ಏ,೨೫ರಂದು ಹಿರಿಯ ನಾಗರಿಕರ ವಿಕಲಚೇತನರಿಗಾಗಿ ಮನೆಯಲ್ಲಿ ಮತದಾನ!!


ಶಹಾಪುರ,
ಚುನಾವಾಣಾ ಆಯೋಗದ ಆದೇಶದನ್ವಯ ಮುಂಬರುವ ಮೇ.೭ ರಂದು ನಡೆಯಲ್ಲಿರುವ ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ, ಏ,೨೫ರಂದು ಹಿರಿಯ ನಾಗರಿಕರು, ಅಂದರೆ ೮೫ ವರ್ಷ ಮೇಲ್ಪಟ್ಟ ವಯೋ ವೃದ್ದರು, ವಿಕಲಚೇತನರು ಮನೆಯಲ್ಲೆ ಮತದಾನ ಮಾಡಲು ಶಹಾಪುರ ಸಾಹಾಯಕ ಚುನಾವಣಾ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಚುನಾವಣೆ,/೧೨ /೨೦೨೩ -೨೪ ರಂತೆ ದಿ, ೧೯-೪-೨೦೨೪ರ ಆದೇಶದಂತೆ ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಹಿರಿಯ ನಾಗರಿಕರ ಮತ್ತು ವಿಕಲಚೇತನರ ಮತದಾನಕ್ಕಾಗಿ,೧೦ ಸೆಕ್ಟರ್ ತಂಡಗಳು ರಚನೆ ಮಾಡಲಾಗಿದೆ, ಎಂದು ತಿಳಿಸಿದ ಅವರು ಕ್ಷೇತ್ರದಲ್ಲಿ ಒಟ್ಟು ೧೬೩ ಜನ ಹಿರಿಯ ನಾಗರಿಕರ ಮತದಾರರಿದ್ದು,ಅದರಲ್ಲಿ ೩೯ ಜನ ಪುರುಷ ಮತ್ತು ೧೨೪ ಮಹಿಳಾ ಹಿರಿಯ ನಾಗರಿಕ ಮತದಾರರಿದ್ದಾರೆ. ಅಲ್ಲದೆ ೬೪ ಜನ ವಿಕಲಚೇತನರಿದ್ದು ಅವರಲ್ಲಿ ೨೪ ಪುರುಷರು. ೪೦ ಮಹಿಳಾ ವಿಕಲಚೇತನ ಮತದಾರರಿದ್ದಾರೆ, ಅಂದು ಏ,೨೫ರಂದು ಮತದಾನ ಮಾಡಲು ಸಾಹಾಯಕ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

English Kannada