ಹಿಂಗಾರು ಬೇಳೆಗೆ ಮಾರ್ಚ ವವರೆಗೂ ಕಾಲುವೆಗೆ ನೀರು -ಸಚಿವ ದರ್ಶನಾಪುರ,


ಶಹಾಪುರ,
ಕೃಷ್ಣ ಮೆಲ್ದಂಡೆ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳ ಭಾಗದ ರೈತರಿಗೆ ಹಿಂಗಾರು ಬೇಳೆಯ ಮಾರ್ಚ ದವರೆಗೂ ಕಾಲುವೆಗೆ ನೀರು ಹರಿಸಲು ಸಾಧ್ಯವಾಗುತ್ತದೆ, ಈ ಕುರಿತು ನೀರಾವರಿ ಸಚಿವರು ದೂರವಾಣಿ ಮುಖಾಂತರ ತಿಳಿಸಿದ್ದಾರೆ ಎಂದು ಸಣ್ಣ ಕೈಗಾರಿಕಾ ಸಾರ್ವಜನಿಕ ಉಧ್ಯಮಗಳ ಮಂತ್ರಿ ಶರಣಬಸ್ಸಪ್ಪಗೌಡ ದರ್ಶನಾಪುರವರು ತಿಳಿಸಿದರು, ಅವರು ಭೀ,ಗುಡಿ ಪ್ರವಾಸಿ ಮಂದಿರದಲ್ಲಿ ಪತ್ರಿಕರ್ತರಿಗೆ ಈ ವಿಷಯ ತಿಳಿಸಿ, ಮಾತನಾಡಿದರು,ರೈತರು ಹಿಂಗಾರು ಬೇಳೆಯನ್ನು ತ್ವರಿತವಾಗಿ ಕಸಿ ಮಾಡಿದಲ್ಲಿ ಇನ್ನೂ ಅನೂಕೂಲವಾಗುತ್ತದೆ, ಕಾಲುವೆ ನೀರನ್ನು ಹಿತಿಮಿತಿಯಲ್ಲಿ ಬಳಸಿಕೊಂಡಲ್ಲಿ ರೈತರು ಮಾರ್ಚದವರೆಗೂ ಆತಂಕ ಪಡಬೇಕಿಲ್ಲವೆಂದು ಅವರು ತಿಳಿಸಿದರು. ಆಲಮಟ್ಟಿ ಜಲಾಶೆಯದಲ್ಲಿ 105 ಟಿ,ಎಮ್,ಸಿ, ನೀರಿದ್ದರೆ, ನಾರಾಯಣಪೂರ ಡ್ಯಾಮ್ ನಲ್ಲಿ 117ಕ್ಕೂ ಮಿಕ್ಕಿ ನೀರಿದ್ದು ಯಾವುದೆ ಆತಂಕದ ಅವ್ಯಕತೆಯಿಲ್ಲವೆಂದು ತಿಳಿಸಿದ ಸಚಿವ ದರ್ಶನಾಪುರವರು, ಈ ಹಿಂದೆ ಇದ್ದ ವಾರ ಬಂದಿಯಂತೆ ನೀರನ್ನು ಕಾಲುವೆಗೆ ಹರಿಸಲಾಗುತ್ತದೆ,ಕೊನೆಯ ಭಾಗದ ರೈತರಿಗೂ ಸಮಪರ್ಕವಾಗಿ ನೀರು ದೊರೆಯಲ್ಲಿದೆ,ಇನ್ನೂಳಿದ 80 ಟಿ,ಎಮ್,ಸಿ, ನೀರು ಕುಡಿಯುವ ನೀರು ಸೇರಿದಂತೆ ನಾನಾ ಉತ್ಪಾದನೆಗಳಿಗೆ ಬಳಿಕೆಗೆ ಕಾಯ್ದಿರಿಸಲಾಗಿದೆ ಮತ್ತು ಶಿಘ್ರದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಕರೆಯುವಂತೆ ಅಧಿಕಾರಿಗಳಿಗೆ ಸೂಕ್ತ ನಿರ್ಧೇಶನ ನೀಡಲಾಗುತ್ತದೆ ಸಚಿವರು ಹೇಳಿದರು,
ಕೊಟ್
ಶಹಾಪುರ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚು ಗಮನ ಹರಿಸಲಾಗುತ್ತಿದೆ, ಆರೋಗ್ಯ ಕ್ಷೇತ್ರಕ್ಕೆ ಗಣನೀಯ ಅಭಿವೃದ್ದಿಪಡಿಸುವ ಸದುದ್ದೇಶಹಗಳಿಂದ ನಗರದ ಹಳೆಯ ತಹಿಸಲ್ದಾರ ಕಚೇರಿ ಅವರಣದ ಒಟ್ಟು 3,31 ಏಕರೆ ಜಮಿನುನಲ್ಲಿ ತಾಯಿ ಮಕ್ಕಳ ಆಸ್ಪತ್ರೆ ,150 ಬೆಡ್ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲು ಇಗಾಗಲೆ 10 ಕೊಟಿ ರೂ, ಅನುಧಾನ ಮತ್ತು 50 ಬೆಡ್ ಗಳ ಆಸ್ಪತ್ರೆ ಮೆಲ್ದರ್ಜೆಗೆ ಅನುಧಾನ ಬಿಡುಗೆಯಾಗಿದೆ,ಶಿಘ್ರದಲ್ಲಿ ಕಾಮಗಾರಿ ಪ್ರಾರಂಭ ಮಾಡಲಾಗುತ್ತದೆ, ಅಲ್ಲದೆ ಶಿಕ್ಷಣ ಇಲಾಖೆ ಜಮೀನುದಲ್ಲಿ ಮಿನಿವಿಧಾನ ಸೌಧ ಕಟ್ಟಡಕ್ಕೆ ಸ್ಥಳದ ಅನುಮೋಧನೆ ದೊರತ್ತಿದೆ, ಶಿಘ್ರದಲ್ಲಿ ಅನುಧಾನ ಮಂಜೂರಿಯಾಗುವ ನೀರಿಕ್ಷೆ ಹೊಂದಲಾಗಿದೆ, ಅಲ್ಲದೆ ಹೋಸ ತಹಿಸಲ್ದಾರ ಕಚೇರಿ ಅವರಣದಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಸರ್ಕಾರಿ ಕಚೇರಿಗಳ ಸಂಕೀರ್ಣ ಕಟ್ಟಡ ನಿರ್ಮಾಣ ಶಿಘ್ರದಲ್ಲಿ ನಡೆಯಲ್ಲಿದೆ,
ಶರಣಬಸ್ಸಪಗೌಡ ದರ್ಶನಾಪುರ
ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ಯಮಗಳ ಮಂತ್ರಿಗಳು ಕರ್ನಾಟಕ ಸರ್ಕಾರ

Leave a Reply

Your email address will not be published. Required fields are marked *

English Kannada