ಪರೀಕ್ಞಾ ಮುನ್ನಾ ಕೊರಾನ್ ತಪಾಸಣೆ 10 ಸಾವಿರ ಮಾಸ್ಕ ವಿತರಣೆ
ಶಹಾಪುರ;-ಇಂದು ಪ್ರಾರಂಭಗೊಳ್ಳುವ ಎಸ್,ಎಸ್,ಎಲ್,ಸಿ, ಪರೀಕ್ಷೆಗೆ, ಶಹಾಪುರ ತಾಲುಕಿನಲ್ಲಿ ಒಟ್ಟು 4551 ವಿಧ್ಯಾರ್ಥಿಗಳು, ಪರೀಕ್ಷೆಗೆ ಹಾಜರಾಗಲ್ಲಿದ್ದು, ಪರೀಕ್ಷಾ ಕೊಣೆ ಪ್ರವೇಶಕ್ಕೂ ಮುನ್ನಾ, ಎಲ್ಲಾ ವಿಧ್ಯಾರ್ಥಿಗಳಿಗೆ ಕೊರಾನ್ ಪರೀಕ್ಷೆ ಮತ್ತು ಮಾಸ್ಕ ನೀಡಿ ಪ್ರವೇಶಕ್ಕೆ ಅನೂಕೂಲ ಮಾಡಿಕೊಡಲಾಗುತ್ತದೆ, ತಪಾಷಣೆಗೆ ಪ್ರತಿ ಎಸ್,ಎಸ್,ಎಲ್,ಸಿ, ಕೆಂದ್ರದಲ್ಲಿ ಥರ್ಮಸ್ಕ್ಯಾನಿಂಗ ಮಷೀನ, ಹಾಗೂ ಉಷ್ಣಂಶ ತಪಾಚಣೆಗೆ ವ್ಯವಸ್ಥೆ ಮಾಡಲಾಗಿದೆ, ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ,ರುದ್ರಗೌಡ ಪಾಟೀಲ್ ರವರು ಪತ್ರಿಕೆಗೆ ತಿಳಿಸಿದರು. ಅವರು ನಿನ್ನೆ ಪತ್ರಕರ್ತರೊಂದಿಗೆ ಈ ವಿಷಯ ಪ್ರಸ್ತಾಪಿಸಿ, ವಿವರಣೆ ನೀಡಿದರು. ಶಹಾಪುರ ತಾಲುಕಿನಲ್ಲಿ ಒಟ್ಟು 16 ಎಸ್,ಎಸೆಲ್,ಸಿ, ಪರೀಕ್ಷಾ ಕೆಂದ್ರಗಳಿದ್ದು, ನಗರದಲ್ಲಿ 6 ಪರೀಕ್ಷಾ ಕೆಂದ್ರಗಳಿವೆ. ಪ್ರತಿ ಪರೀಕ್ಷಾ ಕೊಣೆಯಲ್ಲಿ ಪ್ರತಿ 6 ಪೀಟಿಗೆ ಒಬ್ಬರಂತೆ, ಒಂದು ಡಸ್ಕೆ ಗೆ ಇಬ್ಬರು, ವಿಧ್ಯಾರ್ಥಿಗಳಂತೆ ಒಂದು ಪರೀಕ್ಷಾ ಕೊಣೆಯಲ್ಲಿ 18 ಜನ ವಿಧ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆಯವ, ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಸ್ಥೆಗೊಳಿಸಲಾಗಿದೆ. ಎಂದ ಅವರು, ಹೊರ ರಾಜ್ಯದಿಂದ ಯಾವುದೆ ವಿಧ್ಯಾರ್ಥಿಗಳು ಬರುವದಿಲ್ಲ, ಆದರೆ ಹೊರ ಜಿಲ್ಲೆ ತಾಲುಕಾ ಕೆಂದ್ರಗಳಿಂದ ಶಹಾಪುರ ಪರೀಕ್ಷಾ ಕೆಂದ್ರದಗಳಲ್ಲಿ ಒಟ್ಟು 139 ವಿಧ್ಯಾರ್ಥಿಗಳು ಆಗಮಿಸಲಿದ್ದಾರೆ, ಅಲ್ಲದೆ ನಮ್ಮ ತಾಲುಕಿನಿಂದ ಹೊರ ಜಿಲ್ಲೆ ತಾಲುಕಾ ಕೆಂದ್ರಗಳಿಗೆ ಒಟ್ಟು 94 ಜನ ವಿಧ್ಯಾರ್ಥಿಗಳು, ಪರೀಕ್ಷೆ ಬರೆಯಲು ಹೊಗುತ್ತಿದ್ದಾರೆ,ಎಂದು ಬಿಇಓ ರವರು ಮಾಹಿತಿ ನೀಡಿದರು.
