ಜನಾನಾಯಕ ಡಾ,ಖರ್ಗೆಜೀಗೆ ರಾಜ್ಯಸಭೆ ಪ್ರವೇಶಕ್ಕೆ ಹರ್ಷ

ಶಹಾಪುರವಾಣಿ

ಹೈದ್ರಾಬಾದ ಕರ್ನಾಟಕದ ದೀಮಂತ ರಾಜಕಾರಣಿ ಅಭಿವೃದ್ದಿ ನೇತಾರ, ದೀನ ಬಂಧು.ಕೆಂದ್ರದ ಮಾಜಿ ಮಂತ್ರಿ ಸಂಸತ್ ವಿರೋಧಪಕ್ಷದ ನಾಯಕ, ಡಾ, ಮಲ್ಲಿಕಾರ್ಜುನ ಖರ್ಗೆಯವರನ್ನು ಕಾಂಗ್ರೆಸ್ ಮತ್ತೆ ರಾಷ್ಟ್ರ ರಾಜಕಾರಣಕ್ಕೆ ಕೈ ಮಾಡಿ ಕರೆದಿದೆ, ಕಾಂಗ್ರೆಸ್ ಪುನಃ ಡಾ,ಖರ್ಗೆಜೀಯವರನ್ನು ಸಂಸತ್ ಭವನಕ್ಕೆ ಪ್ರವೇಶ ನೀಡಿದ್ದಕ್ಕೆ ಶಹಾಪುರ ಯುವ ಮುಖಂಡ ಶಿವು ಆಂದೊಲಾ ರವರು ಹರ್ಷ ವ್ಯಕ್ತಪಡಿಸಿ ಅಧಿನಾಯಕಿ ಶ್ರೀಮತಿ ಸೋನಿಯಾಜೀಯವರನ್ನು ಅಭಿನಂಧಿಸಿದ್ದಾರೆ, ದಕ್ಷಿಣ ಭಾರತದಲ್ಲಿ ತಮ್ಮದೆ ಚಾಪೂ ಮೂಡಿಸಿದ ಡಾ,ಖರ್ಗೆಜೀಯವರು ಅಧಿಕಾರವನ್ನು ಸರ್ವಜನಹಿತಕ್ಕಾಗಿ ಮುಡುಪಾಗಿಸಿದರು, ಜನಪರ ಕಾರ್ಯಗಳನ್ನು ಮಾಡುತ್ತಾ ಜನಮಾನಸದಲ್ಲಿ ಹೆಸರು ಮಾಡಿದರು.ಸಮಾಜಿಕ ಹಿತ ಚಿಂತನೆಗಳಿಂದ ಪ್ರಗತಿಪರ್ವದ ಹಾದಿಯತ್ತ ಸಾಗಿ,ಹೈದ್ರಬಾದ ಕರ್ನಾಟಕದಲ್ಲಿ ಅಚ್ಚಳಿದಂತ ಅನೇಕ ಕಾರ್ಯಯೊಜನೆಗಳನ್ನು ಜಾರಿಗೊಳಿಸಿ ಕಲಂ 371 ಜೆ,ಜಾರಿಗೊಳಿಸಿದ ಮಾಹಾಮೇದಾವಿ ರಾಜಕಾರಣಿಯಾದರು. ಡಾ ಖರ್ಗೆಜೀಯವರಿಗೆ ಮತ್ತೊಮ್ಮೆ ದೆಹಲಿಯ ರಾಷ್ಟ್ರೀಯ ರಾಜಕೀಯ ಕೈ ಹಿಡಿದು ಕರೆದಿದೆ, ಮಗದೊಮ್ಮೆ ದೇಶಾಭಿವೃದ್ದಿಗೆ ಪುನಾರಾಗಮನವಾಗುತ್ತಿರುವ ಡಾ,ಖರ್ಗೆಜೀಯವರ ಗದ್ದುಗೆ ದೇಶದ ಪ್ರಗತಿಗೆ ಬೇಳಕಾಗುವದರಲ್ಲಿ ಸಂದೆಹವಿಲ್ಲದಂತಾಗಿದ್ದು ನಾವೆಲ್ಲರೂ ಸಂಸತ್ ಪ್ರವೇಶ ಮಾಡುವ ಮಾಹಾನ್ ನಾಯಕ ಡಾ,ಖರ್ಗೆಜೀಯವರನ್ನು ಸ್ವಾಗತಿಸಿ ಅಭಿನಂದಿಸೋಣ ಎನ್ನವದು ನನ್ನಾಭಿಪ್ರಾಯ.ಎಂದು ಶಹಾಪುರವಾಣಿಯೊಂದಿಗೆ ಹರ್ಷದ ಮಾತುಗಳನ್ನು ಹಂಚಿಕೊಂಡಿದ್ದಾರೆ,

Leave a Reply

Your email address will not be published. Required fields are marked *

English Kannada