ಶಹಾಪುರ.
ಕಳೆದ ಮೂರು ದಿನಗಳಿಂದಲೂ ದಾರಕಾರವಾಗಿ ಸುರಿಯುತ್ತಿರುವ ಮಳೆಗೆ ಶಹಾಪುರ ನಗರದ ಶ್ರೀ ಬಸವೇಶ್ವರ ವೃತ್ತದಿಂದ ಯಾದಗಿರಿ ಹಳ್ಳದವರೆಗಿನ ಡಸ್ಟ ಬಳಿಕೆ ಕಲಬೇರಿಕೆ ಚರಂಡಿ ಕಾಮಗಾರಿ ಕೊಚ್ಚಿಕೊಂಡು ಹೋಗಿದೆ.ಕೆಕೆಆರ್,ಡಿ,ಬಿ ಅನುಧಾನದಲ್ಲಿ ನಿರ್ಮಾಣಗೊಳ್ಳುತ್ತಿರುವ, ಈ ಕಾಮಗಾರಿ ಅನುಷ್ಠಾನದ ಯಾದಗಿರಿ ನಿರ್ಮಿತಿ ಕೇಂದ್ರದ ಕಳಪೆ ಕಾಮಗಾರಿಗಳಿಗೆ ಇದು ಮೂಕ ಸಾಕ್ಷಿಯಾಗಿದೆ, ಕಳೆದ ವಾರದ ಹಿಂದೆ ಕಲ್ಲಿನ ಡಷ್ಟ ಬಳಿಕೆ ಮಾಡಿಕೊಂಡು ಈ ಚರಂಡಿ ಕಾಮಗಾರಿ ಮಾಡಲಾಗುತ್ತಿತ್ತು, ಹಾಡ ಹಗಲಲ್ಲೆ ಈ ಕಳಪೆ ಮಾಡುತ್ತಿದ್ದ ಈ ಕಾಮಗಾರಿ ಕುರಿತು ಪತ್ರಿಕೆ ಪ್ರಕಟಣೆ ಮಾಡಿದಾಗ ಮರಳು ಗುಡ್ಡೆ ಹಾಕಿದ್ದು ಕಂಡು ಬಂದಿತ್ತು, ಲಕ್ಷಾಂತರ ರೂ,ಗಳನ್ನು ವೆಚ್ಚ ಮಾಡಿ ಸಾರ್ವತ್ರಿಕ ಅನೂಕೂಲಕ್ಕಾಗಿ ನಿರ್ಮಿಸಲಾಗುತ್ತಿದ್ದ ಈ ಕಾಮಗಾರಿ ಹಂತದಲ್ಲೆ ಕೊಚ್ಚೊಕೊಂಡು ಹೋಗಿದ್ದು ನಿರ್ಮಿತಿ ಕೇಂದ್ರದ ಇಂಜಿನಿಯರ್ ಮೂಲ ಕಾರಣಿಕರ್ತರಾಗಿದ್ದು ಅದೋಗತಿ ಅವ್ಯವಸ್ಥೆಗೆ ಕಾರಣವೆಂದು ಸರ್,ಎಮ್, ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಪ್ರದೀಪ ಅಣಿಬಿ ಆರೋಪ ವ್ಯಕ್ತಪಡಿಸಿದ್ದಾರೆ. ಕಳಪೆ ಕೆಲಸ ಮಾಡಿಕೊಂಡು ಸರ್ಕಾರಿ ಅನುಧಾನ ದುರ್ಭಳಿಕೆ ಮಾಡುವ ನಿರ್ಮಿತಿ ಕೇಂದ್ರದ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ, ಅಲ್ಲದೆ ನಿರ್ಮಿತಿ ಕೇಂದ್ರವನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.ಈ ಕುರಿತು ಗುಣಮಟ್ಟದ ಕಾಮಗಾರಿ ತನಿಖೆಗೆ ಲೋಕಾಯುಕ್ತರಿಗೆ ದೂರು ನೀಡಲಾಗುತ್ತದೆ ಎಂದು ಅವರು ತಿಳಿಸಿದರು, ಅಲ್ಲದೆ ಅನುಷ್ಠಾನದ ಏಜನ್ಸಿ ಯುರುದ್ದ ಕಾನೂನು ಕ್ರಮ ಕೈಗೊಂಡು ಸಂಧAಧಪಟ್ಟ ಇಂಜಿನಿಯರ್ ಅಮಾನತ್ ಮಾಡಲು ಅವರು ಒತ್ತಾಯಿಸಿದರು,