ಶಹಾಪುರವಾಣಿ ಸಂಪಾದಕ ಈರಣ್ಣ ಹಾದಿಮನಿಯರಿಗೆ ಮಾಧ್ಯಮ ರತ್ನ ಪ್ರಶಸ್ತಿ ಗರಿ.
ಶಹಾಪುರ,
ಕಳೆದ ಎರಡು ದಶಕಗಳ ಪತ್ರಿಕ್ಯೊಧ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದ, ಹಲವಾರು ವಾರಪತ್ರಿಕೆಗಳ ಕ್ರೆöÊಂ, ರಿಪೋರ್ಟರಾಗಿ, ಮತ್ತು ವಿವಿಧ ದಿನಪತ್ರಿಕೆಗಳಲ್ಲಿ ತಾಲುಕಾ ವರದಿಗಾರರಾಗಿ ಕ್ರೀಯಾಶೀಲರಾಗಿ ಕರ್ತವ್ಯ ನಿರ್ವಹಿಸಿಕೊಂಡು,ಶಹಾಪುರವಾಣಿ ದಿನ ಪತ್ರಿಕೆ ಸಂಪಾದಕರಾಗಿ, ಉದಯಕಾಲ ವರದಿಗಾರರಾಗಿರುವ ಹಿರಿಯ ಪತ್ರಕರ್ತರಾದ ಈರಣ್ಣ ಹಾದಿಮನಿಯವರಿಗೆ ರಾಜ್ಯ ಮಟ್ಟದ ಮಾಧ್ಯಮ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ, ಎಂದು ಕರ್ನಾಟಕ ಜರ್ನಲಿಸ್ಟ ಯುನಿಯನ್ ಅಧ್ಯಕ್ಷರಾದ ಮರೆಪ್ಪ ಬೇಗಾರ, ಗೌರವಾಧ್ಯಕ್ಷರಾದ ಧನರಾಜ ರಾಠೋಡ್ ಅವರು ತಿಳಿಸಿದ್ದಾರೆ, ಸ್ವತಂತ್ರö್ಯ ದಿನಾಚರಣೆ ಶುಭ ಸಂಧರ್ಭದಲ್ಲಿ ಕಲಬುರ್ಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಆ,೧೫ರಂದು ಕಸಾಪ ಭವನದಲ್ಲಿ ನಡೆಯುವ ಪತ್ರಿಕೆ ದಿನಾಚರಣೆ ಸಂಧರ್ಭದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.ಹಾದಿಮನಿಯವರು ಪತ್ರಿಕೆ ರಂಗದಲ್ಲಿ ಅಮೋಘ ಸೇವೆಯನ್ನು ಪರೀಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಅವರು ವಿವರಿಸಿದರು,