಯಲ್ಲಿದ್ದಾರೆ, ಇಬ್ಬರು ಹೆಣ್ಣು ಮಕ್ಕಳಿದ್ದು ಒಬ್ಬರು ಶಿಕ್ಷಣ ಇಲಾಖೆಯಲ್ಲಿದ್ದಾರೆ, ಮತ್ತೊಬ್ಬ ಮಗಳು ಇಂಜಿನಿಯರ್ ಪದವಿಧರರಾಗಿದ್ದಾರೆ, ಇವರ ಸೇವೆಯನ್ನು ಸರ್ಕಾರ ಗಣನೆಗೆ ತೆಗೆದುಕೊಂಡು ಇಂತಹಸರ್ಕಾರಿ ಡಿ ಗ್ರೂಪ್ ನೌಕರರಿಗೆ ಗೌರವಿಸುವದು ನಮ್ಮೇಲ್ಲರ ಆಧ್ಯ ಕರ್ತವ್ಯಗಳಾಗಿವೆ ಎನ್ನುವದು ಪತ್ರಿಕೆಯ ಅಭಿಮತವಾಗಿದೆ,