ಶಹಾಪುರ,
ಕೃಷ್ಣ ಮೇಲ್ದಂಡೆ ಯೋಜನೆಯನ್ನು ಮಂಜೂರಿಗಾಗಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರನ್ನು ತರಾಟೆಗೆ ತೆಗೆದುಕೊಂಡ ಮಾಜಿ ಮಂತ್ರಿ ದಿ,ಬಾಪುಗೌಡ ದರ್ಶನಾಪುರವರು ತಮ್ಮ ಕಾರ್ಯಗಳನ್ನು ಈಡೆರಿಸುವವರೆಗೂ ಯಾರನ್ನೂ ಬಿಡದ ಸತ್ಯಮೂರ್ತಿಯಾಗಿದ್ದರು, ಅಂದು ದ,ಬಾಪುಗೌಡರ ಪರಿಶ್ರಮದ ಈ ಕೃಷ್ಣ ಮೇಲ್ದಂಡೆ ಯೋಜನೆ ನೀರು ಇಂದು ನಮ್ಮ ಸಗರ ನಾಡಿಗೆ ಮತ್ತು ಕಲ್ಯಾಣ ಕರ್ನಾಟಕದ ಭಾಗಕ್ಕೆ ವರದಾನವಾಗಿದೆ, ಎಂದು ಕಾಂಗ್ರೆಸ್ ಹಿರಿಯ ಮುಖಂಡ, ರೈತಪರ ಚಿಂತಕ, ಕೇದಾರಲಿಂಗಯ್ಯ ಹೀರೆಮಠರವರು ಮಾರ್ಮಿಕವಾಗಿ ಮಾತನಾಡಿದರು. ಅವರು ನಗರದ ಶ್ರೀ ಬಸವೇಶ್ವರ ಪ್ರೌಡ ಶಾಲಾ ಅವರಣದಲ್ಲಿ, ಎರ್ಪಡಿಸಲಾದ ದಿ,ಬಾಪುಗೌಡ ದರ್ಶನಾಪುರವರ 36 ನೆಯ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಮುಂದುವರೆದು ಮಾತನಾಡಿದ ಅವರು ರಾಜಕೀಯದಲ್ಲಿ ದಿ, ಬಾಪುಗೌಡರು ತಮ್ಮದೆ ದಾಟಿಯಲ್ಲಿ ಮುನ್ನಡೆದುಕೊಂಡು ನಾಡಿನ ಅಬಿವೃದ್ದಿಗೆ ಶಕ್ತಿಯಾದರು, ಅವರ ಹಾದಿಯಲ್ಲಿ ನಡೆದ ಅನೇಕ ಜನರು ಅಭಿಮಾನಿಗಳು ರಾಜಕಿಯ ರಂಗದಲ್ಲಿದ್ದಾರೆ, ಸಾಮಾಜಿಕ ವರ್ಗಕ್ಕೆ ಅಭಿವೃದ್ದಿ ನೀತಿಯೊಂದಿಗೆ ಕಾಲುವೆಗೆ ನೀರು ಹರಿಸಿದ ಹರಿಕಾರ ದಿ,ಬಾಪುಗೌಡರನ್ನು ಯಾರೂ ಮರಿಬೇಡಿ ಎಂದು ಅವರು ಕರೆ ನೀಡಿದರು,ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಮಾಜಿ ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರವರು ಮಾತನಾಡಿ.