ಶಹಾಪುರ ಗುಡುಗು ಸಿಡಲಿನ ಮಳೆಗೆ ರಸ್ತೆ ಕುರಿಹಟ್ಟಿ ಮನೆಗಳು ಜಲಾವೃತ,200 ಕೊಳಿಗಳು ನೀರು ಪಾಲು

ಶಹಾಪುರವಾಣಿ

ಶನಿವಾರ ರಾತ್ರಿ ಸುರಿದ ಗುಡುಗು ಸಿಡಲಿನ ಮಳೆಗೆ ನಗರ ಪಟ್ಟಣ ಹಳ್ಳಿಗಳಲ್ಲಿನ ಹಳ್ಳ ಕೊಳ್ಳಗಳು ಕೊಚ್ಚಿ ಹೊಗಿದ್ದು ಅಲ್ಲದೆ,ರಸ್ತೆ,ಚರಂಡಿ ಮನೆಗಳು, ಕುರಿಹಟ್ಟಿಗಳು ಜಲಾವೃತವಾದರೆ, 200 ಕೊಳಿಗಳು ಹರಿಯುವ ನೀರು ಪಾಲಾಗಿವೆ,ಅಬ್ಬರಿಸಿದ ಜವರಾಯ ಅಬ್ಬರಕ್ಕೆ ಬಿತ್ತನೆಯಾದ ಹೊಗದ್ದೆಗಳಲ್ಲಿ ನೀರು ಅವರಿಸಿಕೊಂಡಿದ್ದು, ಬೆಳೆಗಳು ಹಳ್ಳದ ಮಡುವಿನಲ್ಲಿ ಮುಳುಗಿವೆ.

ಶಹಾಪುರ ಅವೈಜ್ಞಾನಿಕ ಚರಂಡಿ ರಸ್ತೆಗೆ ನೀರು

ದಾರಾಕಾರವಾಗಿ ಸುರಿದ ಮಳೆಯಿಂದ ಶಹಾಪುರ ನಗರದ ಅನೇಕ ನಗರ ಕಾಲೋನಿಗಳಲ್ಲಿ ಚರಂಡಿಗಳು ತುಂಬಿಕೊಂಡು ರಸ್ತೆಗೆ ನಿಂತು ಮನೆಗಳಿಗೆ ನುಗ್ಗಿವೆ,ಈ ಹಿಂದೆ ಕೊಟ್ಯಾಂತರ ರೂ,ಗಳನ್ನು ವೆಚ್ಚ ಮಾಡಿ ಶಹಾಪುರ ನಗರ ರಾಷ್ಟ್ರೀಯ ಹೆದ್ದಾರಿ, ಬೀದರ ಬೆಂಗಳೂರ ರಸ್ತೆಯೂದ್ದಕ್ಕೂ ಚರಂಡಿ ನಿರ್ಮಾಣ ಮಾಡಲಾಗಿತ್ತು, ಅವೈಜ್ಞಾನಿಕ ಚರಂಡಿಯಿಂದ ಮಳೆ ಅರ್ಭಟಕ್ಕೆ ಶಹಾಪುರ ನಗರದ ಬಸವೇಶ್ವರ ವೃತ್ತ, ಗ್ಯಾರೆಜ್ ಲೈನ, ಡಿಗ್ರಿ ಕಾಲೆಜು ಹಳ್ಳದ ದಡದಲ್ಲಿರುವ ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ.ಇಲ್ಲಿನ ಮನೆಗಳಿಗೂ ನೀರು ನುಗ್ಗಿ ಮನೆಯಲ್ಲಾ ನೀರು ತುಂಬಿಕೊಂಡು ಕುಟುಂಬಗಳು ಪರಾದಡುವಂತಾಗಿವೆ,ಮಟನ್ ಮಾರುಕಟ್ಟೆಯಲ್ಲಿನ ಅಂದಾಜು 200 ಕೊಳಿಗಳು ನೀರುಪಾಲಾಗಿವೆ. ಹಳ್ಳದ ನೀರಿಗೆ ಬೈಲಪತ್ತಾರ ಮನೆಗಳು  ನೀರಿನಲ್ಲಿ ಮುಳುಗಿದೆ,ಎಂದು ತಿಳಿದು ಬಂದಿದೆ.

