ಶಹಾಪುರ,
ಶುಕ್ರವಾರ ರಾತ್ರಿ ಬಿಸಿದ ಬಿರುಗಾಳಿಗೆ ನಗರದ ಚಾಮುಂಡಿ ನಗರದಲ್ಲಿ ಮರಯೊಂದು ಟೀನ್ ಶೆಡ್ ಮೆಲೆ ಬಿದ್ದು ತಂದೆ ಐವರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ, ಕಾಲೋನಿಯಲ್ಲಿ ಟೀನ್ ಹಾಕಿಕೊಂಡು ಮನೆ ಇಲ್ಲದೆ ನಿರಾಶ್ರೀತ ಕುಟುಂಬ ನಡೆಸುತ್ತಿರುವ ಹುಸೇನಸಾಬ್ ಬೆಂಡೆಗAಬಳಿ ಎನ್ನವರ ಟೀನ್ ಶಡ್ ಮೇಲೆ ಈ ಹೆಮ್ಮರ ಉರಿಳಿದೆ, ಅಲ್ಲಾವಲಿ ದರ್ಗಾದ ಈ ಮರ ರಾತ್ರಿ ಬಿಸಿದ ಬಿರುಗಾಳಿಗೆ ಮುರಿದು ಬಿದ್ದಿದೆ,ಪತ್ನಿ ವಿಯೋಗದಿಂದ ತನ್ನ ಐವರು ಮಕ್ಕಳೊಂದಿಗೆ ಶೆಡ್ ನಲ್ಲಿ ಶುಕ್ರವಾರ ರಾತ್ರಿ ಮಲಗಿಕೊಂಡಿದ್ದ ಹುಸೇನಸಾಬ್ ರಾತ್ರಿ ರಬಸದ ಗಾಳಿಗೆ ಮರ ತನ್ನ ಶೆಡ್ ಮೇಲೆ ಬಿದ್ದಾಗ ಜೀವ ಭಯದಿಂದ ಮಕ್ಕಳೊಂದಿಗೆ ಹೊರಗಡೆ ಬಂದಿದ್ದಾನೆ, ಸ್ವಲ್ಪದರಲ್ಲೆ ಅಪಾಯದ ಅಂಚಿನಿAದ ಹುಸೇನಸಾಬ್ ಕುಟುಂಬ ಪಾರಾಗಿದೆ, ಈ ದುಸ್ಥಿತಿ ಉಂಟಾದರೂ ಕಂದಾಯ ಅಧಿಕಾರಿಗಳು ಅರಣ್ಯ ಇಲಾಖೆಯವರು ನಗರಸಭೆ ಅಧಿಕಾರಿಗಳು ಮರ ಬಿದ್ದ ಶೆಡ್ ಕಡೆಗೆ ಬರಲಿಲ್ಲವೆಂದು ಸ್ಥಳಿಯ ಸುತ್ತಮುತ್ತಲಿನ ಮನೆಗಳ ಮುಖಂಡರು ಯುವಕರು ಈ ಬಿದ್ದ ಮರವನ್ನು ತೆರವುಗೊಳಿಸವಲ್ಲಿ ಹರಸಾಹಸ ಮಾಡಿದರು, ರಜೆ ಬಂದರೆ ಸಾಕು ಯಾವುದೆ ಅಪಾಯಗಳು ಸಂಭವಿಸಿದರೂ ಯಾರ ಅಧಿಕಾರಿಗಳು ಕ್ಯಾರೆ ಅನ್ನುವದಿಲ್ಲ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದರು, ಮುಮದೆ ಬರುವ ಮಳೆಗಳು ಗಾಳಿಗಳಿಗೆ ಹೆಚ್ಚು ಅನಾವುತಗಳು ಸಂಭವಿಸುವ ಸಂಭವನೀಯಗಳಿದ್ದು ನಗರಸಭೆ ಅಧಿಕಾರಿಗಳು ಸಂಭAಧಪಟ್ಟ ಕಂದಾಯ ಅಧಿಕಾರಿಗಳು ಘಟನೆ ಸ್ಥಳಕ್ಕೆ ಬೇಟ್ಟಿ ನೀಡಿ ಪರೀಶೀಲನೆ ಮಾಡಿ ಅನೂಕೂಲ ಮಾಡಿಕೊಡಬೇಕು ಎಂದು ಬಿಜೆಪಿ ಮುಖಂಡರಾದ ಅಡಿವೆಪ್ಪಾ ಜಾಕಾ ಆಗ್ರಹಿಸಿದರು, ಬಡ ಕುಟುಂಬದ ಬುಸೇನಸಾಬನ ಸಹಕಾರಕ್ಕೆ ಯಾವುದೆ ಸರ್ಕಾರಿ ಆಧಿಕಾರಿಗಳು ಬಾರದೆ ಇಂದು ದಿನ ಕುಟುಂಬ ಸಮೇತ ಪರದಾಡಿದರು, ಪ್ರಕೃತಿ ವಿಕೋಪಕ್ಕೊಳಗಾದ ಈ ಹುಸೇನಸಾಬ್ ಕುಟುಂಬಕ್ಕೆ ಒಂದು ಆಶ್ರೆಯ ಮನೆ ನಿರ್ಮಿಸಿಕೊಡಬೇಕು ಎಂದು ಅವರು ನಗರಸಭೆಗೆ ಒತ್ತಾಯಿಸಿದರು, ಜೀವ ಭಯದ ಚಾಯೆಯಲ್ಲಿರುವ ಈ ಕುಟುಂಬಕ್ಕೆ ಸರ್ಕಾರ ನೇರವು ನೀಡಬೆಕು ಎಂದು ಅವರು ತಿಳಿಸಿದ್ದಾರೆ,