ಮಾಜಿ ಮಂತ್ರಿ ದಿ,ಬಾಪುಗೌಡ ದರ್ಶನಾಪುರವರ ಹಾದಿಯಲ್ಲಿ ಮುನ್ನಡೆದುಕೊಂಡು ಕ್ಷೇತ್ರದ ಅಭಿವೃದ್ದಾಗಿ ಶ್ರಮಿಸುತ್ತಿರುವ ಸಣ್ಣ ಕೈಗಾರಿಕಾ ಸಾರ್ವಜನಿಕ ಉಧ್ಯಮಗಳ ಮಂತ್ರಿ ಶರಣಬಸ್ಸಪ್ಪಗೌಡ ದರ್ಶನಾಪುರವರು ಅನೇಕ ಮಠ ಮಂದಿರ ಮಸೀದಿಗಳಿಗೆ ಅಭಿವೃದ್ದಿಗಾಗಿ ಅನುಧಾನ ನೀಡಿ ಇಂದು ಸಾಮಾಜಿಕ ಕಳಕಳೆಯಲ್ಲಿ ಮುಂದೆ ಸಾಗುತ್ತಿದ್ದಾರೆ.ಮಾಣಿಕಗಿರಿ ಬೆಟ್ಟ ಅಬಿವೃದ್ದಿ, ಪಡಿಸಿದ್ದು ಅಲ್ಲದೆ ಶ್ರೀಶೈಲ್ ಕ್ಷೇತ್ರದಲ್ಲಿ ಪ್ರತಿ ವರ್ಷ ಅನ್ನ ಸಂತರ್ಪಣೆ ಮತ್ತು ಸಹಸ್ರಾರು ಭಕ್ತರ ನೇರಳಿಗೆ ದರ್ಶನಾಪುರ ಕುಟುಂಬ ಆಶ್ರೆಯರಾಗಿದ್ದಾರೆ, ಎಂದರು, ಸಮಾರಂಭದ ದಿವ್ಯ ಸಾನಿಧ್ಯವನ್ನು ಚರಬಸವೇಶ್ವರ ಸಂಸ್ಥಾನ ಗದ್ದುಗೆಯ ವೇ, ಬಸವಯ್ಯ ಶರಣರು ವಹಿಸಿದ್ದರು, ಅಧ್ಯಕ್ಷತೆಯನ್ನು ಶ್ರೀ ಚರಬಸವೇಶ್ವರ ಶಿಕ್ಷಣ ಸಂಸ್ತೆಯ ಅಧ್ಯಕ್ಷರಾದ ಬಸವರಾಜಪ್ಪಗೌಡ ದರ್ಶನಾಪುರ ವಹಿಸಿದ್ದರು. ವೇದಿಕೆಯಲ್ಲಿ ಕಲಬುರ್ಗಿ ಶಾಸಕ ಅಲ್ಲಪ್ರಭು ಪಾಟೀಲ್. ಯಾದಗಿರಿ ಶಾಸಕ ಚೆನ್ನಾರಡ್ಡಿ ಪಾಟೀಲ್. ಸೋಮಶೇಖರ ಗೊನಾಯಕ.ಶಂಕ್ರಣ್ಣ ವಣಿಕ್ಯಾಣ,ಚಂದ್ರಶೇಖರ ಆರಬೊಳ.ಲಾಲಹಮ್ಮದ ಬಾಂಬೇ ಶೇಠ,.ಸಿದ್ದಲಿಂಗಣ್ಣ ಆನೆಗುಂದಿ,ಸಂತೋಷ ದೇವದುರ್ಗಾ,ಹಣಮಂತ್ರಾಯ ದೊರಿ,ಶಿವಮಾಂತ ಚಂದಾಪುರ,ಸಣ್ಣ ನಿಂಗಣ್ಣ ನಾಯ್ಕೊಡಿ, ಶರಣಪ್ಪ ಸಲಾದಪುರ, ನೀಲಕಂಠ ಬಡಿಗೇರ, ವಕ್ತಾರರಾದ ಮಲ್ಲಪ್ಪ ಗೋಗಿ.ಗೌಡಪ್ಪಗೌಡ ಆಲ್ದಾಳ. ಮಾಣಿಕರಡ್ಡಿ ಗೋಗಿ, .ರುದ್ರಪ್ಪ ಹುಲಿಮನಿಸೇರಿದಂತೆ ಅನೆಕ ಗಣ್ಯರು ಅಭಿಮಾನಿಗಳು ಭಾಗವಹಿಸಿದ್ದರು,ಈ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೇಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.ಶಾಲಾ ಶಿಕ್ಷಕರು ವಿಧ್ಯಾರ್ಥಿ ವಿಧ್ಯಾರ್ಥಿನಿಯವರು ಪಾಲ್ಗೊಂಡಿದ್ದರು.