ದಲಿತ ಅಧಿಕಾರಿ ಅಮಾನತ್ತು ಜಾತಿ ರಾಜಕೀಯ ಪ್ರೇರಿತ-ಆರೋಪ.


ಶಹಾಪುರ,
ದಲಿತ ನೌಕರ ಎನ್ನುವ ಮೂಲ ಕಾರಣಕ್ಕೆ ಶಹಾಪುರ ನಗರ ಯೋಜನಾಭಿವೃದ್ದಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು,ಹಾಗೂ ಸಾಹಾಯಕ ನಿರ್ಧೆಶಕರಾದ, ತಿಪ್ಪಣ್ಣ ಮಾಂಗ್ ರವರನ್ನು ಯಾವುದೆ ಪೂರ್ವ ತನಿಖೆಗಳಿಲ್ಲದೆ ಜಾತಿ ವ್ಯವಸ್ಥೆಯಿಂದ ಸ್ಥಳಿಯ ರಾಜಕೀಯ ಪ್ರೇರಿತ ಶಿಫಾರಸ್ಸಿನಂತೆ, ಹಾಗೂ ನೋಟಿಸ್ ಜಾರಿಗೊಳಿಸದೆ ಏಕಾಎಕಿ ಅಮಾನತ್ತು ಮಾಡಿದ್ದು ಖಂಡನೀಯವಾಗಿದೆ ಎಂದು ಸಮಾಜಿಕ ಕಾರ್ಯಕರ್ತರಾದ ಸಿದ್ದು ಪಟ್ಟೆದಾರವರು ಆರೋಪ ವ್ಯಕ್ತಪಡಿಸಿದ್ದಾರೆ. ಅವರು ನಗರ ಯೋಜನಾ ಪ್ರಾಧಿಕಾರ ಆಯುಕ್ತರಿಗೆ ನಗರಾಭಿವೃದ್ದಿ ಸಚಿವರಿಗೆ ಹಾಗೂ ರಾಜ್ಯಪಾಲರಿಗೆ ದೂರುಯೊಂದನ್ನು ನೀಡಿ, ಕಳೆದ ದಿ,18-8-2023ರಿಂದ ಶಹಾಪುರ ನಗರ ಯೋಜನಾ ಪ್ರಾಧಿಕಾರ ಕರ್ತವ್ಯ ಸಾಹಾಯಕ ನಿರ್ಧೆಶಕರೆಂದು ಕಾರ್ಯನಿರ್ವಹಿಸುತ್ತಿದ್ದಾರೆ, ಅವರು ಬಂದ ಮೇಲೆ ನಗರ ಯೋಜನಾ ಪ್ರಾಧಿಕಾರದಲ್ಲಿ ಯಾವುದೆ ಕಡತಗಳು ಪೆಂಡ್ಡಿಂಗ್ ಹಾಕದೆ ಮೇಲಾಧಿಕಾರಿಗಳ ಕಚೇರಿಗೆ ರವಾನಿಸುತ್ತಾರೆ. ನಿಷ್ಠಾವಂತ ಪ್ರಮಾಣಿಕ ಅಧಿಕಾರಿ ತಿಪ್ಪಣ್ಣ ಮಾಂಗ್, ರವರ ವಿರುದ್ದ ಸುಳ್ಳು ನೆಪಗಳನ್ನು ಕಟ್ಟಿ. ಅವರಿಗೆ ಮಾನಸಿಕ ಕಿರುಕುಳ ನೀಡುತ್ತಾ ಬಂದ ಇಲ್ಲಿನ ಜಾತಿ ರಾಜಕೀಯ ಶಕ್ತಿಗಳು ಮತ್ತು ಸ್ಥಳಿಯ ಮುಖಂಡರು ಅಧಿಕಾರಿ ತಿಪ್ಪಣ್ಣ ಮಾಂಗ್ ರವರ ಮೇಲೆ ಗೂಬೆ ಕೂರಿಸಿದ್ದಾರೆ ಎಂದು ತಿಳಿಸಿದ ಸಿದ್ದು ಪಟ್ಟೆದಾರವರು. ಸ್ಥಳಿಯ ರಾಜಕೀಯ ಹಿತಶಕ್ತಿಗಳ ಕುಮ್ಮಕ್ಕಿನಿಂದ ಅಧಿಕಾರಿ ತಿಪ್ಪಣ್ಣನವರ ಮೇಲೆ ಸುಳ್ಳು ಸೃಷ್ಟಿಸಿ ಜಿಲ್ಲಾಧಿಕಾರಿಗಳಿಗೆ ದಿಕ್ಕು ತಪ್ಪಿಸಿ,ದೂರು ನೀಡಿದ್ದಾರೆ,
