ಗ್ರಾ,ಪಂ, ಪಿಡಿಓಗೆ ತಾ,ಪಂ, ಎ,ಡಿ, ಹೆಚ್ಚುವರಿ ಹುದ್ದೆ!
ಶಹಾಪುರ,
ಗ್ರಾ,ಪಂ, ಹುದ್ದೆಯನ್ನು ಮರೆತು ಪ್ರಬಾರಿ ಹೆಚ್ಚುವರಿ ಹುದ್ದೆಯಲ್ಲೆ ಕರ್ತವ್ಯ ನಿರ್ವಹಣೆ ಮಾಡಿ ತನ್ನ ಹುದ್ದಗೆ ಪ್ರಭಾರಿ ಪಿಡಿಓ ನಿಯೋಜನೆ ಮಾಡಿಸಿದ ಅಧಿಕಾರಿ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರಗತಿಪರ ಸಂಘಟನೆಗಳ ಮುಖಂಡರಾದ ಸಿದ್ದಯ್ಯ ಹಿರೆಮಠರವರು ಆಗ್ರಹ ಮಾಡಿದ್ದಾರೆ. ಕಾನೂನು ನೀತಿ ಗಾಳಿಗೆ ತೂರಿಕೊಂಡು ಏರಡು ವµಆಡಳಿತಾತ್ಮಕ ಹಿತದೃಷ್ಟಿಯಿಂದ ಶಹಾಪುರ ತಾ,ಪಂ, ಖಾಲಿಯಾಗಿರುವ ಸಾಹಾಯಕ ನಿರ್ಧೇಶಕರ ಹುದ್ದೆಗೆ ವನದುರ್ಗಾ ಗ್ರಾ,ಪಂ, ಅಭಿವೃದ್ದಿ ಅಧಿಕಾರಿಗಳಿಗೆ ಜಿ,ಪಂ, ಆಡಳಿತ/೧/೨೧೧೬೭/೨೦೨೨-೨೩ರಲ್ಲಿ ದಿ,೨೨-೧೨-೨೦೨೨ರಂದು ಜಿ,ಪಂ, ಯಾದಗಿರಿ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳು ಆದೇಶ ನೀಡಿ, ಸದರಿ ಆದೇಶದಲ್ಲಿ ಸಾಹಾಯಕ ನಿಧೇಶಕರ ಪ್ರಬಾರಿ ಹುದ್ದೆಯನ್ನು ಹೆಚ್ಚುವರಿಯಾಗಿ ವಹಿಸಿಕೊಳ್ಳಲು ತಿಳಿಲಾಗಿತ್ತು, ಆದೇಶದ ಹೊರಡಿಸಿದ ಬೆನ್ನಲ್ಲೆ ಈ ಅಭಿವೃದ್ದಿ ಅಧಿಕಾರಿ ತಾ,ಪಂ, ಕಚೇರಿಯಲ್ಲೆ ಪ್ರಬಾರಿ ಹುದ್ದೆಯಲ್ಲೆ ಕುಳಿತುಕೊಂಡು. ವನದುರ್ಗಾ ಅಭಿವೃದ್ದಿ ಅಧಿಕಾರಿ ಹುದ್ದೆಯನ್ನೆ ಕೈಬಿಟ್ಟು. ಮಡಿವಾಳಪ್ಪ ಎನ್ನವ ಪಿಡಿಓ ಹೆಗಲಿಗೆ ಪ್ರಭಾರ ಹಾಕಿ ಕೈತೊಳೆದುಕೊಂಡಿದ್ದಾರೆ. ಸರ್ಕಾರದ ನೀತಿ ನೀಯಮಗಳನ್ನು ಮೀರಿ ಸಾಹಾಯಕ ಪ್ರಬಾರಿ ಹುದ್ದೆಯಲ್ಲೆ ರಾರಾಜಿಸುವ ವನದುರ್ಗಾ ಅಭಿವೃದ್ದಿ ಅಧಿಕಾರಿಗೆ ಮಾಸಿಕ ವೇತನ ಪಿಡಿಓ ವನದುರ್ಗಾ ಎಂದು ಪಡೆಯುತ್ತಿದ್ದಾರೆ, ಒಂದೆ ಗ್ರಾ,ಪಂ,ಗೆ ಇಬ್ಬರು