ಶಹಾಪುರವಾಣಿ,
ಶಹಾಪುರ ನಗರ ಯೋಜನಾ ಪ್ರಾಧಿಕಾರದ ಸಾಹಾಯಕ ನಿರ್ಧೆಶಕರ ಪ್ರಭಾರಿ ಸ್ಥಾನಕ್ಕೆ ಅಧಿಕಾರಿಗಳಿಂದಲೇ ಗೊಂದಲದ ಸಂಕಷ್ಟ ಎದುರಾಗಿದೆ,ಒಂದೆ ದಿನ ಇಬ್ಬರು ಅಧಿಕಾರಿಗಳಿಗೆ ಪ್ರಭಾರಿ ಆದೇಶ ನೀಡಿದ್ದ ನಗರ ಯೋಜನಾ ಪ್ರಾಧಿಕಾರಗಳ ಮತ್ತು ಗ್ರಾಮಾಂತರ ಅಭಿವೃದ್ದಿ ಯೋಜನೆಯ ಆಯುಕ್ತರು ಒಬ್ಬರಿಗೆ ಆದೇಶ ನೀಡಿದರೆ? ಇತ್ತ ಜಿಲ್ಲಾಧಿಕಾರಿಗಳು ಮತ್ತೋರ್ವ ಅಧಿಕಾರಿಗೆ ಪ್ರಬಾರಿ ವಹಿಸಿಕೊಳ್ಳಲು ಆದೇಶ ನೀಡಿದ್ದರು, ಡಿ, 2ರ ಆದೇಶದಂತೆ ಇಬ್ಬರು ಅಧಿಕಾರಿಗಳು ಡಿ,3ರಂದು ಶಹಾಪುರ ನಗರ ಯೋಜನಾ ಪ್ರಾಧಿಕಾರದ ಪ್ರಭಾರಿಗೆ ಧಾವಿಸಿದ್ದು ಜನಮನದಲ್ಲಿ ಗೊಂದಲಮಯ ಉಂಟು ಮಾಡಿದೆ, ಇತ್ತ ಅಮಾನತ್ತುಗೊಂಡ ಅಧಿಕಾರಿ ಯಾರಿಗೆ ಪ್ರಭಾರಿ ಅಧಿಕಾರ ವಹಿಸಿಕೊಡಬೇಕೋ? ಎಂದು ಸಂಕಷ್ಟದಲ್ಲಿ ಅವರು ಪುನಃ ರಾಜ್ಯ ನಗರ ಯೋಜನಾ ಪ್ರಾಧಿಕಾರದ ಆಯುಕ್ತರಿಗೆ ಪತ್ರಬರೆದು ಸ್ಪಷ್ಟತೆ ಕೇಳಿದ್ದಾರೆ ಎಂದು ತಿಳಿದು ಬಂದಿದೆ, ಪ್ರಭಾರಿಗಾಗಿ ಕಾದು ಕುಳಿತ್ತಿದ್ದ ಇಬ್ಬರು ಅಧಿಕಾರಿಗಳು ಮರಳಿ ಯತ್ನದಲ್ಲಿದ್ದಾರೆ ಎಂದು ಕೇಳಿ ಬರುತ್ತಿದೆ.