ಶಹಾಪುರ,
ಜಾತಿಗೊಂದು ಮಠ ಮಾಡಿಕೊಂಡು ಸ್ವಜಾತಿ ಪ್ರೇಮದಲ್ಲಿ ರಾಜಕೀಯ ಮಾಡುವ ಮಠಾಧೀಶರು ಅಧಿಕವಾಗುತ್ತಿದ್ದು ಕಳವಳಕಾರಿ ಸಂಗತಿಯಾಗಿದೆ ಎಂದು ಕ,ರಾ,ದ,ಸಂ,ಸ ರಾಜ್ಯ ಸಂಚಾಲಕರಾದ ಅರ್ಜುನಭದ್ರೆ ಪತ್ರಿಕಾ ಗೊಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿ ಮಾತನಾಡಿದರು, ರಾಜಕಾರಣಿಗಳಿಂತಲೂ ಮಠಾಧೀಶರು ಸ್ವಜಾತಿಯ ಮೀಸಲಾತಿಗಾಗಿ ಹೋರಾಟಕ್ಕಿಳಿಯುತ್ತಿರುದು ಶೋಚನಿಯವಾಗಿದೆ, ಮಾನವ ಧರ್ಮ ಒಂದೆ ಎಂದು ಸಾರುವ ಕಾವಿ ಸಂಕೇತ ಧರಸಿಕೊಂಡು ಮಠಾಧೀಶರು ಸ್ವಜಾತಿಯ ರಾಜಕಾರಣಿಗಳಿಗೆ ಶ್ರೀರಕ್ಷೆಯಾಗಿದ್ದಾರೆ, ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಕಾವಿ ರಾಜಕಾರಣ ಮಾಡುವದು ಶೋಭೆಯಲ್ಲವೆಂದ ಭದ್ರೆಯವರು, ತಮ್ಮ ಜಾತಿಯವರನ್ನೆ ಮುಖ್ಯಮಂತ್ರಿ ಮಾಡಬೆಕು ಎಂದು ಹುನ್ನಾರದಲ್ಲಿರುವ ಜಾತಿ ಮಠಾಧೀಶರು ಇಂದು ಮಿಸಲಾತಿಯನ್ನು ಬೀದಿಗೆ ತಂದು ನಿಲ್ಲಿಸಿ, ದಲಿತ ಮುಖ್ಯಮಂತ್ರಿ ಹೆಸರು ಮುನ್ನೆಲೆಗೆ ಬಾರದಂತೆ ಮಾಡುತ್ತಿರುವದು ಆತಂಕದ ವಿಷಯವಾಗಿದೆ, ಆಧುನಿಕ ಸಮಾಜಿಕ ವ್ಯವಸ್ಥೆಯಲ್ಲಿ ಇನ್ನೂ ಅಸ್ಪçಸ್ಯತೆಯನ್ನು ಜೀವಂತವಾಗಿರಿಸಿದ್ದು ಕಂಡು ಬರುತ್ತಿದೆ, ಎಂದ ಅವರು, ರಾಜಕಿಯ ಪ್ರಭಾವ ಶೋಷಿತ ಶಕ್ತಿಯನ್ನು ಕುಂದುಸುತ್ತಿವೆ, ಗಾಳಕ್ಕೆ ತಕ್ಕಂತೆ ಬಳಸಿಕೊಳ್ಳುವ ಜಾಯಮಾನದಲ್ಲಿ ಅಸ್ಪçಸ್ಯರು ನರಳುಂತಾಗಿತ್ತಿದೆ ಎಂದು ಭದ್ರೆ ಮನವರಿಕೆ ಮಾಡಿದರು, ಪ್ರಜಾಪ್ರಭುತ್ವದ ವಿಶ್ವರತ್ನ ಡಾ,ಬಾಬಾಸಾಹೇಬ ಅಂಬೇಡ್ಕರವರ ಚಿಂತನೆಗಳಿಗೆ ಮತ್ತು ಸಂವಿಧಾನಿಕ ಹಕ್ಕುಗಳಿಗೆ ಅಡ್ಡಗಾಲು ಹಾಕು ಕಾವಿ ಮತ್ತು ಖಾದಿ ದಾರಿಗಳು ದಲಿತ ಸಮುದಾಯವನ್ನು ದುಳ್ಳುರಿಗೆ ತಳ್ಳುವ ಉನ್ನಾರದಲ್ಲಿ ಮುಂದೆ ಸಾಗುತ್ತಿದ್ದಾರೆ, ಈ ಅವ್ಯವಸ್ಥೆಯಲ್ಲಿ ಸಮಗ್ರ ಶೋಷಿತ ವರ್ಗ ಜಾಗ್ರತರಾಗದಿದ್ದಲ್ಲಿ ಮುಂದಿನ ದಿನಮಾನಗಳಲ್ಲಿ ದಲಿತರ ಬದುಕು ದಮನಗೊಳ್ಳುವದರಲ್ಲಿ ಸಂದೇಹವಿಲ್ಲ, ಭದ್ರೆಯವರು ಪತ್ರಿಕಾ ಗೊಷ್ಟಿಯಲ್ಲಿ ಮಾರ್ಮಿಕವಾಗಿ ವಿವರಿಸಿದರು, ಈ ಸಂಧರ್ಭದಲ್ಲಿ ರಾಜ್ಯ ಸಂ,ಸAಚಾಲಕರಾದ ಮಲ್ಲಿಕಾರ್ಜುನ ಕ್ರಾಂತಿ ಜಿಲ್ಲಾ. ಸಂ, ಸಂಚಾಲಕರಾದ ಅಜಿಜಸಾಬ್, ಐಕೂರ, ಮಲ್ಲಿಕಾರ್ಜುನ ಕುರುಕುಂದಿ, ಹಾಜರಿದ್ದರು,