ಶಹಪುರ
ಸಮತಾ ಸೈನಿಕ ದಳದ ರಾಜ್ಯ ಅಧ್ಯಕ್ಷರಾದ ಡಾ,ಎಮ್, ವೆಂಕಟಸ್ವಾಮಿ ಯವರು ಇಂದು ನಗರಕ್ಕೆ ಆಗಮಿಸುತ್ತಿದ್ದು ತಮ್ಮ ೭೦ ಹುಟ್ಟು ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಗಿನ ಜಾವದ ಸುಮಾರು ೧೦.೩೦ ಗಂಟೆಗೆ ಶಹಾಪುರ ನಗರಕ್ಕೆ ಆಗಮಿಸುವ ಡಾ.ಎಮ್, ವೆಂಕಟಸ್ವಾಮೀಯವರು ನಗರದ ಮೊಟಗಿ ಹೊಟೆಲ್ ಸಭಾಂಗಣದಲ್ಲಿ ೭೦ ಹುಟ್ಟು ಹಬ್ಬದ ದಿನಾಚರಣೆಯಲ್ಲಿ ಕೆಕ ಕತ್ತರಿಸುವ ಮುಖಾಂತರ ಧಮ್ಮಗಿರ ಬುದ್ದ ವಿಹಾರದ ಅವರಣದಲ್ಲಿ ೭೦ ಗಿಡಗಳನ್ನು ನಟ್ಟು ಚಾಲನೆ ನೀಡುವರು. ನಂತರದಲ್ಲಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳ ಮತ್ತು ಹೊರ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಣೆ ಮಾಡಿ ಶುಭ ಹಾರೈಸಲ್ಲಿದ್ದಾರೆ ಎಂದು ಯಾದಗಿರಿ ಜಿಲ್ಲಾ ಸಮತಾ ಸೈನಿಕ ದಳದ ಅಧ್ಯಕ್ಷರಾದ ಮಾಹೇವ ದಿಗ್ಗಿ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ,