ಎರಡು ಸ್ವೀಪರ್ ಕೊಚ್ ನಾನ್ ಎಸಿ, ಬಸ್ ಗೆ ಸಚಿವ ದರ್ಶನಾಪುರ ಚಾಲನೆ.


ಶಹಾಪುರ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿAದ ಶಹಾಪುರ ನಗರದಿಂದ ಬೆಂಗಳೂರ ರಾಜಧಾನಿಗೆ ಎರಡು ಸ್ಲೀಪರ್ ಕೊಚ್ ನಾನ್ ಎಸಿ, ಬಸ್‌ಗಳಿಗೆ ಸಣ್ಣ ಕೈಗಾರಿಕಾ ಸಾರ್ವಜನಿಕ ಉಧ್ಯಮಗಳ ಮಂತ್ರಿ, ಶರಣಬಸ್ಸಪ್ಪಗೌಡ ದರ್ಶನಾಪುರವರು ಚಾಲನೆ ನೀಡಿದರು. ಈ ಸಾರಿಗೆ ವ್ಯವಸ್ಥೆಯಿಂದ ಸಾರ್ವಜನಿಕ ಪ್ರಯಾಣ ಆರೋಗ್ಯ ರಕ್ಷಣೆಗೆ ಪೂರಕವಾಗುತ್ತದೆ. ಪ್ರಯಾಣಿಕರು ರಾತ್ರಿ ಸಮಯದಲ್ಲಿ ನಿದ್ರೆ ಮಾಡಿಕೊಂಡು, ಬೆಳಗಿನ ಜಾವದಲ್ಲೆ ರಾಜಧಾನಿ ಬೆಂಗಳೂರ ತಲುಪುಬಹುದಾಗಿದೆ, ಈ ವಿಶ್ರಾಂತಿಯಿAದ ಜನರಿಗೆ ತಮ್ಮ ಕಾರ್ಯಚಟುವಟಿಕೆಗಳು ತಿವೃಗತಿಯಲ್ಲಿ ಮಾಡಿಕೊಳ್ಳಲು ಈ ಸ್ಲೀಪರ್ ಬಸ್ ಸಹಕಾರಿಯಾಗುತ್ತದೆ ಎಂದು ಸಚಿವ ದರ್ಶನಾಪುರವರು ಹೇಳಿದರು, ಈ ಸಮಯದಲ್ಲಿ ಉತ್ತರ ಕರ್ನಾಟಕ ಕರವೇ ಅಧ್ಯಕ್ಷರಾದ ಡಾ, ಶರಣು ಗದ್ದುಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಸುನಿಲಕುಮಾರ ಚಂದ್ರಗಿರಿ.ಸAಚಲನಾ ಅಧಿಕಾರಿಗಳಾದ ಮಲ್ಲಿಕಾರ್ಜುನ,ಹಿರೆಮಠ.ವಿಭಾಗೀಯ ತಾಂತ್ರಿಕ ಅಧಿಕಾರಿ ಪ್ರಶಾಂತ ಸುರುಪುರಕರ್. ಘಟಕದ ವ್ಯವಸ್ಥಾಪಕರಾದ ಅಕ್ಬರ್ ಬಾಷಾ ಹೊಟಗಿ. ಮುಖಂಡರಾದ ಹಣಮಂತ್ರಾಯಗೌಡ ರಾಖಮಗೇರಾ. ನಗರಸಭೆ ಸದಸ್ಯರಾದ ಶಿವುಕುಮಾರ ತಳವಾರ, ಬಸವರಾಜ ಚೆನ್ನೂರ. ಯುವ ಮುಖಂಡರಾದ ಸೈಯದ್ ಇಸಾಕ ಹುಸೇನಿ. ಕಾಲಿದ್ ಭೀಮರಾಯ ಕದರಾಪುರ.ಮಾನಯ್ಯ ಹತ್ತಿಗೂಡೂರ. ಸೇರಿದಂತೆ ಅನೇಕ ಗಣ್ಯರು ಹಿರಿಯರು, ಪ್ರಯಾಣಿಕರು ಹಾಜರಿದ್ದರು.

Leave a Reply

Your email address will not be published. Required fields are marked *

English Kannada