ವಿಭೂತಿಹಳ್ಳಿ,ತಿಪ್ಪನಳ್ಳಿಯಲ್ಲಿ ಮನೆಗೆ ನೀರು

ಜವರಾಯನ ಅಟ್ಟಹಾಸಕ್ಕೆ ಶಹಾಪುರ ತಾಲುಕಿನ ವಿಭೂತಿಹಳ್ಳಿ ಗ್ರಾಮದಲ್ಲಿ ಮನೆಗಳಿಗೆ ನೀರು ತುಂಬಿಕೊಂಡು ಮನೆಯಲ್ಲಿನ ದವಸ ದಾನ್ಯಗಳು ಉಪಜೀವನದ ಕಾಳು ಕಡಿಗಳು ಆಹಾರ ಪಧಾರ್ಥಗಳು, ನೀರು ಅವರಿಸಿಕೊಂಡಿದ್ದು ಅಲ್ಲದೆ ಕುಟುಂಬ ವರ್ಗ ನಿರಾದಾರವಿಲ್ಲದೆ ಕಂಗಾಲಾಗಿದೆ,ಬಟ್ಟೆ ,ವಸ್ತುಗಳು ನೀರು ಹರಿದು ಅವ್ಯವಸ್ಥೆಯಲ್ಲಿ ತೆಲಿ ಹೊಗಿವೆ,ತಿಪ್ಪನಳ್ಳಿ ಗ್ರಾಮದಲ್ಲಿ ಹಳ್ಳದ ನೀರು ನುಗ್ಗಿ ಗ್ರಾಮದ ಅನೇಕ ಮನೆಗಳು ನೀರು ಪಾಲಾಗಿವೆ, ಬಿತ್ತಿದ ಭೂಮಿಯಲ್ಲಿ ನೀರು ಅವರಿಸಿಕೊಂಡು ನಷ್ಟದ ದವಡೆಯಲ್ಲಿ ರೈತರು ನರಳುವಂತಾಗಿದೆ,ಸಾವಿರಾರು ಗಳನ್ನು ವೆಚ್ಚ ಮಾಡಿಕೊಂಡು ಬಿತ್ತನೆ ಮಾಡಿ ಪೈರು ಬೆಳೆಯುವದರಲ್ಲೆ ಮಳೆಯಿಂದ ಮುಳುಗಿ, ರೈತರನ್ನು ಚಿಂತಾಕ್ರಾಂತರನ್ನಾಗಿಸಿದೆ.ಹೊಲಗಳಲ್ಲಿ ಕುರಿ ಹಟ್ಟಿ ನಿರ್ಮಾಣ ಮಾಡಿಕೊಂಡಿದ್ದ 300 ಕುರಿಗಳಿದ್ದ ಕುರಿ ಹಟ್ಟಿ ನೀರಿನಿಂದ ಅವರಿಸಿಕೊಂಡಿದ್ದು,ಕುರಿಗಾರರು ಭಯದ ಚಾಯೆಯಲ್ಲಿ ಮುಳುಗಿದ್ದಾರೆ

.

