ಮಾಜಿ ಶಾಸಕರಿಗೆ ಶುಭಾಶಯ ಕೋರಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ

ಮಲ್ಲು ಗುಳಗಿ

ಶಹಾಪೂರವಾಣಿ-ನ.23 ಸೋಮವಾರ ದಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ಅವರು ಸುರಪುರದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಮನೆಗೆ ಭೇಟಿ ನೀಡಿ ಮಾಜಿ ಶಾಸಕರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ರಾಯಚೂರ ಜಿಲ್ಲೆಯ ಮಸ್ಕಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ಅವರು ಬಸವಕಲ್ಯಾಣಕ್ಕೆ ಹೋಗುವಾಗ ಸುರಪುರದ ಗಾಂಧೀಜಿ ವೃತ್ತದಿಂದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಮನೆಯವರೆಗೆ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪ ಚುನಾವಣೆಯಲ್ಲಿ ನಿಮ್ಮ ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿನ ಕೊರತೆಯಿಂದ ಸೋಲಲು ಕಾರಣವಾಯಿತಾ ಎಂಬ ಪತ್ರಕರ್ತರ ಪ್ರಶ್ನೇಗೆ ಉತ್ತರಿಸಿದ ಡಿ.ಕೆ.ಶಿ.ಯವರು ನಮ್ಮ ರಾಜ್ಯದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ.ಕೆಲವೊಂದು ಕಾರಣದಿಂದ ಸೋತಿದ್ದು ನಿಜ.ಕೆಲ ಬೇರೆ ರಾಜ್ಯದಲ್ಲಿ ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯ ಇರುವುದು ಸತ್ಯ ಈಗಾಗಲೇ ನಮ್ಮ ಹೈಕಮಾಂಡ್ ಸರಿಪಡಿಸುವ ಕೆಲಸ ಮಾಡುತ್ತಿದೆ. ಮಸ್ಕಿ ಹಾಗೂ ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಪಕ್ಷ ಏನೂ ಎಂಬದನ್ನು ತಿಳಿಸುತ್ತೇವೆ ಕಾದು ನೋಡಿರಿ ಎಂದರು. ಮರಾಠಿಗರ ಅಭಿವೃದ್ಧಿ ನಿಗಮ ಸ್ಥಾಪಿಸಿ 50 ಕೋ.ರೂ. ಮೀಸಲು ಇಡಲು ಮುಂದಾಗಿರುವುದು ಬಿಜೆಪಿಯವರು ಸಮಾಜವನ್ನು ಹೊಡೆಯುವ ಕೆಲಸ ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು. ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ, ತಾಪಂ.ಮಾಜಿ ಅಧ್ಯಕ್ಷ ರಾಜಾ ಮೌನೇಶ ನಾಯಕ,ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ,ನಗರಸಭೆ ಮಾಜಿ ಅಧ್ಯಕ್ಷರಾದ ಅಬ್ದುಲ್ ಗಫಾರ್ ನಗನೂರಿ,ಮಹಿಬೂಬ ಒಂಟಿ,ನಗರ ಪ್ರಾಧಿಕಾರ ಮಾಜಿ ಅಧ್ಯಕ್ಷ ಸೂಗುರೇಶ ವಾರದ,ನಗರಸಭೆ ಸದಸ್ಯರಾದ ಸೋಮನಾಥ ಡೋಣ್ಣಿಗೇರಿ, ನಾಸೀರ ಕುಂಡಾಲೆ,ಖಮುರಲ್ ನಾರಾಯಣಪೇಠ್ ,ಕಾಂಗ್ರೆಸ್ ಯುವ ಮುಖಂಡರಾದ ರಾಜಾ ರೂಪಕುಮಾರ,ರಾಜಾ ವೇಣುಗೋಪಾಲ ನಾಯಕ,ರಾಜಾ ಸಂತೋಷನಾಯಕ,ನರಾಗರಸಭೆ ಮಾಜಿ ಸದಸ್ಮ ವೆಂಕಟೇಶ ಹೊಸಮನಿ, ಆದಪ್ಪ ಹೊಸಮನಿ, ಪೂಜಾರಿ ದೇವಿಕೇರಿ,ಧರ್ಮಣ್ಣ ತಿಮ್ಮಾಪೂರ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

English Kannada