ಮಲ್ಲು ಗುಳಗಿ
ಶಹಾಪೂರವಾಣಿ-ನ.27 ಸುರಪುರದ ತಹಸೀಲ್ ಕಾರ್ಯಲಯದಲ್ಲಿ ಶುಕ್ರವಾರದಂದು ನೂತನ ತಹಸೀಲ್ ದಾರ ಸುಬ್ಬಣ್ಣ ಜಮಖಂಡಿಯವರು ಅಧಿಕಾರ ಸ್ವೀಕರಿಸಿದರು. ವಾರದ ಹಿಂದೆ ನಿಂಗಣ್ಣ ಬಿರಾದಾರ್ ಅವರು ಇಲಕಲ್ ಗೆ ವರ್ಗಾವಣೆಯಾಗಿ ಹೋಗಿದ್ದರು. ಅವರ ಜಾಗಕ್ಕೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜಮಖಂಡಿ ಗ್ರಾಮದ ಸುಬ್ಬಣ್ಣ ಅವರು ಬಂದಿದ್ದು ಇವರು ಸೇಡಂ ನಲ್ಲಿ ಸಹಾಯಕ ಆಯುಕ್ತರ ಇಲಾಖೆಯಲ್ಲಿ ಗ್ರೇಡ್-2 ತಹಸೀಲ್ ದಾರ ಆಗಿ ಕೆಲಸ ನಿರ್ವಹಿಸುತ್ತಿದ್ದರು ಹಾಗೂ 2 ವರ್ಷದ ಹಿಂದೆ ಶಹಾಪೂರದಲ್ಲಿ ತಹಸೀಲ್ ದಾರರಾಗಿ ಕಾರ್ಯನಿರ್ವಹಿಸಿದ್ದಾರೆ. ನೂತನ ತಹಸೀಲ್ ದಾರ ಸುಬ್ಬಣ್ಣ ಅವರನ್ನು ಶಿರಸ್ತೆದಾರ ಅಶೋಕ ಸುರಪುರಕರ್ ಶಾಲು ವದಿಸಿ ಸನ್ಮಾನಿಸಿದರು.