ಶಹಾಪುರ ಗುಡುಗು ಸಿಡಲಿನ ಮಳೆಗೆ ರಸ್ತೆ ಕುರಿಹಟ್ಟಿ ಮನೆಗಳು ಜಲಾವೃತ,200 ಕೊಳಿಗಳು ನೀರು ಪಾಲು

ಶನಿವಾರ ರಾತ್ರಿ ಸುರಿದ ಗುಡುಗು ಸಿಡಲಿನ ಮಳೆಗೆ ನಗರ ಪಟ್ಟಣ ಹಳ್ಳಿಗಳಲ್ಲಿನ ಹಳ್ಳ ಕೊಳ್ಳಗಳು ಕೊಚ್ಚಿ ಹೊಗಿದ್ದು ಅಲ್ಲದೆ,ರಸ್ತೆ,ಚರಂಡಿ ಮನೆಗಳು, ಕುರಿಹಟ್ಟಿಗಳು ಜಲಾವೃತವಾದರೆ, 200 ಕೊಳಿಗಳು ಹರಿಯುವ ನೀರು ಪಾಲಾಗಿವೆ,ಅಬ್ಬರಿಸಿದ ಜವರಾಯ ಅಬ್ಬರಕ್ಕೆ ಬಿತ್ತನೆಯಾದ ಹೊಗದ್ದೆಗಳಲ್ಲಿ ನೀರು ಅವರಿಸಿಕೊಂಡಿದ್ದು, ಬೆಳೆಗಳು ಹಳ್ಳದ ಮಡುವಿನಲ್ಲಿ ಮುಳುಗಿವೆ.

ಶಹಾಪುರ ಅವೈಜ್ಞಾನಿಕ ಚರಂಡಿ ರಸ್ತೆಗೆ ನೀರು

ದಾರಾಕಾರವಾಗಿ ಸುರಿದ ಮಳೆಯಿಂದ ಶಹಾಪುರ ನಗರದ ಅನೇಕ ನಗರ ಕಾಲೋನಿಗಳಲ್ಲಿ ಚರಂಡಿಗಳು ತುಂಬಿಕೊಂಡು ರಸ್ತೆಗೆ ನಿಂತು ಮನೆಗಳಿಗೆ ನುಗ್ಗಿವೆ,ಈ ಹಿಂದೆ ಕೊಟ್ಯಾಂತರ ರೂ,ಗಳನ್ನು ವೆಚ್ಚ ಮಾಡಿ ಶಹಾಪುರ ನಗರ ರಾಷ್ಟ್ರೀಯ ಹೆದ್ದಾರಿ, ಬೀದರ ಬೆಂಗಳೂರ ರಸ್ತೆಯೂದ್ದಕ್ಕೂ ಚರಂಡಿ ನಿರ್ಮಾಣ ಮಾಡಲಾಗಿತ್ತು, ಅವೈಜ್ಞಾನಿಕ ಚರಂಡಿಯಿಂದ ಮಳೆ ಅರ್ಭಟಕ್ಕೆ ಶಹಾಪುರ ನಗರದ ಬಸವೇಶ್ವರ ವೃತ್ತ, ಗ್ಯಾರೆಜ್ ಲೈನ, ಡಿಗ್ರಿ ಕಾಲೆಜು ಹಳ್ಳದ ದಡದಲ್ಲಿರುವ ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ.ಇಲ್ಲಿನ ಮನೆಗಳಿಗೂ ನೀರು ನುಗ್ಗಿ ಮನೆಯಲ್ಲಾ ನೀರು ತುಂಬಿಕೊಂಡು ಕುಟುಂಬಗಳು ಪರಾದಡುವಂತಾಗಿವೆ,ಮಟನ್ ಮಾರುಕಟ್ಟೆಯಲ್ಲಿನ ಅಂದಾಜು 200 ಕೊಳಿಗಳು ನೀರುಪಾಲಾಗಿವೆ. ಹಳ್ಳದ ನೀರಿಗೆ ಬೈಲಪತ್ತಾರ ಮನೆಗಳು  ನೀರಿನಲ್ಲಿ ಮುಳುಗಿದೆ,ಎಂದು ತಿಳಿದು ಬಂದಿದೆ.

