::
ರಾಯಚೂರು 12 ,
ಹಳೆಯ ಕಾಲದ ನಾಣ್ಯಗಳು ನೋಟುಗಳು ಬೇರೆ ಬೇರೆ ದೇಶದ ಕರೆನ್ಸಿಗಳು ಸಂಗ್ರಹಿಸುವ ಕಾರ್ಯ ಶ್ಲಾಘನೀಯ ವಿದ್ಯಾರ್ಥಿ ಕೆ.ಸಿ.ವಿಶ್ವರಥ್ ಸಾಧನೆಯು ಉತ್ತಮವಾಗಿದೆ. ನಾಣ್ಯಗಳು ಗತಿಸಿಹೋದ ಇತಿಹಾಸವನ್ನು ಮರುಕಳಿಸುತ್ತವೆ, ಇಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ಸಿ.ಬಿ.ವೇದಮೂರ್ತಿಯವರು ಮಾತನಾಡಿದರು ಅವರಿಂದುಸಂಜೆ ಜಿಲ್ಲಾ ಪೊಲೀಸ್ ಇಲಾಖೆಯ ಅವರ ಕಾರ್ಯಾಲಯದಲ್ಲಿ ರೇಸ್ ಕಾನ್ಸೆಪ್ಟ್ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಕೆ.ಸಿ.ವಿಶ್ವರಥ್ ಅವರು ಸಂಗ್ರಹಿಸಿದ ನಾಣ್ಯ, ನೋಟುಗಳನ್ನು ವೀಕ್ಷಿಸಿ ಅವರಿಗೆ ಸನ್ಮಾನಿಸಿ ಆಶೀರ್ವದಿಸಿದರು ಈ ಸಂದರ್ಭದಲ್ಲಿ ಕಲಾ ಸಂಕುಲ ಸಂಸ್ಥೆಯ ಕಾರ್ಯದರ್ಶಿ ಮಾರುತಿಬಡಿಗೇರ್,ಕಲಾವಿದ ಅಮರೇಗೌಡ,ಪಾಲಕರಾದ ಕೆ.ಸಿ.ವೀರೇಶ ವಕೀಲರು ಇನ್ನಿತರರಿದ್ದರು.