ಕರ್ತವ್ಯ ಲೋಪವೆಂದು ಶಹಾಪುರ ನಗರ ಯೋಜನಾ ಪ್ರಾಧಿಕಾರ ಸಹಾಯಕ ನಿರ್ಧೆಶಕರನ್ನು ಅಮಾನತ್ತುಗೊಳಿಸದ್ದು, ನಗರಾಭಿವೃದ್ದಿ ಪ್ರಾಧಿಕಾರ ಮತ್ತು ಗ್ರಾಮಾಂತರ ಯೋಜನೆಗಳ ಪ್ರಾಧಿಕಾರದ ಆಯುಕ್ತಾಲಯ ದಿ, 2-11-2024ರಂದು ಶಹಾಪುರ ನಗರ ಯೋಜನೆ ಪ್ರಾಧಿಕಾರಕ್ಕೆ ಸಹಾಯಕ ನಿರ್ಧೆಶಕರೆಂದು ಸಿಂದಗಿಯ ಗೋವಿಂದಸಿಂಗ್ ರವರಿಗೆ ಪ್ರಭಾರಿ ವಹಿಸಕೊಳ್ಳಲು ಆದೇಶ ಮಾಡಿದರೆ,
ಯಾದಗಿರಿ ಜಿಲ್ಲಾಧಿಕಾರಿಗಳು ದಿ,2-11-2024ರಂದೆ ಮತ್ತೋರ್ವ ಅಧಿಕಾರಿ ಯಾದಗಿರ ನಗರ ಯೋಜನೆ ಪ್ರಾಧಿಕಾರದ ಸಾಹಾಯಕ ನಿರ್ಧೆಶಕರಾದ ಶರಣಪ್ಪನವರಿಗೆ ಪ್ರಭಾರಿ ವಹಿಸಿಕೊಳ್ಳಲು ಆದೇಶ ಹೊರಡಿಸಿದ್ದಾರೆ, ಒಂದೆ ದಿನ ಏಕಕಾಲಕ್ಕೆ ಅಧಿಕಾರಿಗಳು ಇಬ್ಬರು ಅಧಿಕಾರಿಗಳಿಗೆ ಪ್ರಭಾರಿ ಆದೇಶ ನೀಡಿದ್ದು ಗೊಂದಲಕ್ಕೆ ಕಾರಣವಾಗಿದೆ, ಎಂದು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿದೆ, ರಾಜ್ಯ ನಗರ ಯೊಜನಾ ಪ್ರಾಧಿಕಾರದ ಆಯುಕ್ತರ ಆದೇಶವಿರುವ ಅಧಿಕಾರಿಗಳು ಬರುತ್ತಾರೋ? ಜಿಲ್ಲಾಧಿಕಾರಿಗಳ ಆದೇಶ ಹೊತ್ತ ಅಧಿಕಾರಿಗಳು ಪ್ರಭಾರ ವಹಿಸಿಕೊಳ್ಳುತ್ತಾರೋ? ಕಾದು ನೋಡಬೆಕಿದೆ.