ಶಹಾಪುರದಲ್ಲಿ ಪ್ರಮೋದ ಮುತಾಲಿಕ ಹೇಳಿಕೆ!
ಶಹಾಪುರ,
ಹಿಂದುವಾದಿಗಳನ್ನು, ಹೋರಾಟಗಾರರನ್ನು. ಕಾನೂನು ಪ್ರಶ್ನಿಸುವರನ್ನು, ರಾಕಾರಣಿಗಳು ಪೋಲಿಸ್ ಠಾಣೆಯನ್ನು ಅಸ್ತ್ರವನ್ನಾಗಿಸಿಕೊಂಡು ಹತ್ತಿಕ್ಕುತ್ತಿದ್ದಾರೆ,ನಗರದಲ್ಲಿ ಹಿಂದು ಮಾಹಾಗಣಪತಿ ವಿಸರ್ಜನೆಯಂದು ಮಾಜಿ ಎಮ್,ಪಿ, ಹಿಂದು ರೂವಾರಿ, ಪ್ರತಾಪಸಿಂಹ್ ರವರ ಮೇಲೆ ಪ್ರಚೋಧನ ಕಾರಿ ಭಾಷಣ ಮಾಡಿದ್ದಾರೆಂದು ಯಾರೋ ಹೇಳಿದನ್ನು ಕೇಳಿ ಅವರ ವಿರುದ್ದ ಸ್ಥಳಿಯ ಪೋಲಿಸರು ಪ್ರಕರಣ ದಾಖಲು ಮಾಡಿಕೊಂಡು ಹಿಂದುತ್ವದ ಒಗ್ಗಟ್ಟಿಗೆ ಹೆದರಿಸುವ ಕಾರ್ಯಕ್ಕೆ ಕೈಹಾಕಿದ್ದು ಖಂಡನೀಯವಾಗಿದೆ, ಯಾದಗಿರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಪೋಲಿಸ ಅಧಿಕಾರವನ್ನು ದುರ್ಬಳಿಕೆ ಮಾಡಿಕೊಳ್ಳುತ್ತಿದ್ದಾರೆ, ಅಧಿಕಾರದ ಅಮಲಿನಲ್ಲಿ ವಿರೋಧಿಗಳನ್ನು ಹತ್ತಿಕ್ಕುವ ಹುನ್ನಾರದಲ್ಲಿ ಪೋಲಿಸರು ರಾಜಕಿಯ ದರ್ಪದಿಂದ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ ಎಂದು ಶ್ರೀರಾಮ ಸೇನೆಯ ರಾಜ್ಯಧ್ಯಕ್ಷರಾದ ಪ್ರಮೋದ ಮುತ್ತಾಲಿಕ ಆರೋಪಿಸಿದರು, ಅವರು ಶಹಪುರ ನಗರದ ಹೊರಹೊಲಯದಲ್ಲಿರುವ ಸುಬೇದಾರ ಫಾರ್ಮಹೌಸ್ ನಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು,ಹಿಂದುಗಳನ್ನು ಸಂಘಟಿತಗೊಳಿಸುವದು ತಪ್ಪಾ? ಅಂದು ಯಾವುದೆ ಕೊಮುಗಲಭೆಗಳಿಲ್ಲದೆ ಗಣೇಶ ವಸರ್ಜನೆಯಾಗಿದ್ದರೂ. ಪೋಲಿಸರು ಮಾಜಿ ಎಮ್,ಪಿ. ಪ್ರತಾಪಸಿಂಹ್ ರವರ ಮೇಲೆ ಕೇಸು ಹಾಕುತ್ತಾರೆ. ಪೋಲಿಸ್ ಇಲಾಖೆ ರಾಜಕೀಯ ಗಾಳದಲ್ಲಿ ಕುಣಿಯುತ್ತಿದೆ, ಎಂದ ಅವರು, ಕಾನೂನು ಪಾಲನೆಗಾಗಿ ಹೋರಾಡುವರನ್ನು, ಸಂಘಟಿಸುವರನ್ನು ಮೂಲೆಗುಂಪು ಮಾಡುವಲ್ಲಿ ಪೋಲಿಸ್ರು ಕೇಸ ದಾಖಲೆ ಮಾಡಿಸಿಕೊಂಡು ಹೆದÀರಿಸುತ್ತಿದ್ದಾರೆ ಎಂದು ಮುತಾಲಿಕ ಆಕ್ರೋಶ ವ್ಯಕ್ತಪಡಿಸಿದರು. ದೇಶ ಭಕ್ತ ಹಿಂದುಗಳ ಮೇಲಿನ ಪ್ರಕರಣಗಳಿಗೆ ಹೆದರುವದಿಲ್ಲ. ಶ್ರೀರಾಮ ಸೇನೆ ರಾಜ್ಯ ಹಿಂದುಪರ ಸಂಘಟನೆಗಳ ಶಕ್ತಿ ಬಲವಾಗಿದೆ.