ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ, ನಗರಸಭೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಸ್ಥಾನದ ಮೀಸಲಾತಿಗೆ, ನ್ಯಾಯಾಲಯ ಹಸಿರು ನಿಸಾನೆ ತೊರಿರುವ ಹಿನ್ನಲೆಯಲ್ಲಿ, ಸರ್ಕಾರ ನಿಗಿದಿತ ಮೀಸಲಾತಿ ಅನ್ವಯ ಅಧ್ಯಕ್ಷರ ಉಪಾಧ್ಯಕ್ಷರ ಚುನಾವಣೆ ನೆಡೆಯಿತು. ಶಹಾಪುರ ನಗರಸಭೆಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನ ಎಸ್,ಟಿ, ಗೆ ಮೀಸಲಾಗಿತ್ತು.ಕಾಂಗ್ರೆಸ್, 16 ಸದಸ್ಯರು, ಬಿಜೆಪಿ 12 ಸದಸ್ಯರ, ಮತ್ತು ಎಸ್,ಡಿ,ಪಿಐ, 2 ಜನ ಸದಸ್ಯರು, ಮತ್ತು ಪಕ್ಷೇತರ ಒಬ್ಬರು ಸೇರಿ ಒಟ್ಟು 31 ಜನರ ಸಂಖ್ಯಾ ಬಲ ಹೊಂದಿದೆ. ಈ ಶಹಾಪುರ ನಗರಸಭೆಗೆ ಶನಿವಾರ ನೂತನ ಅಧ್ಯಕ್ಷರ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನೆಡೆಯಿತು. ಯಾದಗಿರಿ ಸಾಹಾಯಕ ಆಯುಕ್ತರಾದ. ಶಂಕರಗೌಡ ಸೊಮನಾಳರವರು ಚುನಾವಣೆ ಅಧಿಕಾರಿಗಳಾಗಿ ಆಗಮಿಸಿದ್ದರು. ನಗರದ ವಾರ್ಡ ನಂ.23 ರ ಸದಸ್ಯರಾದ, ಶ್ರೀಮತಿ ಶಹನಾಜಬೇಗಂ, ಮಹಮ್ಮದ ಮುಸ್ತಾಫ ದರ್ಬಾನ, ಅಧ್ಯಕ್ಷ ಸ್ಥಾನಕ್ಕೆ ಓರ್ವರೆ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಎಸ್,ಟಿ, ಸದಸ್ಯರು ಓರ್ವ ಮಹಿಳೆ ಇರುವ ಹಿನ್ನಲೆಯಲ್ಲಿ,ಭೀಮಾಬಾಯಿ ಗಂ ದೇವಿಂದ್ರಪ್ಪನವರು ನಾಮಪತ್ರ ಸಲ್ಲಿಸಿದ್ದರು, ಇರ್ವರ ನಾಮಪತ್ರಗಳು ಕ್ರಮ ಬದ್ದವಾಗಿದ್ದರಿಂದ, ಪ್ರತಿಸ್ಪರ್ಧಿಗಳಿಲ್ಲದ ಕಾರಣ ಅಧ್ಯಕ್ಷರಾಗಿ, ಶಹನಾಜಬೇಗಂ, ಮತ್ತು ಉಪಾಧ್ಯಕ್ಷರಾಗಿ, ಭೀಮಾಬಾಯಿಯವರು ಅವಿರೋಧ ಆಯ್ಕೆಯಾದರು. 16 ಸಂಖ್ಯಾ ಬಲ ಹೊಂದಿದ ಕಾಂಗ್ರೆಸ್, ಗೆ 2 ಜನ ಎಸ್,ಡಿ,ಪಿ,ಐ, ಒಬ್ಬರು ಪಕ್ಷೇತರರು, ಸದಸ್ಯರು ಮತ್ತು ಶಾಸಕರು, ಬೆಂಬಲ ವ್ಯಕ್ತಪಡಿಸಿದ್ದರಿಂದ, ಒಟ್ಟು ಬೆಂಬಲಿತರ ಸಂಖ್ಯೆ 20 ಕ್ಕೇರಿತ್ತು. ಅಧಿಕ ಸಂಖ್ಯಾಬಲ ಹೊಂದಿದ, ಕಾಂಗ್ರೆಸ್, ನಗರಸಭೆ ಆಡಳಿತ ತನ್ನ ತೆಕ್ಕೆಗೆ ಸೆಳೆಯುದರಲ್ಲಿ ಸಫಲವಾಯಿತು. ಕೊನೆಯಲ್ಲಿ ಸಾಹಾಯಕ ಆಯುಕ್ತರು, ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಅವಿರೋಧ ಘೋಷಣೆಯನ್ನು ಸಾದರಪಡಿಸಿದರು. ಈ ಸಭೆಯಲ್ಲಿ ಶಾಸಕರಾದ, ಶರಣಬಸ್ಸಪ್ಪಗೌಡ ದರ್ಶನಾಪುರ, ಸಾಹಾಯಕ ಚುನಾವಣೆ ಅಧಿಕಾರಿಗಳು, ತಹಿಸಿಲ್ದಾರರಾದ, ಜಗನಾಥರಡ್ಡಿ, ಪ್ರಭಾರ ನಗರಸಭೆ ಆಯುಕ್ತರಾದ, ಪ್ರಕಾಶ, ಮತ್ತು ನಗರಸಭೆ ಯೊಜನಾಧಿಕಾರಿ, ದೇವಿಂದ್ರ ಹೆಗಡೆ, ಶಹಾಪುರ ನಗರ ಠಾಣಾ ಪಿ,ಎಸ್,ಐ, ಚಂದ್ರಕಾಂತ ಮ್ಯಾಕಲೆ, ನಗರಸಭೆ ಸರ್ವ ಸದಸ್ಯರು, ಸಿಬ್ಬಂದಿಯವರು, ಹಾಜರಿದ್ದರು.