ಜವರಾಯನ ಅಟ್ಟಹಾಸಕ್ಕೆ ಶಹಾಪುರ ತಾಲುಕಿನ ವಿಭೂತಿಹಳ್ಳಿ ಗ್ರಾಮದಲ್ಲಿ ಮನೆಗಳಿಗೆ ನೀರು ತುಂಬಿಕೊಂಡು ಮನೆಯಲ್ಲಿನ ದವಸ ದಾನ್ಯಗಳು ಉಪಜೀವನದ ಕಾಳು ಕಡಿಗಳು ಆಹಾರ ಪಧಾರ್ಥಗಳು, ನೀರು ಅವರಿಸಿಕೊಂಡಿದ್ದು ಅಲ್ಲದೆ ಕುಟುಂಬ ವರ್ಗ ನಿರಾದಾರವಿಲ್ಲದೆ ಕಂಗಾಲಾಗಿದೆ,ಬಟ್ಟೆ ,ವಸ್ತುಗಳು ನೀರು ಹರಿದು ಅವ್ಯವಸ್ಥೆಯಲ್ಲಿ ತೆಲಿ ಹೊಗಿವೆ,ತಿಪ್ಪನಳ್ಳಿ ಗ್ರಾಮದಲ್ಲಿ ಹಳ್ಳದ ನೀರು ನುಗ್ಗಿ ಗ್ರಾಮದ ಅನೇಕ ಮನೆಗಳು ನೀರು ಪಾಲಾಗಿವೆ, ಬಿತ್ತಿದ ಭೂಮಿಯಲ್ಲಿ ನೀರು ಅವರಿಸಿಕೊಂಡು ನಷ್ಟದ ದವಡೆಯಲ್ಲಿ ರೈತರು ನರಳುವಂತಾಗಿದೆ,ಸಾವಿರಾರು ಗಳನ್ನು ವೆಚ್ಚ ಮಾಡಿಕೊಂಡು ಬಿತ್ತನೆ ಮಾಡಿ ಪೈರು ಬೆಳೆಯುವದರಲ್ಲೆ ಮಳೆಯಿಂದ ಮುಳುಗಿ, ರೈತರನ್ನು ಚಿಂತಾಕ್ರಾಂತರನ್ನಾಗಿಸಿದೆ.ಹೊಲಗಳಲ್ಲಿ ಕುರಿ ಹಟ್ಟಿ ನಿರ್ಮಾಣ ಮಾಡಿಕೊಂಡಿದ್ದ 300 ಕುರಿಗಳಿದ್ದ ಕುರಿ ಹಟ್ಟಿ ನೀರಿನಿಂದ ಅವರಿಸಿಕೊಂಡಿದ್ದು,ಕುರಿಗಾರರು ಭಯದ ಚಾಯೆಯಲ್ಲಿ ಮುಳುಗಿದ್ದಾರೆ.

ಸಗರ ಸರ್ಕಾರಿ ಆಸ್ಪತ್ರೆ ನೀರಿನಲ್ಲಿ

ಶಹಪುರ ತಾಲುಕಿನ ಸಗರ ಗ್ರಾಮದಲ್ಲಿಯ ಸರ್ಕಾರಿ ಮಳೆಯ ನೀರಿನಲ್ಲಿ ಜಲಾವೃತಗೊಂಡಿದೆ, ಆಸ್ಪತ್ರೆಯ ಮುಂಭಾಗದಲ್ಲಿ ನಿಲ್ಲಿಸಲಾದ ಕಾರು ಚೀಪ್ ನೀರಿನಲ್ಲಿ ನಿಂತಿವೆ.ಸಗರ ಗ್ರಾಮದ ಯುಕೆಪಿ ಕ್ಯಾಂಪ್ ನಲ್ಲಿ ದಾರಕಾರ ಮಳೆಗೆ ರಸ್ತೆಗಳು ಮುಳುಗಿದ್ದು ಜನರ ಓಡಾಟಕ್ಕೆ ತೀರಾ ತೊಂದರೆ ಉಂಟಾಗಿದೆ.ನೂರಾರು ಎಕರೆಗಳಲ್ಲಿ ಬಿತ್ತನೆ ಮಾಡಲಾದ ಜಮಿನುಗಳಲ್ಲಿ ಮಳೆಯಿಂದ ಸಂಪೂರ್ಣ ನೀರು ಅವರಸಿಕೊಂಡು ಬೆಳೆ ನಷ್ಟದ ಸಂಕಷ್ಟದಲ್ಲಿ ರೈತರನ್ನು ನರಳುವಂತೆ ಮಾಡಿದೆ,

Leave a Reply

Your email address will not be published. Required fields are marked *

English Kannada