ಶಹಾಪುರವಾಣಿ
ಮರಳು ತುಂಬಿಕೊಂಡು ಕಲಬುರ್ಗಿಗೆ ಹೊರಟಿದ್ದ ಮಾಲಿಕನೊಬ್ಬನಿಗೆ ಸೇರಿದ ಏರಡು ಲಾರಿಗಳು ಶಹಾಪುರ ಬಳಿ ವೇಗದ ನಿಯಂತ್ರಣ ತಪ್ಪಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಚಾಲಕನೊರ್ವ ಸ್ಥಳದಲ್ಲೆ ಮೃತಪಟ್ಟ ಘಟನೆ ಶಹಪುರ ನಗರ ಹೊಸ್ ಬಸ್ ನಿಲ್ದಾಣದ ಹತ್ತಿರದಲ್ಲಿ ತಡ ರಾತ್ರಿ ನೆಡೆದಿದೆ, ಮೃತ ಚಾಲಕ ವಡಗೇರಾ ತಾಲುಕಿನ ಮನಗನಾಳ ಗ್ರಾಮದ ಶರಣಪ್ಪ ತಂ ಸಿದ್ರಾಮಪ್ಪ [45] ಎಂದು ಗುರುತಿಸಲಾಗಿದ್ದು.ಲಾರಿ ಕ್ಲೀನರ್ ಮಾತ್ರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಈ ಕುರಿತು ಶಹಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,