ಶಹಾಪೂರವಾಣಿ-8 ಜೂ.ನಿನ್ನೆ ಹೃದಾಯಘಾತದಿಂದ ನಿಧನ ಹೊಂದಿದ ನಟ ಚಿರಂಜೀವಿ ಸರ್ಜಾ ಅವರಿಗೆ ಸುರಪೂರ ತಾಲೂಕಿನ ಮಾಚಗುಂಡಾಳ ಗ್ರಾಮದಲ್ಲಿ.ಚಿ.ಸೌ.ಕನ್ಯಾಕುಮಾರಿ ಚಿತ್ರತಂಡ ಹಾಗೂ ಅಭಿಮಾನಿಗಳು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ಕನ್ಯಾಕುಮಾರಿ ಸಿನಿಮಾದ ಯುವ ನಾಯಕ ರಾಘವೇಂದ್ರ ಮಾಚಗುಂಡಾಳ ಮಾತನಾಡಿ ಸುಮಾರು 22 ಚಿತ್ರಗಳಲ್ಲಿ ವಿಭಿನ್ನವಾಗಿ ನಟಿಸಿ ಅಭಿಮಾನಿಗಳನ್ನು ಸಂಪಾದಿಸಿದ್ದರು ಯಾವಾಗಲೂ ಲವಲವಿಕೆಯಿಂದ ಇರುತ್ತಿದ್ದ ಚಿರೂ ಅವರು ಚಿಕ್ಕ ವಯಸ್ಸಿನಲ್ಲಿ ಅವರ ಸಾವನ್ನು ಯಾರು ನಿರೀಕ್ಷಿಸಿರಲಿಲ್ಲ ನಮಗೆ ಸುದ್ದಿ ಕೇಳಿ ನಂಬಲಕ್ಕೂ ಒಂದು ಕ್ಷೇಣ ಆಗಲಿಲ್ಲ .ಅವರ ಸಾವಿನಿಂದ ಸ್ಯಾಂಡಲ್ ವುಡ್ ಗೆ ತುಂಬಲಾರದ ನಷ್ಟವಾಗಿದೆ ಆ ದೇವರು ಚಿರು ಅವರ ಕುಟುಂಬಕ್ಕೆ ಧೈರ್ಯ ಕೊಡುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ ಎಂದರು.
ಡಾ; ಶರಣು ವನದುರ್ಗ ಅಯ್ಯಣ್ಣ ಬೆಲ್ಲದ್ ಸಂತೋಷ್ ಸಾಹುಕಾರ ದೇವು ಪೂಜಾರಿ ಶಿವು ಪ್ಯಾಟಿ ದೇವು ಕೋಳೂರ ಮಳು ಕಾಡ್ಮಗೇರಿ ರಾಜು ಪೂಜಾರಿ ಮತ್ತು ಗ್ರಾಮಸ್ಥರು ಹಾಗೂ ಚಿರು ಅಭಿಮಾನಿಗಳಿದ್ದರು.