ಕ್ವಾರಂಟೀನ ಜೊನ್ ನಗಡಿ ಕೆಮ್ಮು ವಿಧ್ಯಾರ್ಥಿಗಳಿಗೆ ಪ್ರತೇಕ ಪರೀಕ್ಷೆ
ಕೊರಾನ್ ವೈರಸ್ ತಪಾಷಣೆಯಿಂದ, ಪಾಜಟೀವ್ ಸಂಖ್ಯೆ ಹೆಚ್ಚಾಗಿದ್ದ ಹಿನ್ನಲೆಯಲ್ಲಿ ಕ್ವಾರಂಟೀನ್ ಜೊನ್, ಮತ್ತು ವಿಧ್ಯಾರ್ಥಿಗಳಿಗೆ ನಗೆಡಿ ಕೆಮ್ಮು ಜ್ವರಗಳು ಉಂಟಾದಲ್ಲಿ, ಅವರಿಗಾಗಿ ಪ್ರತಿ ಪರೀಕ್ಷಾ ಕೆಂದ್ರಗಳಲ್ಲಿ ಹೆಚ್ಚುವರಿಯಾಗಿ 2 ಪ್ರತೇಕ, ಪರೀಕ್ಷಾ ಕೊಣೆಗಳನ್ನು ಸಿದ್ದಪಡಿಸಲಾಗಿದ್ದು, ಅವುಗಳಿಗೆ ಪ್ರತಿ ದಿನ ಶೆನಟ್ರೈಜರ್ ಸಂಪರಣೆ ನಿರಂತರಗೊಳಿಸಲಾಗಿದೆ, ಎಂದು ಕ್ಷೇತ್ರ ಶಿಕ್ಷಾಧಿಕಾರಿಗಳು ಮನವರಿಕೆ ಮಾಡಿದರು. ಈಗಾಗಲೆ ಕ್ವಾರಂಟೀನ್ ಜೊನ್ ಏರಿಯಾಗಳಲ್ಲಿ ವಾಸ ಮಾಡುವ 160 ಜನ, ವಿಧ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ದ್ರಾವಣ ಮತ್ತು ಸ್ವಾಬ್ ಟೆಷ್ಟ ಮಾಡಲಾಗಿದ್ದು, ಪರೀಕ್ಷೆ ಪೂರ್ವದಲ್ಲೆ ವರದಿ ತರಿಸಿಕೊಳ್ಳಲು ಸರ್ಕಾರ ದೃಡ ನಿರ್ಧಾರ ಕೈಗೊಂಡಿದೆ.ಎಂದು ರುದ್ರಗೌಡ ಪಾಟೀಲರವರು ಸಮಗ್ರ ವಿವರಣೆ ನೀಡಿದರು.
ಪರೀಕ್ಷೆ ಕೆಂದ್ರಗಳಿಗೆ ನೇಮಕ.
ಎಸ್,ಎಸ್.ಎಲ್.ಸಿ, ಪರೀಕ್ಷೆ ಸುಗದಿಂದ ನೆಡೆಯುವ ಸದುದ್ದೇಶದಿಂದ, 16 ಜನ ಮುಖ್ಯ ಅಧಿಕ್ಷಕರು, 16 ಜನ ಅಧಿಕಾರಿಗಳು ಸ್ವಾಡ್ಸ,, 16 ಜನ ಕಾಯ್ದಿರಿಸಿದ ಸ್ಕಾಡಗಳು.ಪರೀಕ್ಷಾ ಕೊಣೆಗೆ ಎರಡು ಜನ, ಮೆಲ್ವಿಚಾರಕರು, ಪ್ರತಿ ಪರೀಕ್ಷಾ ಕೆಂದ್ರದಲ್ಲಿ 2 ಜನ ಸ್ಕಾಟ್ ಗೈಡ್ಸ ವಿಧ್ಯಾರ್ಥಿಗಳು., ನೇಮಕ ಮಾಡಿಕೊಂಡಿದ್ದು,ಸಿ,ಆರ್,ಪಿಯವರನ್ನು ಪರೀಕ್ಷಾ ನೊಡಲ್ ಅಧಿಕಾರಿಗಳಾಗಿ ನಿಯೊಜನೆ ಗೊಳಿಸಲಾಗಿದೆ.
ಪರಿಕ್ಷಾರ್ಥಿಗಳಿಗೆ ಕೈತೊಳೆಯಲು ನಿತ್ಯ 92 ಲಿ. ಸೆನಟ್ರೈಜರ ಬಳಿಕೆ.
