ಮಾರಕ ರೋಗಗಳಿಂದ ಮುಕ್ತರಾಗಲು ಮಾಸ್ಕ ಧರಸಿ-ಡಿವೈಎಸ್ಪಿ ಹುಗಿಬಂಡಿ
ಶಹಾಪುರವಾಣಿ
ಮಾನವ ಸಂಕುಲಕ್ಕೆ ಮಾರಕವಾದ ವೈರಸ್ ಅಂಟು ರೋಗಗಳು ಇಂದು ಮನುಷ್ಯನ ವಿನಾಶಕಾರಿಯಾಗಿದ್ದು, ಆರೋಗ್ಯಕರ ಬೇಳವಣಿಗೆಗೆ ಮುಂದಾಗಬೇಕು, ಅನಾರೋಗ್ಯದಿಂದ ಬಳಲುವದಕ್ಕಿಂತ ಜಾಗ್ರತಿ ವಹಿಸಿಕೊಂಡು ಸರ್ವರು ಮಾಸ್ಕಗಳನ್ನು ಧರಿಸಬೇಕು, ಎಂದು ಡಿವೈಎಸ್ಪಿ,ವೆಂಕಟೇಶ ಹುಗಿಬಂಡಿ ಕರೆ ನಿಡಿದರು, ಅವರು ಶಹಾಪುರ ನಗರದ ಬಸವೇಶ್ವರ ವೃತ್ತದಲ್ಲಿ ಮಾಸ್ಕ ಡೇ ಆಚರಣೆ ಅಂಗವಾಗಿ ಸಾರ್ವಜನಿಕರಿಗೆ ಮಾಸ್ಕಗಳನ್ನು ನೀಡಿ ಮನವರಿಕೆ ಮಾಡಿದರು,ಕರೊನಾ ವೈರಸ್ ಆತಂಕ ಯಾದಗಿರಿ ಜಿಲ್ಲೆ ಅವರಿಸಿಕೊಂಡಿದ್ದು ಜನರು ಜಾಗ್ರತಿಗೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಸರ್ಕಾರದ ನೀತಿ ನಿಯಮಗಳನ್ನು ಪರಿಪಾಲನೆ ಮಾಡಬೇಕು ಎಂದು ಅವರು ಕರೆ ನಿಡಿದರು, ಈ ಸಂಧರ್ಭದಲ್ಲಿ ಶಹಾಪುರ ಪಿ,ಐ ಹನುಮರಡ್ಡೆಪ್ಪ, ಪಿಎಸ್,ಐ ಚಂದ್ರಕಾಂತ ಮೆಕಾಲೆ. ಸಿದ್ದೇಶ್ವರ ,ದುರ್ಗಪ್ಪ ನಾಯಕ,ಸೇರಿದಂತೆ ಶಹಾಪುರ ಠಾಣಾ ಸಿಬ್ಬಂದಿಯವರು ನಾಗರಿಕರು ಹಾಜರಿದ್ದರು,