ಪಿಡಿಓ ಅಧಿಕಾರಿಗಳು ಅಧಿಕಾರ ಮಾಡುತ್ತಾ ಬಂದಿದ್ದಾರೆ, ಎಂದು ಮುಖಂಡರಾದ ಸಿದ್ದಯ್ಯಸ್ವಾಮೀ ಹಿರೆಮಠರವರು ಆರೋಪ ವ್ಯಕ್ತಪಡಿಸಿದ್ದಾರೆ, ಮಾರ್ಚ ೨೦೨೩ರಿಂದ ೨೦೨೪ರವರೆಗೂ ಗೋಗಿ ಕೆ,ಗ್ರಾ,ಪಂ,ಅಭಿವೃದ್ದಿ ಅಧಿಕಾರಿಗಳು ವನದುರ್ಗಾ ಗ್ರಾ,ಪಂ, ಪ್ರಭಾರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ಹಾಜರಾತಿಯಲ್ಲಿ ಸಹಿ ಮಾಡುತ್ತಾ ಬಂದಿದ್ದಾರೆ, ಮೂಲಹುದ್ದೆಗಳನ್ನು ಬಿಟ್ಟು ರಾಜಕೀಯ ಪ್ರಭಾವ ಮತ್ತು ಜಿ,ಪಂ,ಕಚೇರಿಯಲ್ಲೆ ಕೇಲವು ಅಧಿಕಾರಿಗಳ ಕುಮ್ಮಕ್ಕುಗಳಿಂದ ಇಂದು ಅಭಿವೃದ್ದಿ ಅಧಿಕಾರಿಗಳು ಮೂಲ ಹುದ್ದೆಗಳನ್ನು ಬಿಟ್ಟು ಪ್ರಭಾರಿ ಸ್ಥಾನದಲ್ಲಿದ್ದಾರೆ, ಹಿಂದಿನ ತಾ,ಪಂ, ಕಾಯ್ನಿರ್ವಾಹಣಾಅಧಿಕಾರಿಗಳು ತಮ್ಮ ಇಚ್ಚಾನುಸಾರವಾಗಿ ಕಾನೂನು ನೀತಿ ನೀಯಮಗಳನ್ನು ಗಾಳಿಗೆ ತೂರಿ ಗ್ರಾ,ಪಂ, ಮೂಲಸ್ಥಾನ ಖಾಲಿಯಾಗಿದ್ದರೂ. ಈ ಅಧಿಕಾರಿಗಳ ಕೈಚಳಕದಿಂದ ಇಂದು ೨೪ ಗ್ರಾ,ಪಂ,ಗಳಲ್ಲಿ ಪ್ರಭಾರಿ ಪಿಡಿಓಗಳ ದರ್ಭಾರ ನಡೆಯುತ್ತಿದೆ, ಸಾಹಾಯಕ ನಿರ್ಧೇಶಕರ ಹುದ್ದೆಯಲ್ಲಿರುವ ಪಿಡಿಓ ರವರಿಗೆ ಈಗಾಗಲೆ ಜಿ,ಪಂ, ಕಾರ್ಯಾಲಯದಿಂದ ಜಿ,ಪಂ, ಆ/೧/೨೧೧೬೭ /೨೦೨೨ ಅದೇಶದಹಿನ್ನಲೆಯಲ್ಲಿ ದಿ,೬-೪-೨೦೨೪ ಅಧಿಕೃತ ಜ್ಞಾಪನಾಪತ್ರದಂತೆ ಚುನಾವಣೆ ನೀತಿ ನಿಯಮಗಳ ಪ್ರಕ್ರೀಯ ಮುಗಿದ ಮೇಲೆ ಗ್ರಾ,ಪಂ, ಹುದ್ದಗೆ ನಿಯೋಜನೆ ಮಾಡಬೇಕು ಎಂದು ತಿಳಿಸಿಲಾಗಿದೆ, ಆದರೂ ಈ ಅಭಿವೃದ್ದಿ ಅಧಿಕಾರಿ ಎಡಿ ಕುರ್ಚಿಗೆ ಅಂಟಿಕೊAಡು ಪಿಡಿಓ ಕರ್ತವ್ಯವನ್ನು ಉಲ್ಲಂಘನೆ ಮಾಡಿದ್ದಾರೆ, ಈ ಕುರಿತು ಕಾನೂನು ಕ್ರಮ ಕೈಗೊಳ್ಳಬೆಕು ಎಂದು ಹಿರೆಮಠ ಅವರು ಆಗ್ರಹಿಸಿದ್ದಾರೆ,