ಶಹಾಪುರವಾಣಿ
ಕೊರಾನ್ ವೈರಸ್ ಆತಂಕದಲ್ಲಿ ಸಿಲುಕಿದ ಸಾವಿರಾರು ರೈತರು ಲಾಕ್ ಡೌನ್ ಜಾರಿಯಿಂದ ಬೇಳೆದ ಹತ್ತಿಯನ್ನು ಮನೆಯಲ್ಲಿ ಕೂಡಿಟ್ಟುಕೊಂಡು ತಿವೃ ಸಂಕಷ್ಟದಲ್ಲಿದ್ದಾಗ ಕೆಂದ್ರ ಸರ್ಕಾರ ಭಾರತೀಯ ಹತ್ತಿ ನಿಗಮ ಕೆಂದ್ರ ದೆಹಲಿ [ಐಸಿಸಿ]ಯವರು ರೈತರ ಹತ್ತಿ ಬೇಳೆಯನ್ನು ಖರಿದಿಸಿಕೊಳ್ಳಲು ಮುಂದಾಗಿದ್ದು ಸ್ವಾಗತರ್ಯದ ಸಂಗತಿಯಾದರೆ?ಹತ್ತಿ ಖರಿದಿಯಲ್ಲಿ ರೈತರಿಂದ ಹಣ ವಸೂಲಿ ಮಾಡಿಕೊಳ್ಳುವ ದಲ್ಲಾಳಿ ಸಂಖ್ಯೆ ಹೆಚ್ಚಾಗುತ್ತಿದೆ, ಸಾಲ ಸೂಲ ಮಾಡಿಕೊಂಡು ಹತ್ತಿ ಬೇಳೆದ ರೈತರು ತಮ್ಮ ಬೇಳೆ ಮಾರಾಟ ಮಾಡಿಕೊಳ್ಳಲು ಮದ್ಯವರ್ತಿ ದಲ್ಲಾಳಿಗಳ ಅಗತ್ಯವೆ? ಸರ್ಕಾರ ಕುರುಡ ನೆಡೆ ರೈತರಿಗೆ ಮಾರಕವಾಗುತ್ತಿದೆ ಎಂದು ಪ್ರಗತಿಪರ ರೈತ ಚಿಂತಕ ರೈತ ಪರ ಹೊರಾಟಗಾರ ಶರಣಪ್ಪ ಸಲಾದಪುರವರು ಮನದಾಳದ ಆರೋಪ ವ್ಯಕ್ತಪಡಿಸಿದರು, ಅವರು ಶಹಾಪುರವಾಣಿಯೊಂದಿಗೆ ಮಾತನಾಡಿ ರೈತರು ತಮ್ಮ ಬೆಳೆಯನ್ನು ಮಾರಾಟಕ್ಕಾಗಿ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಯಲ್ಲಿ ನೊಂದಣಿ ಮಾಡಿಕೊಂಡು ಚೀಟಿ ಪಡೆಯಬೇಕು, ಈ ಚೀಟಿಯನ್ನೆ ಪಡೆದುಕೊಳ್ಳಲು ಹರಸಾಹಸ ನೆಡೆಯುತ್ತಿದೆ, ಅದಕ್ಕಾಗಿ ಇಲ್ಲಿನ ಚೀಟಿ ಪಡೆಯುವದಕ್ಕಾಗಿ ದಲ್ಲಾಳಿಗಳ ದಂಡು ನೆರೆದಿರುತ್ತದೆ, ಎಪಿಎಮ್,ಸಿ, ಅಧಿಕಾರಿಗಳು ನೇಪಕ್ಕಾಗಿ ರೈತರಿಂದ ಸಾಲುಗಟ್ಟಿಸಿದರೆ ದಲ್ಲಾಳಿಗಳಿಂದ ಹಣ ಪಡೆದುಕೊಂಡು ಒಳಚೀಟಿ ದಂದೆಗಳು ಹೆರಳವಾಗಿ ನೆಡೆಯುತ್ತಿವೆ,ಎನ್ನವದು ಕೇಳಿ ಬರುತ್ತಿದ್ದು ಸರ್ಕಾರ ಮೌನವೆ?ಅಧಿಕಾರಿಗಳ ಈ ಕಾರ್ಯವೈಖರಿ ಅಸಮಪರ್ಕವಾಗಿದೆ,ಎಂದು ಸಲಾದಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಈ ಅನಿಷ್ಟತೆಯ ಗೊಳಿನಲ್ಲಿ ಚೀಟಿ ಪಡೆದಿಕೊಂಡು ಹತ್ತಿ ಮಾರಾಟ ಕೆಂದ್ರಕ್ಕೆ ಹೊಯ್ಯುತ್ತಿದ್ದಲ್ಲಿ ಅಲ್ಲಿನ ಐಸಿಸಿ ಅಧಿಕಾರಿಗಳು ಗುಣಮಟ್ಟವಿಲ್ಲವೆಂದು ವಾಪಾಸ್ ಕಳಿಸುವದು ನ್ಯಾಯವೆ? ಬೆಳೆದ ೀ ಬೇಳೆ ಖರಿದಿಸುವವರಾರು? ಎನ್ನವ ಪಶ್ನೆಯಲ್ಲಿ ರೈತರು ನರಳುತ್ತಿದ್ದಾರೆ, ರೈತರಿಂದ ಶೋಷಣೆ ಮಾಡುವ ದಲ್ಲಾಳಿಗಳನ್ನು ಹಾಗೂ ನಡುವಂತರದಲ್ಲಿ ದಲ್ಲಾಳಿಗಳಿಂದ ಚೀಟಿಗೆ ಅವಕಾಶ ಮಾಡುವ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳವದು ಅನಿವಾರ್ಯವಾಗಿದ್ದು ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು ಎಂದು ಮುಖಂಡ ಶರಣಪ್ಪ ಸಲಾದಪುರ ಆಗ್ರಹಿಸಿದರು,