ಶಹಾಪುರವಾಣಿ
ಬೈಕ ಮತ್ತು ಟಂಟಂ ನಡುವೆ ಮಖಾಮುಖಿ ಡಿಕ್ಕಿ ಹೊಡೆದು ಪರಿಣಾಮವಾಗಿ ಗ್ರಾ.ಪಂ.ಸದಸ್ಯರಾಗಿದ್ದ ಸುಭಾಶ ಅಲಿಯಾಸ್ ಸುಬ್ಯಾ.ತಂ.ಚಂದಪ್ಪ ಚೌವಾಣ್ (70) ಸ್ತಳದಲ್ಲೆ ಮೃತಪಟ್ಟ ಘಟನೆ ಶಹಾಪುರ ತಾಲುಕಿನ ಕನ್ಯಾಕೊಳೂರ ಸಮೀಪದ ಬೆನಕನಳ್ಳಿ ಬಳಿ ನೆಡದಿದೆ.ಮೃತ ಸುಭಾಶ
ತನ್ನ ದೈನಂದಿನ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಮರಳಿ ಸ್ವಾಗ್ರಾಮದತ್ತ ಬೈಕನಲ್ಲಿ ಹೊಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.ಮೃತ ಸುಭಾಶ ಅಲಿಯಾಸ್ ಸುಭ್ಯಾ ಕನ್ಯಾಕೊಳೂರ ಗ್ರಾ.ಪಂ.ಸದಸ್ಯನಾಗಿದ್ದನು.ಎಂದು ತಿಳಿದು ಬಂದಿದೆ.ಸುಭಾಶ ಅಲಿಯಾಸ್ ಸುಭ್ಯಾ ಎನ್ನವರು ಕನ್ಯಾಕೊಳೂರ ಜಾಪ್ನಾನಾಯಕ ತಾಂಡಾ ನಿವಾಸಿಯಾಗಿದ್ದ.ಸುಭ್ಯಾ ಎಂದು ಖ್ಯಾತಿ ಪಡೆದಿದ್ದ ಇತನು ಕುರಿಗಳಿಗೆ ಸಿಂಹಸಪ್ನವಾಗಿದ್ದ.ಈ ಎಲ್ಲಾ ಕೆಲಸಗಳಿಗೆ ವಿಧಾಯ ಹೇಳಿ ಸಾಮಾಜಿಕ ಚಿಂತನೆಗಳನ್ನು ಅಳವಡಿಸಿಕೊಂಡು 5 ವರ್ಷಗಳ ಕಾಲ ಕನ್ಯಾಕೊಳೂರ ಗ್ರಾ.ಪಂ.ಸದಸ್ಯನಾಗಿ ಜನಪರ ಕಾರ್ಯವನ್ನು ಮಾಡಿದ್ದ.ಎಂದು ಹೆಳಲಾಗಿದೆ.ಅಪಘಾತದಲ್ಲಿ ಮೃತ ಪ್ರಕರಣ ಶಹಾಪುರ ಪೋಲಿಸ್ ಠಾಣೆಯಲ್ಲಿ ದಾಖಲು ಮಾಡಿಕೊಳ್ಳಲಾಗಿದೆ.