ಶಹಾಪುರವಾಣಿ
ಪ್ರಮಾಣಿಕ ವ್ಯಕ್ತಿತ್ವದ, ಮೃದು ಸ್ವಾಭಾವದ ಹೋರಾಟಗಾರ.ಕಾಯಕನಿಷ್ಢೆ, ಪಕ್ಷದ ತತ್ವ ಸಿದ್ದಾಂತಗಳ ಕಟ್ಟಾಳು,ಪ್ರಗತಿಪರ ರೈತ ಹೊರಾಟಗಾರ, ಕಾಂಗ್ರೆಸ್ ಮುಖಂಡರಾದ ಶರಣಪ್ಪ ಸಲಾದಪೂರವರಿಗೆ ರಾಜ್ಯ ವಿಧಾನ ಪರಿಷತ್ ಗೆ ನೇಮಕ ಮಾಡಬೇಕು,.ಎಂದು ಶಹಾಪುರ ತಾ,ಪಂ, ಮಾಜಿ ಸದಸ್ಯರು ಹಾಗೂ ಯಾದಗಿರಿ ಮತಕ್ಷೇತ್ರದ ಕಾಂಗ್ರೆಸ್ ಯುವ ಮುಖಂಡರಾದ ಭೀಮರಾಯ ಬಾರಿಗಿಡರವರು ಮಾಜಿ ಕೆಂದ್ರ ಮಂತ್ರಿ, ಲೋಕಸಭೆ ವಿರೋಧಪಕ್ಷದ ಮಾಜಿ ನಾಯಕ, ಹಾಲಿ ರಾಜ್ಯಸಭೆಗೆ ಪ್ರವೇಶ ಮಾಡುವ ಹೈದ್ರಾಬಾದ ಕರ್ನಾಟಕದ ಕಣ್ಮಣಿ, ಡಾ,ಮಲ್ಲಿಕಾರ್ಜುನ ಖರ್ಗೆಜೀಯವರಿಗೆ ಮನವಿ ಮಾಡಿಕೊಂಡಿದ್ದಾರೆ.
ಅವರು ಶಹಾಪುರವಾಣಿಗೆ ಮಾತನಾಡಿ ಜನಮಾನಸದಲ್ಲಿ ಹುಸಿರಾಗಿರುವ ಡಾ,ಖರ್ಗೆಜೀಯವರಿಗೆ ಸಂಸತ್ ಪ್ರವೇಶ ಮಾಡುತ್ತಿರುವದಕ್ಕೆ ಹೃದಯಸ್ಪರ್ಶಿ ಅಭಿನಂಧನೆ ಸಲ್ಲಿಸಿದ ಬಾರಿಗಡಿರವರು ಪತ್ರಿಕೆಯೊಂದಿಗೆ ಪ್ರಸ್ತಾಪ ಮಾಡುತ್ತಾ ಶರಣಪ್ಪ ಸಲಾದಪುರವರು ಕಳೆದ ನಾಲ್ಕಾರು ದಶಕಗಳಿಂದ ಸಗರ ನಾಡಿನೂದ್ದಕ್ಕೂ ರೈತರಿಗೆ ತಮ್ಮ ಹೋರಾಟ ಮೀಸಲಾಗಿರಿಸಿಕೊಂಡು ನಾನಾ ಯೋಜನೆಗಳ ಜಾರಿಗಾಗಿ ಅವಿರತ ಹೋರಾಟ ಮಾಡುವದರೊಂದಿಗೆ ರೈತರ ಹಿತಕಾಪಾಡಲು ಶ್ರಮಿಸಿದರು, ಅನೇಕ ಪ್ರಗತಿಪರ ವಿಚಾರಗಳನ್ನು ಮೈಗೂಡಿಸಕೊಂಡು ಬಂದ ಶರಣಪ್ಪ ಸಲಾದಪುರವರು ಸಗರ ನಾಡಿನಲ್ಲಿ ರೈತ ಮುಖಂಡರೆಂದು ಖ್ಯಾತಿ ಪಡೆದರು, ಜಾತಿ ಧರ್ಮ ಸಂಕುಲಕ್ಕೆ ಅಂಟಿಕೊಳ್ಳದೆ, ತಳಮಟ್ಟದ ಜನಸಮುದಾಯದ ಹಿತಚಿಂತೆನೆಗಳ ಮುಖಾಂತರ ಜನಮಾನಸದಲ್ಲಿ ಹೆಸರು ಮಾಡಿದ ಸಲಾದಪುರವರು ರೈತ ಶಕ್ತಿಯಾಗಿ ಬೇಳೆದರು, ತಮ್ಮ ಹೋರಾಟದ ಮೈಲುಗಲ್ಲುಗಳ ರಹದಾರಿಗಳೊಂದಿಗೆ ರಾಜಕೀಯಕ್ಕೆ ದುಮುಕಿದ ಶರಣಪ್ಪ ಸಲಾದಪುರವರು ಕಾಂಗ್ರೆಸ್ ಸೇರಿದರು, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೇಲುವಿಗಾಗಿ ಹಗಲೀರುಳು ಶ್ರಮಿಸಿದರು, ಅವರ ಪಕ್ಷ ನಿಷ್ಠೆ ,ಜನಪರ ವಿಚಾರಗಳು ಇಂದಿಗೂ ಜನಮನಾದಾಳದಲ್ಲಿ ಹಸಿರಾಗಿವೆ,ಸಲಾದಪುರವರ ವಿಚಾರದಾರೆಗಳು ರೈತರ ಯುವಕರಿಗೆ ಸೂಕ್ತ ಮಾರ್ಗದರ್ಶಕ ಸೂತ್ರಗಳಾಗಿವೆ,ಪ್ರಗತಿಪರ ವಿಚಾರವಾದಿಗಳಾದ ಶರಣಪ್ಪ .ಸಲಾಪಪೂರವರಿಗೆ ವಿಧಾನಪರಿಷತ್ ಸ್ಥಾನಕ್ಕೆ ನೇಮಕ ಮಾಡಬೇಕು, ಎಂದು ಭೀಮರಾಯ ಬಾರಿಗಿಡರವರು ಕಾಂಗ್ರೆಸ್ ರಾಜ್ಯ ನಾಯಕರಲ್ಲಿ ಹಾಗೂ ಡಾ,ಖರ್ಗೆಜೀಯವರಿಲ್ಲಿ ಕಳ ಕಳೆಯ ಮನವಿ ಮಾಡಿಕೊಂಡಿದ್ದಾರೆ,