ಮಲ್ಲು ಗುಳಗಿ
ಶಹಾಪೂರವಾಣಿ-10 ಜೂನ್. ಸುರಪುರ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ನಿರೀಕ್ಷೆ ಇಟ್ಟು ಬೆಳೆದಿದ್ದ ಪಪ್ಪಾಯಿ ಖರೀದಿಯಾಗದೆ ಗಿಡದಲ್ಲಿ ಹಣ್ಣಾಗಿ ಉದುರಿ ಬಿಳುತ್ತಿದ್ದರಿಂದ ರೈತರು ಕಂಗಲಾಗಿದ್ದರು.
ಅನೇಕ ನಿರೀಕ್ಷೆ ಇಟ್ಟುಕೊಂಡು ರೈತರು ಬೆಳೆದಿರುವ ತೋಟಗಾರಿಕೆ ಬೆಳೆಯಾದ ಪಪ್ಪಾಯ ಬೆಳೆ , ಇನ್ನೇನು ರೈತರ ಕೈ ಸೇರಿತು ಎನ್ನುವ ಹೊತ್ತಿಗೆ ಕೊರೊನಾ ವೈರಸ್ ನಿಂದಾಗಿ ಈಡೀ ದೇಶವೇ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ನಮ್ಮ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಪಪ್ಪಾಯಿ ಗಿಡಗಲ್ಲೆ ಹಣ್ಣಾಗಿ, ಕೊಳೆತು ಉದುರಿ ಬಿಳುತ್ತಿವೆ.
ಮಾರುಕಟ್ಟೆ ವ್ಯವಸ್ಥೆಯಲ್ಲಿ ಸೂಕ್ತ ಬೆಂಬಲ ಬೆಲೆ ಇಲ್ಲದೆ ಸಂಪೂರ್ಣ ನೆಲ ಕಚ್ಚಿದ್ದು ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆತಾಲ್ಲೂಕಿನ ಚಿಕನಹಳ್ಳಿ ಗ್ರಾಮದಲ್ಲಿ ಹತ್ತಾರು ಜನ ರೈತರು ಬಹು ನಿರೀಕ್ಷೆ ಇಟ್ಟು ಪಪ್ಪಾಯಿ ಬೆಳೆದಿದ್ದಾರೆ,
ನಿರೀಕ್ಷೆಗೆ ತಕ್ಕಂತೆಯೇ ಫಸಲು ಉತ್ತಮವಾಗಿ ಬಂದಿದೆ ಆದರೆ ಖರೀದಿದಾರರಿಲ್ಲದೆ ಸುಮಾರು 20 ಎಕರೆಯಲ್ಲಿ ಬೆಳೆದಿದ್ದ ಪಪ್ಪಾಯಿ ಸುಮಾರು 20 ರಿಂದ ಲಕ್ಷ ನಷ್ಷಅನುಭವಿಸವಂತಾಗಿದೆ ಎಂದು ಚಿಕ್ಕನಹಳ್ಳಿ ಗ್ರಾಮದ ರೈತರಾದ ಬಸಣ್ಣ ಕಟ್ಟಿಮನಿ, ಯಂಕಪ್ಪ ಹುಣಸಗಿ, ಸಂಜೀವ ದೇವದುರ್ಗ, ರಾಮಚಂದ್ರ ಕಟ್ಟಿಮನಿ ಅವರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.
ಕೂಡಲೇ ಸರ್ಕಾರ ರೈತರಿಗೆ ಪರಿಹಾರ ಕಲ್ಪಿಸುವುದರ ಜೊತೆಗೆ ರೈತರು ಬೆಳೆದಿರುವ ಬೇಳೆಯನ್ನು ಖರೀದಿಸಿ ಅನುಕೂಲ ಮಾಡಿಕೊಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ ..