ಶಹಾಪುರವಾಣಿ
ಕಳೆದ ಮೂರು ತಿಂಗಳಿಂದಲೂ ಹಗಲಿರುಳು ಕೊರಾನ್ ವೈರಸ್ ತಡೆಗಾಗಿ ಲಾಕ್ ಡೌನ್ ಜಾರಿಯಿಂದ ನೀತಿ ನಿಯಮಗಳ ಪಾಲನೆಯಲ್ಲಿ ತೊಡಗಿಸಿಕೊಂಡು, ಕರ್ತವ್ಯ ನಿರ್ವಹಿಸುತ್ತಿದ್ದ ಪೋಲಿಸ್ ರಿಗೂ ಸೊಂಕು ತಗಲಿದೆ, ಎನ್ನವ ಆತಂಕದ ಹಿನ್ನಲೆಯಲ್ಲಿ ಸೊಂಕಿತರೆನ್ನಲಾದ ಶಹಾಪುರ ಠಾಣಾ ಪೆದೆ ಸೇರಿದಂತೆ ಎಲ್ಲಾ ಪೋಲಿಸ್ ರಿಗೂ ಹಾಗೂ ಗ್ರಹ ರಕ್ಷಕರಿಗೂ ಕೊರನ್ ಪರೀಕ್ಷೆಗೊಳಪಡಿಸಲಾಗಿತ್ತು, ಎಲ್ಲಾ ಪೋಲಿಸ್ ರ ವರದಿ ನೆಗಟಿವ್ ಬಂದಿದ್ದರಿಂದ ಯಾರೂ ಆತಂಕ ಪಡಬೇಕಿಲ್ಲ,ಠಾಣಾ ಸಿಬ್ಬಂದಿಯವರು ನಿರಾಳರಾಗಿದ್ದಾರೆ, ಆರೋಗ್ಯದಿಂದ ಸದರಡರಾಗಿದ್ದಾರೆ,ಎನ್ನವ ವರದಿ ದೃಡಪಟ್ಟಿದೆ,ಈಶಾನ್ಯ ವಲಯ ಐಜಿಪಿ ಮನಿಷ್ ಖೆರ್ಬೆಕರ್ ರವರು ಭೀಮರಾಯನ ಗುಡಿ ಠಾಣೆಗೆ ಬೇಟಿ ನೀಡಿ ,ಕೊರಾನ್ ವಾರಿಯರ್ಸ ಪೆದೆಯವರಿಗೆ ಆರೋಗ್ಯ ದೃಡ ಪ್ರಮಾಣ ಪತ್ರ ನೀಡಿ ಸ್ವಾಗತಿಸಿದರು, ಅಲ್ಲದೆ ಶಹಾಪುರ ನಗರ ಠಾಣೆಗೂ ಬೇಟಿ ನೀಡಿದ ಅವರು ,ಸಾರ್ವಜನಿಕರು ಯಾವುದೆ ಆತಂಕ ಪಡಬೇಕಿಲ್ಲ, ದೈನಂಧಿನ ಕಾರ್ಯ ಚಟುವಟಿಕೆಗಳಿಗೆ ದೂರು ದುಮ್ಮಾನಗಳಿಗೆ ಠಾಣೆಗೆ ಬರುವ ಭಯ ಪಡಬೇಡಿ, ಎಂದು ಸಾರ್ವತ್ರಿಕರಿಗೆ ಮನವರಿಕೆ ಮಾಡಿದರು, ಈ ಸಮಯದಲ್ಲಿ ಯಾದಗಿರಿ ಜಿಲ್ಲಾ ಎಸ್ಪಿ ಋಷಿಕೇಶ ಭಗವಾನ್ ಸೊನೆವಾಲೆ,ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ, ಶಹಾಪುರ ಸಿಪಿಐ ಶ್ರೀನಿವಾಸ ಅಲ್ಲಾಪುರೆ. ನಗರ ಠಾಣಾ ಪಿ,ಐ ಹನುಮರಡ್ಡೆಪ್ಪ, ಪಿಎಸ್,ಐ ರಾಜಕುಮಾರ ಜಾಮಗೊಂಡ,ಚಂದ್ರಕಾಂತ ಮ್ಯಾಕಲೆ,ದುರ್ಗಪ್ಪನಾಯಕ,ಸಿದ್ದೇಶ್ವರ ಸೆರಿದಂತೆ ತಾಲುಕಿನ ಎಲ್ಲಾ ಠಾಣಾ ಅಧಿಕಾರಿಗಳು ಪೋಲಿಸ್ ಸಿಬ್ಬಂದಿಯವರು ಹಾಜರಿದ್ದರು,