ಪರೀಕ್ಷಾ ಕೆಂದ್ರಗಳಿಗೆ ಬರುವ ವಿಧ್ಯಾರ್ಥಿಗಳಿಗೆ ಪರೀಕ್ಷಾ ಕೊಣೆ ಪ್ರವೇಶಕ್ಕೂ ಮುನ್ನಾ, ಪ್ರತಿ ವಿಧ್ಯಾರ್ಥಿ ಸೆನಟ್ರೈಜರನಿಂದ ಕೈತೊಳೆದುಕೊಳ್ಳಬೇಕು, ಎನ್ನವ ಉದ್ದೇಶದಿಂದ ಪ್ರತಿ ಪರೀಕ್ಷಾ ಕೆಂದ್ರಗಳಲ್ಲಿ ಸೆನಟ್ರೈಜರ್ ವ್ಯವಸ್ಥೆ ಮಾಡಲಾಗಿದ್ದು, ಆರೋಗ್ಯ ಇಲಾಖೆ ಈ ಕ್ರಮಕ್ಕಾಗಿ 92 ಲೀಟರ್ ಸೆನಟ್ರೈಜರ ನೀಡಿದೆ,ಪ್ರತಿ ಕೊಣೆಯನ್ನು ಪ್ರತಿ ದಿನ ಸಿಂಪರಣೆ ಮಾಡಲು 80 ಲೀಟರ್ ದ್ರಾವಣ ನೀಡಿದ್ದಾರೆ. ಈ ಕಾರ್ಯಕ್ಕಾಗಿ ಸ್ಥಳಿಯ ಸಿಬ್ಬಂದಿಯವರನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.ಪರೀಕ್ಷಾ ಪೂರ್ವ ತಯ್ಯಾರಿಯಲ್ಲಿ ಅಧಿಕಾರಿಗಳು ಸಜ್ಜಾಗಿದ್ದು, ಕೆಲಸ ಕಾರ್ಯಗಳು ಬರದಿಂದ ಸಾಗಿವೆ, ಎಂದು ಕ್ಷೇತ್ರ ಶಿಕ್ಷಾಣಾಧಿಕಾರಿ ತಿಳಿಸಿದರು.
ಕೊಟ್
ಪರೀಕ್ಷಾರ್ಥಿಗಳಿಗೆ 36 ಬಸ್.10 ಸಾವಿರ ಮಾಸ್ಕ ವ್ಯವಸ್ಥೆ
ಶಹಾಪುರ ತಾಲುಕಿನಲ್ಲರುವ 16 ಎಸ್,ಎಸ್,ಎಲ್,ಸಿ, ಪರೀಕ್ಷಾ ಕೆಂದ್ರಗಳಿಗೆ ಬರುವ ವಿಧ್ಯಾರ್ಥಿಗಳಿಗಾಗಿ ಸರ್ಕಾರ ಪ್ರತಿ ಕೆಂದ್ರಕ್ಕೆ ಬರುವದಕ್ಕಾಗಿ 36 ಬಸ್ ಗಳನ್ನು ಓಡಿಸಲಾಗುತ್ತಿದ್ದು ಪರೀಕ್ಷಾರ್ಥಿ ಮಾತ್ರ ಪ್ರಯಾಣಕ್ಕೆ ಅನುಕೂಲ ಮಾಡಲಾಗಿದೆ, ಪರೀಕ್ಷಾ ಮುಗಿಯುವವರೆಗೂ ಬಸ್ ಆಯಾ ಪರೀಕ್ಷಾ ಕೆಂದ್ರಗಳಲ್ಲಿ ನಿಲ್ಲುತ್ತದೆ, ನಂತರದಲ್ಲಿ ಬಂದ ವಿಧ್ಯಾರ್ಥಿಗಳನ್ನು ಮರಳಿ ಸ್ವಗ್ರಾಮಕ್ಕೆ ಕಳಿಸಲಾಗುತ್ತದೆ. ಇದಕ್ಕಾಗಿ 21 ಮಾರ್ಗಗಳನ್ನು ಸಿದ್ದಪಡಿಸಲಾಗಿದೆ.ಪ್ರತಿ ಬಸ್ ನಲ್ಲಿ ದ್ರಾವಣ ಸಿಂಪರಣೆ ಮಾಡಲಾಗುತ್ತದೆ.ಅಲ್ಲದೆ ಪ್ರತಿ ವಿಧ್ಯಾರ್ಥಿಗೆ ಮಾಸ್ಕ ಧರಸಿಕೊಳ್ಳಲು, ಈಗಾಗಲೆ ಸರ್ಕಾರ 10 ಸಾವಿರ ಮಾಸ್ಕಗಳನ್ನು ನೀಡಿದೆ, ಪರೀಕ್ಷಾ ಕೆಂದ್ರಕ್ಕೆ ಬರುವ ಎಲ್ಲಾ ವಿಧ್ಯಾರ್ಥಿಗಳಿಗೆ ಮಾಸ್ಕ ನೀಡಿ ಕಳಿಸಲಾಗುತ್ತದೆ.