ಜಿ,ಪಂ,ಸಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಾಂತಪ್ಪ ಕೂಡ್ಲಿಗಿ ಸೇರಿದಂತೆ ೬ ಜನರಿಗೆ ಪ್ರಶಸ್ತಿ ಪ್ರಧಾನ.

ಆ,೧೫ರಂದು ಜೇವರ್ಗಿಯಲ್ಲಿ ಪತ್ರಿಕಾ ದಿನಾಚರಣೆ.

ಕರ್ನಾಟಕ ಜರ್ನಲಿಷ್ಟ ಯುನಿಯನ್ ಆಶ್ರೆಯದಲ್ಲಿ ಸ್ವತಂತ್ರö್ಯ ದಿನಾಚರಣೆ ದಿನದಂದು ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲುಕಿನಲ್ಲಿ ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ, ಪಟ್ಟನದ ಕನ್ನಡ ಭವನದಲ್ಲಿ ನಡೆದ ಸಮಾರಂಭದಲ್ಲಿ ಪರಮಪೂಜ್ಯ ಸೊನ್ನದ ಡಾ, ಶಿವಾನಂದ ಮಾಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕ್ಷೇತ್ರದ ಶಾಸಕರು, ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯ ಅಧ್ಯಕ್ಷರಾದ ಡಾ,ಅಜಯಸಿಂಗ್ ರವರು ಕಾರ್ಯಕ್ರಮ ಉಧ್ಘಾಟಿಸುವರು, ಸಂಸದರಾದ ರಾಧಾಕೃಷ್ಣ ದೊಡಮನಿಯವರು, ಮಾಜಿ ಶಾಸಕರಾದ ದೊಡಪ್ಪಗೌಡ ಪಾಟೀಲ್ ನರಬೊಳಿ, ಹಿರಿಯ ಕಾಂಗ್ರೆಸ್ ಮುಖಂಡರಾದ ಕೇದಾರಲಿಂಗಯ್ಯ ಹಿರೆಮಠ, ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವರಾಜ ಪಾಟೀಲ ರದ್ದೇವಾಡಗಿ, ಆಗಮಿಸೂವರು ಎಂದು ಕರ್ನಾಟಕ ಜರ್ನಲಿಷ್ಟ ಯುನಿಯನ್ ಅಧ್ಯಕ್ಷರಾದ ಮರೆಪ್ಪ ಬೇಗಾರ ಮತ್ತು ಗೌರವಾಧ್ಯಕ್ಷರಾದ ಧನರಾಜ ರಾಟೋಡ್ ರವರು ಪತ್ರಿಕೆಗೆ ತಿಳಿಸಿದರು, ಈ ಸಂಧರ್ಭದಲ್ಲಿ

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಅವರು ವಿವರ ನೀಡಿದರು, ಕಲಬುರ್ಗಿ ಜಿ,ಪಂ, ಸಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಶಾಂತಪ್ಪ ಕೂಡ್ಲಿಗಿಯವರಿಗೆ [ಸಮಾಜಿಕ ಸೇವಾ ರತ್ನ ಪ್ರಶಸ್ತಿ] ಮಾಹಾಲಕ್ಷಿö್ಮ ಮಹಿಳಾ ಕಾಲೇಜು ಪ್ರಾಂಶುಪಾಲರಾದ ಧರ್ಮಣ್ಣ ದೊಡ್ಡಮನಿಯವರಿಗೆ ಮತ್ತು ದಾನಮ್ಮ ಮಹಿಳಾ ಕಾಲೆಜಿನ ಪ್ರಾಂಶುಪಾಲರಾದ ಜಗದೀಶ ಉಕ್ಕಿನಾಳವರಿಗೆ [ಗುರುದೇವ ರತ್ನ ಪ್ರಶಸ್ತಿ] ವಿವಿಧ ವಾರ ಪತ್ರಿಕೆಗಳ ವರದಿಗಾರರಾಗಿ, ಉದಯಕಾಲ ದಿನ ಪತ್ರಿಕೆ ವರದಿಗಾರರು, ಶಹಾಪುರವಾಣಿ ದಿನಪತ್ರಿಕೆ ಸಂಪಾದಕರು ಹಾಗೂ ಕಲ್ಯಾಣ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಈರಣ್ಣ ಹಾದಿಮನಿಯವರಿಗೆ [ ಮಾಧ್ಯಮ ರತ್ನ ಪ್ರಶಸ್ತಿ] ಕಸಾಪ ಅಧ್ಯಕ್ಷರಾದ ಎಸ್,ಕೆ, ಬಿರೆದಾರ, ರವರಿಗೆ [ ಸಂಗೀತ ಕಲಾ ರತ್ನ ಪ್ರಶಸ್ತಿ,] ಶಿಕ್ಷಕರಾದ ಸುಧಾ ಭಗವಂತ್ರಾಯವರಿಗೆ [ ಬೇಣ್ಣುರ ಪ್ರಶಸ್ತಿ]ನೀಡಿ ಗೌರವಸಿಲಾಗುತ್ತದೆ, ವಿಶೇಷ ಸನ್ಮಾನಿತರಾಗಿ ತಹಿಸಲ್ದಾರ ಮಲ್ಲಣ್ಣ ಯಲಗೊಡ್, ಜೆಡಿಎಸ್,ಮುಖಂಡರಾದ ರಮೇಶಬಾಬು ವಕೀಲರು. ಬಿಜೆಪಿ ಹಿರಿಯ ಮುಖಂಡರಾದ ಮಲ್ಲಿನಾಥಗೌಡ ಯಲಗೊಡ್,ಕಾಂಗ್ರೆಸ್ ಹಿರಿಯ ಮುಖಂಡರಾದ ರಾಜಶೇಖರ ಸಿರಿ, ಅಖಿಲ ಭಾರತ ವೀರಶೈವ ಮಾಹಾಸಭಾದ ಅದ್ಯಕ್ಷರಾದ ಸಿದ್ದು ಅಂಗಡಿ ಮಾಜಿ ಜಿ,ಪಂ, ಸದಸ್ಯರಾದ ಚಂದ್ರಶೇಖರ ಹರನಾಳ. ಜೆಡಿಎಸ್,ಮುಖಂಡರಾದ ಪ್ರಭು ಜಾದವ್, ಜಿಲ್ಲಾ ನ್ಯಾಯವಾದಿಗಳಾದ ರವಿಚಂದ್ರ ಗುತ್ತೆದಾರ, ದಲಿತ ಮುಖಂಡರಾದ ಭೀಮರಾಯ ನಗನೂರ, ಸೇರಿದಂತೆ ಹಲವಾರು ಗಣ್ಯರಿಗೆ ವಿಶೇಷವಾಗಿ ಗೌರವಿಸಲಾಗುತ್ತದೆ ಎಂದು ಅವರು ತಿಳಿಸಿದರು, ಅಂದಿನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಅವರು ಮನವಿ ಮಾಡಿದರು,

Leave a Reply

Your email address will not be published. Required fields are marked *

English Kannada