ಶಹಾಪುರ,
ಬೆಂಗಳೂರಿನ ಜನಹಿತ ಐಕೇರ ಸೆಂಟರ್, ಹಿಂದುಪುರ ಡಾ, ಕೃಷ್ಣಮೋಹನ ಜಿಂಕಾ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಅಂದತ್ವ ನಿವಾಹರಣ ಸಂಸ್ಥೆ ಮತ್ತು ತಾಲುಕಾ ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಶಹಾಪುರ ಇವರುಗಳ ಸಂಯುಕ್ತಾಶ್ರೆಯದಲ್ಲಿ ಜೂ,೧ ಮತ್ತು ೨ ರಂದು ಬ್ರಹತ್ ಪ್ರಮಾಣದಲ್ಲಿ ಉಚಿತ ನೇತ್ರ ಶಸ್ತçಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಾಲುಕಾ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿಗಳಾದ ಡಾ, ಯಲ್ಲಪ್ಪ ಪಾಟೀಲ ಹುಲಕಲ್ ರವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದರು, ಅವರು ಈ ಕುರಿತು ಹೆಳಿಕೆಯೊಂದನ್ನು ನೀಡಿ,ಅಂದು ೩೫೦ರಿಂದ ೫೦೦ ಜನರವರೆಗೆ ನೇತ್ರ ಶಸ್ತçಚಿಕಿತ್ಸೆ ಮಾಡುವ ಗುರಿ ಹೊಂದಲಾಗಿದೆ, ಏರಡು ದಿನಗಳ ಕಾಲ ನಡೆಯುವ ಈ ಉಚಿತ ನೇತ್ರ ಶಸ್ತçಚಿಕಿತ್ಸಾ ಶಿಬಿರದಲ್ಲಿ ದೀರ್ಘಕಾಲ ನೇತ್ರ ಶಸ್ತçಚಿಕಿತ್ಸೆ ಮಾಡಿ ಯಸಸ್ವಿಯಾಗಿರುವ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ನೇತ್ರ ಶಸ್ತçಚಿಕಿತ್ಸೆಗೆ ಕಾರಣರಾದ ಡಾ, ಕೃಷ್ಣ ಮೋಹನ ಜಿಂಕಾರವರ ತಂಡ ಪ್ರತಮ ಬಾರಿಗೆ ಆಗಮಿಸುತ್ತಿದ್ದು ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು, ನೇತ್ರ ಶಸ್ತç ಚಿಕಿತ್ಸೆಗೆ ಬರುವಾಗ ಅದಾರ ಕಾರ್ಡ, ಪಡಿತರ ಚೀಟಿ,ಗಳನ್ನು ಮೋಬೈಲ್ ನಂಬರ ,ಕಡ್ಡಾಯವಾಗಿ ತರಬೇಕು, ನೇತ್ರ ಚಿಕಿತ್ಸೆಗೆ ಒಳಪಡುವ ರೋಗಿಗಳು ಸರ್ಕಾರಿ ಆಸ್ಪತ್ರೆಯ ನೇತ್ರ ತಜ್ಞರಿಂದ ದೃಡಪಟ್ಟಲ್ಲಿ ಮಾತ್ರ ಶಸ್ತçಚಿಕಿತ್ಸೆಗೆ ಯೋಗ್ಯರಾಗಿರುತ್ತಾರೆ. ಪ್ರಥಮದಲ್ಲಿ ಬಿ,ಪಿ ಸುಗರ ಮಾಡಿಸಿಕೊಳ್ಳುವದು ಕಡ್ಡಾಯವಾಗಿದೆ, ಡಾ, ಯಲ್ಲಪ್ಪ ಪಾಟೀಲರವರು ತಿಳಿಸಿದ್ದಾರೆ ,ತಜ್ಞ ವೈಧ್ಯರಾದ ಡಾ, ಬೈರಾಮಡಗಿ ಡಾ.ಚಂದ್ರಶೇಖರ . ರಾಚನಗೌಡ ಸೇರಿದಂತೆ ಆರೋಗ್ಯ ಸಿಬ್ಬಬಂದಿಯವರು ಹಾಜರಿದ್ದರು.
ಶಸ್ತç ಚಿಕಿತ್ಸೆಗೆ ಒಳಗಾದ ರೋಗಿಗಳಿಗೆ ಕ್ರಾಂತಿವೀರ ಸಂಗೋಳಿ ರಾಯಣ್ಣ ಅಭಿಮಾನಿ ಬಳಗದಿಂದ ಊಟದ ವ್ಯವಸ್ಥೆ ಮಾಡಲಾಗಿದೆ, ಶಿವಣ್ಣ ಟಣಕೆದಾರ ಕವಿತಾ ಟೆಂಟ್ ವ್ಯವಸ್ಥೆ ಮಾಡುತ್ತಿದ್ದಾರೆ, ಶಹಾಪುರ ಮಾರ್ಟ ಮಾಲ್ ರವರು ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ, ಕಾರಣ ಸಾವ್ಜನಿಕ ಹಿತದೃಷ್ಟಿಯಿಮದ ಗರ್ಭಣಿ ಸ್ತಿçಯವರು ತುರ್ತು ಚಿಕಿತ್ಸೆ ಸಮಯದಲ್ಲಿ, ಗರ್ಭಣಿಯರಿಗೆ ಸಿಜರಿಯನ್ ಶಸ್ತçಚಿಕಿತ್ಸೆಗಳಿಗೆ ಯಾವುದೆ ಅಡೆತೆಯಾಗದಂತೆ ದೋರನಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ, ಹೆಚ್ಚಿನ ಮಾಹಿತಗಾಗಿ ನೇತ್ರಾದಿಕಾರಿ ಬಸವರಾಜ ೯೯೦೦೫೮೫೭೮೪ ಸಂಗಣ್ಣ ನುಚ್ಚಿನ, ಆರೋಗ್ಯ ಹಿರಿಯ ನೀರಿಕ್ಷಣಾಧಿಕಾರಿಗಳು ಮೋ,೯೯೮೦೭೭೬೯೬೭, ಮಂಜುನಾಥ ಮೋ,೯೬೮೬೮೫೭೯೮೯ರವರನ್ನು ಕಂಡು ಮಾಹಿತಿ ಪಡೆದುಕೊಳ್ಳಬೇಕು,
ಡಾ,ಯಲ್ಲಪ್ಪ ಪಾಟೀಲ್ ಹುಲಕಲ್,
ಆಡಳಿತ ವೈಧ್ಯಾಧಿಕಾರಿಗಳು ಸಾರ್ವಜನಿಕ ಆಸ್ಪತ್ರೆ ಶಹಾಪುರ,