ಶಹಾಪುರ: ನಗರ ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ವಸಂತಕುಮಾರ ಬಿನ್ ಮಲ್ಲಪ್ಪ ಅವರನ್ನು ನೇಮಿಸಿ ವಸತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ-2 ಜಿ.ಲಕ್ಷ್ಮಣ ಆದೇಶ ನೀಡಿದ್ದಾರೆ.
ಶಾಸಕ ಶರಣಬಸಪ್ಪ ದರ್ಶನಾಪುರ ಅವರು ವಸಂತಕುಮಾರ ಬಿನ್ ಮಲ್ಲಪ್ಪ ಅವರನ್ನು ಶಹಾಪುರ ನಗರ ಆಶ್ರಯ ಸಮಿತಿಗೆ ಅಧ್ಯಕ್ಷರನ್ನಾಗಿ ನಾಮ ನಿರ್ದೇಶನ ಮಾಡುವಂತೆ ಕೋರಿದ್ದರಿಂದ ನೇಮಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.