ಕೊರಾನ್ ವಾರಿಯರ್ಸಗಳಿಗೆ ಸನ್ಮಾನದ ಸುರಿಮಳೆ ಹಣ್ಣು ವಿತರಣೆ
ಶಹಾಪುರವಾಣಿ
ಕರ್ನಾಟಕ ನಾಡಿನಲ್ಲಿ ಕನ್ನಡ ನಾಡು, ನುಡಿ ಹುಸಿರಾಗಿಸಿಕೊಂಡು ನಾಡಿನ ಭಾಷೆ,ಕನ್ನಡ ಜನರಪರ ಕಾಳಿಜಿಯನ್ನೊತ್ತು ಕರ್ನಾಟಕದಲ್ಲಿ ಭ್ರಹತ್ ಪ್ರಮಾಣದಲ್ಲಿ ಕರ್ನಾಟಕ ರಕ್ಷಣೆ ವೇದಿಕೆಯ ಸಂಘಟಿತ ಶಕ್ತಿಯನ್ನು ಹುಟ್ಟು ಹಾಕಿದ, ನಾಡು ಕಂಡ ಕನ್ನಡದ ಕಣ್ಮಣಿ, ಕರವೇ ರಾಜ್ಯಾಧ್ಯಕ್ಷರಾದ ಟಿ,ಎ,ನಾರಾಯಣಗೌಡರವರು 54 ವಸಂತಗಳಿಗೆ ಪಾದಾರ್ಪಣೆ ಮಾಡುತ್ತಿರುವ ಹಿನ್ನಲೆಯಲ್ಲಿ, ರಾಜ್ಯದ ಪ್ರತಿ ಮೂಲೆ ಗ್ರಾಮ,ಹೊಬಳ್ಳಿ, ನಗರ ಪಟ್ಟಣಗಳಲ್ಲಿ ಕರವೇ ಸೇನಾನಿಗಳು ,ಟಿ,ಎ,ನಾರಾಯಣಗೌಡರವರು ಜನ್ಮದಿನದ ಅಂಗವಾಗಿ ನಾನಾ ಬಗೆಯಲ್ಲಿ ವಿಭನ್ಯತೆಯಲ್ಲಿ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡು ಸಂಭ್ರಮಿಸಿದರು, ಸಾಮಾಜಿಕ ಕಳಕಳೆ ಅಳವಡಿಕೊಂಡು ಕರ್ತವ್ಯ ನಿರ್ವಹಣೆ ಮಾಡುವ ,ಮತ್ತು ಕೊರಾನ್ ವಾರಿಯರ್ಸಗಳಾಗಿ ಸತತ ಮೂರು ತಿಂಗಳ ಕಾಲ,ಜೀವದ ಹಂಗೂ ತೊರೆದುಕೊಂಡು ಲಾಕ್ ಡೌನ್ ಜಾರಿಯ ಪಾಲನೆಗಳೊಂದಿಗೆ ಅವಿರತ ಹೊರಾಟ ಮಾಡಿದ ವೈಧ್ಯಕೀಯ ಅಧಿಕಾರಿಗಳಿಗೆ ಗೌರವಾರ್ಪಣೆ ಮಾಡುವದರ ಮುಖಾಂತರ ನಾಡಿಗೆ ಜನಪರ ಜಾಗ್ರತಿಗೆ ಹಾಗೂ ಸೇವಾನಿರತ ವರ್ಗಕ್ಕೆ ಆತ್ಮಶಕ್ತಿ ನೀಡಿ ಸನ್ಮಾನಿಸಿದರು,ಶಹಾಪುರ ಸರ್ಕಾರಿ ಆಸ್ಪತ್ರೆಯಲ್ಲಿನ ಆಡಳಿತ ವೈಧ್ಯಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುವ ಡಾ,ಮಲ್ಲಪ್ಪ ಕಣಜಿಗಿಕರ್, ಹಾಗೂ ಡಾ,ಜಗಧೀಶ ಉಪ್ಪಿನ ,ಡಾ,ರಾಘವೆಂದ್ರ, ಡಾ,ವೆಂಕಟೇಶ ಬೈರಾಮಡಗಿ, ಡಾ,ಫಾರೂಖಸಾಬ್,,ಡಾ,ಯಲ್ಲಪ್ಪ ಹುಲಕಲ್, ಹಾಗೂ ಡಾ,ಸರೋಜಾ ಸೇರಿದಂತೆ ಆರೋಗ್ಯ ಸಿಬ್ಬಂದಿಯವರಿಗೂ ಶಹಾಪುರ ತಾಲುಕಾ ಕರವೇ ಅಧ್ಯಕ್ಷರಾದ ಭೀಮಣ್ಣ ಶಖಾಪುರವರು ಶಾಲು ಹಾರಗಳನ್ನು ಹಾಕಿ ಗೌರವ ಸಲ್ಲಿಸಿದರು,ಹೃದಯಪೂರ್ವಕ ಅಭಿನಂಧನೆಗಳನ್ನು ಸಮರ್ಪಿಸಿದರು,ಈ ಸಂಧರ್ಭದಲ್ಲಿ ಮೌನೇಶ ಸುರಪುರ,ಕರವೇ ಮುಖಂಡರಾದ ಸಿದ್ದು ಪಟ್ಟೆದಾರ,ಸೈಪಾನ್ ದೊರನಳ್ಳಿ,ಅಮರೇಶ ತೆಲಗಿ, ಬಾಬು ದಾಜೀನ,ಜಗು,ಬಸ್ಸು ಬೊಳಾರಿ,ಸೇರಿದಂತೆ ಅನೇಕ ಕಾರ್ಯಕರ್ತರು ಆರೋಗ್ಯ ಸಿಬ್ಬಂದಿಯವರು ಹಾಜರಿದ್ದರು,