ಶಹಾಪುರ,
ಆಹಾರ ಮತ್ತು ನಾಗರಿಕ ಪೂರೈಕೆ ಮಂತ್ರಿ, ಹಿರಿಯ ರಾಜಕಾರಣಿ ಕೆ,ಎಚ್,ಮುನಿಯಪ್ಪನವರು ಇಂದು ಶಹಾಪುರ ನಗರಕ್ಕೆ ಆಗಮಿಸಲಿದ್ದು, ನಗರದಲ್ಲಿ ಮತಯಾಚನೆ ಮಾಡಲಿದ್ದಾರೆ, ಅಂದು ನಡೆಯುವ ಮತಯಾಚನೆ ಕಾರ್ಯಕ್ರಮದಲ್ಲಿ ತಾಲುಕಿನ ಸಮಗ್ರ ಎಸ್,ಸಿ,, ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮತಯಾಚನೆಯಲ್ಲಿ ಪಾಲ್ಗೊಂಡು ಸಚಿವರ ಮಾರ್ಗದರ್ಶನದಲ್ಲಿ ಮುನ್ನಡೆಯಲು ಆಗಮಿಸಬೆಕು ಎಂದು ತಾಲುಕಾ ಕಾಂಗ್ರೆಸ್ ಎಸ್,ಸಿ, ಘಟಕದ ಅಧ್ಯಕ್ಷರಾದ ಭೀಮರಾಯ ಕಾಂಗ್ರೆಸ್ ಮುಖಂಡರಾದ ಶಾಂತಪ್ಪ ಕಟ್ಟಿಮನಿ, ವೆಂಕಟೇಶ ಆಲೂರವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.