ಉತ್ತರಪ್ರದೇಶದಲ್ಲಿ ಯೋಗಿ ಅದಿತ್ಯನಾಥರಂತಹ ತ್ಯಾಗಿಗಳು ರಾಜಕೀಯಕ್ಕೆ ದುಮುಕಿ ಇಂದು ಶುದ್ದಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ, ರಾಜಕಾರಣಿಗಳು ಕಾವಿಗಳ ಕುರಿತು ಮಾತನಾಡುವಲ್ಲಿ ಗೌರವಿರಲಿ, ಯೋಗಿ ದೇಶಕ್ಕೆ ಆದರ್ಶವಾದಿ ಎಂದರು,ಇಸ್ಲಾಂ ರಜಾಕರಕ್ಕಿಂತ ಕ್ರೂರ.ಇಂದಿನ ರಾಜಕಾರಣಿಗಳಿಗೆ ಜಾತಿ ಲಾಬಿ ಪಡೆದುಕೊಂಡು ಲೂಟಿ ಮಾಡುವದೆ ಅವರ ದಂದೆಯಾಗಿದೆ, ಮುಂದೆ ಹಿಂದು ಸಂಘಟನೆಯಾಗದಿದ್ದಲ್ಲಿ ಅಪಾಯವಾದೀತು ಎಂದು ಅವರು ಎಚ್ಚರಿಸಿದರು. ಇಸ್ಲಾಂ ಧಾರ್ಮಿಕತೆಯ ಮೇಲೆ ವಕ್ತ ಎಂದರೆ ಅಲ್ಲಾ ಎಂದು ಕಳೆದ 1500 ವರ್ಷಗಳಿಂದಲೂ 57 ರಾಷ್ಟ್ರಗಳಲ್ಲಿ ಅಕ್ರಮಣ ಯುದ್ದ ಮಾಡಿಕೊಂಡು, ಅಕ್ರಮ ಆಸ್ತಿಯನ್ನು ಪಡೆಯಲಾಗುತ್ತಿದೆ, ಇಂದಿಗೂ ಭಾರತದಲ್ಲಿ ಮತೀಯ ಆಧಾರಗಳಿಂದ ಹಿಂದು /ಮುಸ್ಲಿಂ, ಒಂದಾಗುವದು ದೂರದ ಕನಸಾಗಿದ್ದು ಅದಕ್ಕಾಗಿ ಮುಸ್ಲಿಂ, ರಾಷ್ಟ್ರಕ್ಕಾಗಿ ಪಾಕಿಸ್ಥಾನ ಪ್ರತೇಕಗೊಳಿಸಿಕೊಂಡರು ಎಂದು ಅವರು ತಿಳಿಸಿದರು, 2047ರ ಹೊತ್ತಿಗೆ ಹಿಂದು ರಾಷ್ಟ್ರ ಇಸ್ಲಾಂವಾಗುವ ಹುನ್ನಾರ ಮುಂದುವರೆಯುತ್ತಿದ್ದು ಹಿಂದುಗಳು ಸಂಘಟಿತರಾಗಿ ಜಾಗ್ರತರಾಗಬೆಕು ಎಂದು ಅವರು ಕರೆ ನೀಡಿದರು,ಈ ಸಂಧರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಡಾ, ಚಂದ್ರಶೇಖರ ಸುಬೇದಾರ, ರಾಜಶೇಖರಗೌಡ ಗೂಗಲ್, ಕರಣ ಸುಬೇದಾರ, ಶ್ರೀರಾಮ ಸೇನೆಯ ತಾಲುಕಾ ಅಧ್ಯಕ್ಷರಾದ ಶಿವುಕುಮಾರ ಶಿರವಾಳ, ಸೇರಿದಂತೆ ಇತರರು ಹಾಜರಿದ್ದರು.