ಸಾಮಾಜಿಕ ಮೌಲ್ಯ ಮತ್ತು ನಿಷ್ಪಕ್ಷಪಾತ ನಡೆ ಪತ್ರಿಕೆ ಧರ್ಮ

ಪತ್ರಿಕಾ ದಿನಾಚರಣೆ

.

ಜುಲೈ ೧ ಇಂದು ಪತ್ರಿಕಾ ದಿನಾಚರಣೆ, ಮಂಗಳೂರು ಸಮಾಚಾರ ವಾರಪತ್ರಿಕೆ ಜನ್ಮತಾಳಿದ ಈ ದಿನ (೧೮೪೩)ಪತ್ರಿಕಾ ದಿನಾಚರಣೆಯಾಗಿ ಆಚರಿಸಲ್ಪಡುತ್ತಿದೆ.
ಎಲ್ಲರಿಗೂ ತಿಳಿದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೇ ಆಧಾರ ಸ್ಥಂಬವಾಗಿ-ಅಂಗವಾಗಿ ಮಾಧ್ಯಮಗಳನ್ನು ಪರಿಗಣಿಸಲಾಗಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯ್ಯಾಂಗದಂತೆ ನಾಲ್ಕನೆಯದ್ದಾಗಿ ಪತ್ರಿಕಾಂಗ ಕಾರ್ಯನಿರ್ವಹಿಸುತ್ತಿದೆ.
ಸದೃಢ ಪ್ರಜಾಪ್ರಭುತ್ವಕ್ಕೆ, ವ್ಯಕ್ತಿಯ ಸರ್ವಾಧಿಕಾರಿ ಧೋರಣೆಗೆ ಚುಕ್ಕಾಣಿಯಾಗಿ ಹಿಡಿತ ಸಾಧಿಸಲು ಈ ನಾಲ್ಕು ಅಂಗಗಳ ಕಾರ್ಯ ಪ್ರಭಲವಾದದ್ದಾಗಿದೆ. ಜನತಂತ್ರ ರಕ್ಷಣೆಗೆ ಮಾಧ್ಯಮ ಸ್ವತಂತ್ರ ಅನಿವಾರ್ಯ.
ಪ್ರಜೆಗಳ, ಜನಸಾಮಾನ್ಯರ ದ್ವನಿ ಎಂದೆ ಹೇಳಲಾಗುವ ಪತ್ರಿಕೆಗಳ ಕೂಗಿಗೆ ನಿಯಂತ್ರಣವಾದರೆ ಅದು ಜನ ದ್ವನಿಗೆ ತಡೆಯೊಡ್ಡಿದಂತೆಯೆ ಸರಿ. ಪ್ರಜಾಸತ್ತೆಯ ಉಳಿವಿಗಾಗಿ ಮಾಧ್ಯಮಗಳು ಸ್ವತಂತ್ರ ಆದರೂ ಸಾಮಾಜಿಕ ನೈತಿಕ ಮೌಲ್ಯಗಳ ಕಡಿವಾಣ ಅತ್ಯಗತ್ಯ.
ಪ್ರಜಾಸತ್ತಾತ್ಮಕ, ರಾಷ್ಟ್ರದ ಅಭಿವೃದ್ಧಿಗೆ ಪತ್ರಿಕೆಗಳ ಪಾತ್ರ ಮಹತ್ತರವಾದದ್ದು, ಜನತೆಯ ಆಶೋತ್ತರಗಳನ್ನು ಸರಕಾರದ ಗಮನಕ್ಕೆ ತಂದು ಪರಿಹಾರ ತಂದುಕೊಳ್ಳುವ ಪ್ರಯತ್ನ ನಿರಂತರ ನಡೆದೆ ಇರುತ್ತದೆ.

ಪತ್ರಿಕೆಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಭರದಲ್ಲಿ ಸಾಮಾಜಿಕ ಮೌಲ್ಯ ಮರೆತು ನಿಷ್ಪಕ್ಷಪಾತವಾಗದೆ ಪಕ್ಷಪಾತಿಯಾಗಿ ನಡೆದರೆ ನಾಗರೀಕರ ಮೇಲೆ ಅನ್ಯಾಯವೆಸಗಿದಂತಾಗುತ್ತೆ. ಇದರಿಂದ ಅರಾಜಕತೆ ಅಶಾಂತಿ, ಗಲಭೆಗೆ ಕಾರಣವಾಗುತ್ತದೆ.

ಹಾಗಾಗಿ ಪತ್ರಿಕೆಗಳು ಸಾರ್ವತ್ರಿಕವಾಗಿ ಮೌಲ್ಯಗಳನ್ನು ಎತ್ತಿ ಹಿಡಿಯುವುದರೊಂದಿಗೆ ಸ್ವಾತಂತ್ರ್ಯ ಅಭಿವ್ಯಕ್ತಿಯಲ್ಲಿ ಸಮೃದ್ಧ ಪ್ರಜಾಪ್ರಭುತ್ವಕ್ಕೆ ನಾಂದಿಯಾಗಬೇಕು.

ವಚನ ಸಾಹಿತಿ-ಪತ್ರಕರ್ತ
ವೀರಣ್ಣ ಕಲಕೇರಿ.

Leave a Reply

Your email address will not be published. Required fields are marked *

English Kannada