ದಿಗ್ಗಿ ಕಾಲೇಜಿನಲ್ಲಿ ಶ್ರೀ ಕೃಷ್ಣಾಷ್ಠಮಿ ಸಾಧನೆಗೊಂದು ಸನ್ಮಾನ
ಶಹಾಪುರ.
ಜೀವನದಲ್ಲಿ ಬದುಕಿನೊಂದಿಗೆ ಪರಿಶ್ರಮಗಳು ಅವಶ್ಯಕವಾಗಿವೆ, ಸತತವಾಗಿ ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ಸಾಧನೆಗಳನ್ನು ಸಾಧಿಸಿದಲ್ಲಿ ಜೀವನ ಸಾರ್ಥಕವಾಗುತ್ತದೆ, ಶ್ರಮದಿಂದ ಯಶಸ್ವಿಗಳು ಸಾಧ್ಯವಾಗುತ್ತದೆ ಎಂದು ಸಮತಾ ಸೈನಿಕ ದಳದ ಜಿಲ್ಲಾ ಅಧ್ಯಕ್ಷರಾದ ಮಾಹಾದೇವ ದಿಗ್ಗಿ ಕರೆ ನೀಡಿದರು, ಅವರು ನಗರದ ಆರ್, ವಾಯ್ ದಿಗ್ಗಿ ಕಾಲೇಜಿನಲ್ಲಿ ಹಮ್ಮಿಕೊಂಡ ಕೃಷ್ಣ ಜನ್ಮಾಷ್ಟಮಿ ಆಚರಣೆ ಅಂಗವಾಗಿ ಸಾಧನೆಗೊಂದು ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದರು,ವಿಧ್ಯಾರ್ಥಿಗಳು ಮುಂದಿನ ಬಾವಿ ಭವಿಷ್ಯಗಳನ್ನು ರೂಪಿಸಿಕೊಳ್ಳಲು ಚಿಕ್ಕವಯಸ್ಸಿನಲ್ಲೆ ಶ್ರಮ ಪಡಬೇಕು ಎಂದು ಅವರು ತಿಳಿಸಿದರು, ಕಾಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆರ್,ವಾಯ್ ದಿಗ್ಗಿ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿಗಳಾದ ಮಹೇಂದ್ರಕುಮಾರ ದಿಗ್ಗಿ ಮಾತನಾಡಿ, ಅಭ್ಯಾಸಗೊಂದಿಗೆ ಇಂದು ಸಮಾಜಿಕ ಶೈಕ್ಷಣಿಕ ಸಂಸ್ಕೃತಿಕ ಚಟುವಟಿಕೆಗಳನ್ನು ವಿಧ್ಯಾರ್ಥಿಗಳು ಮನವರಿಕೆ ಮಾಡಿಕೊಳ್ಳಬೇಕು. ಪರಿಶ್ರಮಗಳಿಂದ ಮುಂದಿನ ಉನ್ನತ ಶಿಕ್ಷಣದತ್ತ ಸಾಗಬೆಕು ಎಂದು ಕರೆ ನಿಡಿದರು, ಈ ಸಮಯದಲ್ಲಿ ಮಾದ್ಯಮ ರತ್ನ ಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತರಾದ ಈರಣ್ಣ ಹಾದಿಮನಿಯರಿಗೆ ಸಮತಾ ಸೈನಿಕ ದಳದ ಯಾದಗಿರಿ , ಆರ್,ಪಿ,ಐ ಘಟಕ ಯಾದಗಿರಿ , ರೈತ ಘಟಕ ಯಾದಗಿರಿ, ದರ್ಶನ ಅಭಿಮಾನಿಗಳ ಸಂಘ,ಹಾಗೂ ಆರ್,ವಾಯ್ ದಿಗ್ಗಿ ಕಾಲೆಜಿನ ಪ್ರಾಂಶುಪಾಲರು ಉಪನ್ಯಾಷಕರು ಸಿಬ್ಬಂದಿಯವರು ರಾಷ್ಟçಪಿತ ಮಾಹಾತ್ಮಾ ಗಾಂದೀಜಿಯವರ ಚರಕ ಸಾಧನವನ್ನು ಕಾಣಿಕೆಯಾಗಿ ನೀಡಿ ಗೌರವಿಸಿ ಸನ್ಮಾನಿಸಿ ಗೌರವಿಸಲಾಯಿತು, ವೇದಿಕೆಯಲ್ಲಿ ದರ್ಶನ ಅಭಿಮಾನಿಗಳ ಸಮಘದ ಅಧ್ಯಕ್ಷರಾದ ಸುನಿಲ ಕಟ್ಟಿಮನಿ, ಮಲ್ಲಿಕಾಜುನ ಗುತ್ತೆದಾರ, ಆರ್,ಪಿ,ಐ ಜಿಲ್ಲಾಧ್ಯಕ್ಷರಾದ ಅಂಬ್ರೇಶ ದಿಗ್ಗಿ, ಆರ್,ಪಿ,ಐ ರೈತ ಘಟಕದ ಅಧ್ಯಕ್ಷರಾದ ಗುರುಪುತ್ರ ಪ್ರಾಂಶುಪಾಲರಾದ ಸುರೇಶ ಕುಂಬಾರ, ಉಪಸ್ಥಿತಿರಿದ್ದರು,ಈ ಕಾರ್ಯಕ್ರಮದವನ್ನು ಉಪನ್ಯಷಕರಾದ ಮಾಸ್ತಿಗೌಡ ಕಾರವಾರ್. ನಿರೂಪಿಸಿದರು.ಸಮಾರಂಭದಲ್ಲಿ ಉಪನ್ಯಾಷಕರಾದ ಜಾಗೀರದಾರ್, ಅಮೀತ ರಾಠೋಡ್. ವಿಧ್ಯಾಥಿಗಳು ಉಪನ್ಯಾಷಕರು ಭಾಗವಹಿಸಿದ್ದರು,