ಅನಧಿಕೃತ ರಜೆ ಎಂದು ಕರ್ತವ್ಯಲೋಪದಡಿಯಲ್ಲಿ ಅಮಾನತ್ತುಗೊಳಿಸಿದ್ದು ಅವಲೋಕನ ಮಾಡಿಕೊಳ್ಳಬೇಕು ಮತ್ತು ತನಿಖೆ ಮಾಡಬೇಕು, ಎಂದು ಆಗ್ರಹ ಮಾಡಿದ ಪಟ್ಟೆದಾರವರು ಸಾಹಾಯಕ ನಿರ್ಧೇಶಕರಾದ ತಿಪ್ಪಣ್ಣ ಮಾಂಗ್, ರವರು ದಿ, 30-8-2024ರಂದು ಅನಾರೋಗ್ಯದ ಕಾರಣ ಮೇಡಿಕಲ್ ಸರ್ಟಿಪಿಕೇಟ್ ಪಡೆದುಕೊಂಡು, ದಿ, 3-9-2024ರಂದು ರಜೆ/445-448 ಆಯುಕ್ತರು ನಗರ ಯೋಜನಾ ಪ್ರಾಧಿಕಾರವರಿಗೆ ರಜೆ ಕುರಿತು ಮನವಿ ಪತ್ರ ಸಲ್ಲಿಸಿದ್ದಾರೆ. ಅಲ್ಲಿಂದ ಯಾವುದೆ ಪ್ರತಿ ಉತ್ತರ ಬಾರದಿದ್ದಾಗ ದಿ,19-9-2024ರಂದು ಪತ್ರ,ಸಂ, 473/81 ರಲ್ಲಿ ಆಯುಕ್ತರಿಗೆ ಪರಿಮಿತ ರಜೆ ಮಂಜೂರಿಗೆ ಮಾಡಿಕೊಂಡರೂ ರಜೆ ನೀಡಲಿಲ್ಲ, ತೀರಾ ಅನಾರೋಗ್ಯದ ಸ್ಥಿತಿಯಲ್ಲಿದ್ದಾಗ ಸಾಹಾಯಕ ನಿರ್ಧೆಶಕರಾದ ತಿಪ್ಪಣ್ಣ ಮಾಂಗ್, ದಿ,21-9-2024ರಂದು ಸಿಂದಗಿಯ ಸಾಹಾಯಕ ನಿರ್ಧೇಶಕರಾಗಿದ್ದ ಆನಂದಸಿಂಗ್ ರವರಿಗೆ ಶಹಾಪುರ ಪ್ರಭಾರಿ ವಹಿಸಿಕೊಡಲು ಪತ್ರ ಆದೇಶ ಮಾಡಿರುತ್ತಾರೆ. ಆರೋಗ್ಯ ಸುಧಾರಣೆ ನಂತರದಲ್ಲಿ ದಿ,1-10-2024ರಂದು ಪುನಃ ಅಧಿಕಾರ ಪಡೆದುಕೊಂಡಿದ್ದರು, ದಿ,2-12-2024ರಂದು ಜಿಲ್ಲಾಧಿಕಾರಿಗಳು ಯಾವುದೆ ಪೂರ್ವ ತನಿಖೆ ಆಧಾರಗಳಿಲ್ಲದೆ ಏಕಾಏಕಿ ಅಮಾನತ್ತುಗೊಳಿಸಿದ್ದ ಆದೇಶ ಮಾಡುತ್ತಾರೆ, ಅಧಿಕಾರದ ಮುಂಬಡ್ತಿಯಲ್ಲಿದ್ದ, ದಲಿತ ನೌಕರರ ತಿಪ್ಪಣ್ಣ ಮಾಂಗ್ ಇವರಿಗೆ ಈ ಅಮಾನತ್ತು ಆದೇಶದಿಂದ ದಲಿತ ಸಮುದಾಯದ ನೌಕರರ ಮೇಲೆಪರಿಣಾಮ ಉಂಟಾಗುತ್ತಿದೆ,, ಮುಂಬಡ್ತಿಗೆ ಅಡ್ಡಿಯಾಗಿ ರಾಜಕೀಯ ಕೈಗೊಂಬೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಆಧಿಕಾರಿಗಳನ್ನು ಕೂಡಲೆ ಅಮಾನತ್ತುಗೊಳಿಸಬೆಕು, ಅನ್ಯಾಯವಾಗಿ ದಲಿತ ನೌಕರರ ತಿಪ್ಪಣ್ಣ ಮಾಂಗ್ ರವರ ಅಮಾನತ್ತು ಆದೇಶ ಹಿಂಪಡೆದುಕೊಂಡು ಪುನಃ ಕರ್ತವ್ಯಕ್ಕೆ ನಿಯೋಜನೆ ನೀಡಬೇಕು, ಅಲ್ಲದೆ ಈ ಹಿಂದೆ ಮುಂಬಡ್ತಿಯಲ್ಲಿ ಪಟ್ಟಿಯಲ್ಲಿದ್ದ ಸಾಹಾಯಕ ನಿರ್ಧೆಶಕರಾದ ತಿಪ್ಪಣ್ಣ ಮಾಂಗ್ ರವರ ಬಡ್ತಿಗೆ ಅಡ್ಡಿಯಾಗದಂತೆ ಅನೂಕೂಲ ಮಾಡಿಕೊಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

English Kannada