ಮಲ್ಲು ಗುಳಗಿ
ಶಹಾಪೂರವಾಣಿ-ಜೂನ್ 19 ಯಾದಗಿರಿ ಜಿಲ್ಲೆಯಲ್ಲಿ ಕೊರಾನಾ ವೈರಸ್ ನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಲ್ಲದೆ ಸುರಪುರದಲ್ಲಿ ಇಂದು ಶುಕ್ರವಾರ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಸ್ಟಾಪ್ ನರ್ಸ್ ಹಾಗೂ ಆಕೆಯ ಪತಿ ನಿರ್ವಾಹಕ ಕಮ್ ಚಾಲಕನಿಗೆ ಕೊರಾನಾ ಪಾಸಿಟಿವ್ ದೃಢವಾಗಿವೆ ಎಂದು ತಾಲೂಕಾ ಆರೋಗ್ಯಧಿಕಾರಿ ಡಾ:ರಾಜಾ ವೆಂಕಪ್ಪನಾಯಕ ಅವರು ತಿಳಿಸಿದರು. ಪತಿ-ಪತ್ನಿಯರಿಬ್ಬರಲ್ಲಿ ಯಾರಿಗೆ ಮೊದಲು ಪಾಸಿಟಿವ್ ಯಾರಿಗೆ ಬಂದಿರಬಹುದು ಎಂಬ ಬಗ್ಗೆ ಪತ್ತೆ ಹಚ್ಚಲಾಗುತ್ತಿದೆ ಎಂದು ತಿಳಿದು ಬಂದಿದೆ. ಸುರಪುರದಲ್ಲಿ ಇದುವರೆಗೂ 6 ಹೊಸ ಪ್ರಕರಣಗಳು ಕಂಡು ಬಂದಿದ್ದು ಅದರಲ್ಲಿ ಇಬ್ಬರೂ ಗುಣಮುಖರಾಗಿ ಮನೆಗೆ ಹೋಗಿದ್ದಾರೆ
ನಿನ್ನೆ ಗುರುವಾರ ಇಬ್ಬರೂ ಆಶಾ ಕಾರ್ಯಕರ್ತಯರಿಗೆ ಸೊಂಕು ದೃಢವಾಗಿತ್ತು ಇಂದು ಮತ್ತೆ ಸ್ಟಾಪ್ ನರ್ಸ್ ಹಾಗೂ ಆಕೆಯ ಪತಿಗೆ ಬಂದಿರುವ ಸೊಂಕಿನ ಬಗ್ಗೆ ಟ್ರಾವೆಲ್ ಹಿಸ್ಟರಿ ಎಷ್ಟು ಜನರೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಅಧಿಕಾರಿಗಳಿಗೆ ತಲೆ ನೋವಾಗಿ ದೆ.ಶಾಸಕರು, ತಾಲೂಕಾಡಳಿತ , ನಗರಸಭೆ ,ಆರೋಗ್ಯ,ಪೊಲೀಸ್ ಇಲಾಖೆಯವರು ಸುರಪುರದಲ್ಲಿ ಕಡ್ಡಾಯವಾಗಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು,ಸ್ಯಾನೀಟೈಸರ್ ಉಪಯೋಗಿಸಿ ಎಂದು ಆರಂಭದಿಂದಲೂ ಜನ ಜಾಗೃತಿ ಮೂಡಿಸುತ್ತಿದ್ದಾರೆ ಆದರೆ ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್ ನಲ್ಲಿದ್ದ ಕೆಲವರಿಗೆ ಸೊಂಕು ಕಂಡು ಬಂದಿದ್ದರಿಂದ ಜನರು ಮಾತ್ರ ನಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲವೆಂಬಂತೆ ಮದುವೆ,ತೊಟ್ಟಿಲು ಕಾರ್ಯಕ್ರಮಗಳಲ್ಲಿ ಹಾಗೂ ತರಕಾರಿ ಮಾರುಕಟ್ಟೆ ಸೇರಿದಂತೆ ವಿವಿದೆಡೆ ಮಾಸ್ಕ್ ಹಾಕದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ರಾಜಾ ರೋಷವಾಗಿ ಓಡಾಡುವುದು ಸರ್ವೇ ಸಾಮಾನ್ಯವಾಗಿದೆ. ಪಾಸಿಟಿವ್ ನ ಹೊಸ ಪ್ರಕರಣಗಳಿಂದ ಜನರಲ್ಲಿ ಈಗ ಭಯ ಶುರುವಾಗಿದೆ ಎಂಬ ಮಾತು ಕೇಳಿ ಬರುತ್ತಿವೆ. ಕೊರಾನಾ ಸೊಂಕಿನ ಪ್ರಮಾಣ ಹೆಚ್ಚಾಗದಂತೆ ಈಗಲಾದರೂ ಸುರಪುರ ತಾಲೂಕಿನ ಜನತೆ ಜಾಗೃತಿಯಾಗಬೇಕೆಂದು ಶಹಾಪೂರವಾಣಿಯ ಕಳಕಳಿ ಮನವಿಯಾಗಿದೆ.