ಮೇ ೨೫ರಂದು ಇಬ್ರಾಹಿಂಪುರದಲ್ಲಿ ಕಾವ್ಯಮತ್ತು ಕಥಾ ಕಮ್ಮಟ!


ಶಹಾಪುರ,
ಬುದ್ದ ಬಸವ, ಡಾ,ಬಿ,ಆರ್,ಅಂಬೇಡ್ಕರವರ ಜಯಂತಿ ಅಂಗವಾಗಿ ತಾಲುಕಾ ಕಸಾಪ ಆಶ್ರೆಯದಲ್ಲಿ ಮೇ. ೨೫ ಮತ್ತು ೨೬ರಂದು ತಾಲುಕಿನ ಇಬ್ರಾಹಿಂಪುರ ಗ್ರಾಮದ ಶ್ರೀ ಸಾಯಿ ಮಂದಿರದಲ್ಲಿ ಕಾವ್ಯ ಮತ್ತು ಕಥಾ ಕಮ್ಮಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಅಧ್ಯಕ್ಷರಾದ ಡಾ, ರವಿಂದ್ರನಾಥ ಹೋಸಮನಿ ಪತ್ರಿಕೆಗೆ ತಿಳಿಸಿದ್ದಾರೆ. ನಾಡಿನ ಹಿರಿಯ ಸಾಹಿತಿಗಳಾದ ಡಾ, ಅರುಣ ಜೋಳದ ಕೂಡ್ಲಿಗಿ,ಡಾ, ವಿಕ್ರಮ ವಿಸಾಜಿ ಮಹಿಪಾಲರಡ್ಡಿ ಮುನ್ನೂರ,ಪ್ರೋ.ಕೃಷ್ಣ ನಾಯಕ, ಡಾ, ಕಾವ್ಯಶ್ರೀ, ಮಾಹಾಗಾಂವ್, ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿಲ್ಲಿದ್ದಾರೆ. ಸದರ ಕಮ್ಮಟದಲ್ಲಿ ಕವಿಗಳು, ಸಾಹಿತ್ಯಾಶಕ್ತರು ಸದುಪಯೋಗಪಡಿಸಕೊಳ್ಳಬೇಕು ಎಂದು ಅವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು ಕಸಾಪ ಶಹಾಪುರ ಮೋ,೯೯೦೨೫೭೦೦೩೭, ರಾಘವೇಂದ್ರ ಹಾರಣಗೇರಾ, ಗೌರವ ಕಾರ್ಯದರ್ಶಿಗಳು, ಮೋ.-೯೭೪೦೭೨೨೪೩೧, ಸುರೇಶ ಅರುಣಿ ಮೋ, ೯೯೦೧೫೫೯೮೭೩ ಇವರನ್ನು ಸಂಪರ್ಕಿಸಲು ಕೊರಲಾಗಿದೆ,

Leave a Reply

Your email address will not be published. Required fields are marked *

English Kannada