ಕರ್ನಾಟಕ ವಿವಿ ಸಿಂಡಿಕೇಟ್ ಪ್ರಾಧಿಕಾರಗಳಿಗೆ ನಾಮನಿರ್ಧೇಶನ ಯಾದಗಿರಿ ಜಿಲ್ಲೆ ಮರಿಚಿಕೆ.


ಶಹಾಪುರ,
ಕರ್ನಾಟಕ ರಾಜ್ಯ ವಿವಿ ಅಧಿನೀಯಮಗಳಡಿಯಲ್ಲಿ ನೇಮಿಸಲಾದ ಸಿಂಡಿಕೇಟ್ ಪ್ರಾಧಿಕಾರಗಳಿಗೆ ನಾಮನಿರ್ಧೇಶನದಲ್ಲಿ ಯಾದಗಿರಿ ಜಿಲ್ಲೆಯನ್ನು ಕಡೆಗಣಿಸಲಾಗಿದೆ, ಎಂದು ಪ್ರೀಯಾಂಕ್ ಖರ್ಗೇಜೀ ಪ್ರಥಮ ದರ್ಜೆ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿಗಳಾದ ದೇವು ಬೀರನೂರವರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ, ಅವರು ಪತ್ರಿಕೆಗೆ ಹೇಳಿಕೆ ನೀಡಿ,ಕಲಬುರ್ಗಿ ವಿವಿ ಸಿಂಡಿಕೇಟಗೆ ಮತ್ತು ರಾಯಚೂರ ವಿವಿ ಸಿಂಡಿಕೇಟ್ ಗೆ ಸಂಭAಧಪಡುವ ಯಾದಗಿರಿ ಜಿಲ್ಲೆಯಲ್ಲಿ ಸಿಂಡಕೇಟ ಪ್ರಾಧಿಕಾರಕ್ಕೆ ನೇಮಕ ಮಾಡಿಕೊಳ್ಳಲು ಅರ್ಹತೆಗಳ ಕೊರತೆಯೇ? ಎಂದು ಪ್ರಶ್ನಿಸಿದ ದೇವುರವರು ಶೈಕ್ಷಣಿಕ ಕ್ಷೇತ್ರದಲ್ಲಿ ಯಾದಗಿರಿ ಜಿಲ್ಲೆ ಗಣನೀಯವಾಗಿ ಪ್ರಗತಿಯತ್ತ ಮುನ್ನೆಡೆಯುತ್ತಿದೆ ಅಲ್ಲದೆ ಸಿಂಡಿಕೇಟ ನೇಮಕದಲ್ಲಿ ಸ್ಥಳಿಯ ಶಾಸಕರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಇಚ್ಚಾಶಕ್ತಿ ಕೊರತೆಯೇ ಎನ್ನವದನ್ನು ಸ್ಥಳಿಯ ಯಾದಗಿರಿ ಜಿಲ್ಲೆಯ ಪ್ರಜ್ಞಾವಂತ ವಿಚಾರಚಾದಿಗಳು ಗಮನ ಹರಿಸಬೆಕಿದೆ, ಎಂದು ತಿಳಿಸಿದ ಅವರು ಸಿಂಡಿಕೇಟ ನಾಮನಿರ್ಧೇಶನದಲ್ಲೂ ರೊಸ್ಟರ್ ಪದ್ದತಿ ಕೈಬಿಡಲಾಗಿದೆ, ಎಸ,ಸಿ, ಎಸ್,ಟಿ ಜನಾಂಗಕ್ಕೆ ನೀಡಬೇಕಾದ ಮಿಸಲಾತಿಯನ್ನು ಕಡೆಗಣಿಸಲಾಗುತ್ತಿದೆ ಎಂದು ಅವರು ಆರೋಪ ವ್ಯಕ್ತಪಡಿಸಿದರು,ತಕ್ಷಣದಲ್ಲಿ ಯಾದಗಿರಿ ಜಿಲ್ಲೆಗೆ ಸಿಂಡಿಕೇಟ ಸ್ಥಾನಮಾನದಲ್ಲಿ ಪ್ರಾತಿನಿಧ್ಯ ನೀಡಬೆಕು ಎಂದು ಅವರು ರಾಜ್ಯಪಾಲರಲ್ಲಿ ಮನವಿ ಮಾಡಿಕೊಂಡಿದ್ದಾರೆ,

Leave a Reply

Your email address will not be published. Required fields are marked *

English Kannada