ಕರ್ನಾಟಕ ವಿಧಾನಪರಿಷತ್ ಚುನಾವಣೆ ದಿನಾಂಕ ಪ್ರಕಟ

ಕರ್ನಾಟಕದ ವಿಧಾನ ಪರಿಷತ್ ಚುನಾವಣೆ 2020 ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗವು ಮಂಗಳವಾರ(ಜೂನ್ 7) ದಂದು ಪ್ರಕಟಿಸಿದೆ. ರಾಜ್ಯದ 7 ವಿಧಾನಪರಿಷತ್ ಸ್ಥಾನಗಳಿಗೆ ಜೂನ್ 30, 2020ರಂದು ಅವಧಿ ಮುಕ್ತಾಯಗೊಳ್ಳಲಿದ್ದು, ಈ 7 ಸ್ಥಾನಗಳಿಗೆ ಜೂನ್ 29ರಂದು ಚುನಾವಣೆ ನಡೆಸಲಾಗುತ್ತದೆ.
ಜೂನ್ 30, 2020ರಂದು ನಸೀರ್ ಅಹ್ಮದ್, ಜಯಮ್ಮ, ಎನ್ ಎಸ್ ಬೋಷೆರಾಜು, ಎಚ್ ಎಂ ರೇವಣ್ಣ, ಟಿ ಎ ಶರವಣ ಮತ್ತು ಡಿ ಯು ಮಲ್ಲಿಕಾರ್ಜುನ್ ಅವರ ವಿಧಾನ ಪರಿಷತ್ ಕಾಲಾವಧಿ ಮುಕ್ತಾಯಗೊಳ್ಳಲಿದೆ.
ಈ 7 ವಿಧಾನ ಪರಿಷತ್ ಸ್ಥಾನಗಳಿಗೆ ಜೂನ್ 29ರಂದು ಚುನಾವಣೆ ನಡೆಯಲಿದ್ದು, ಅಂದೇ ಫಲಿತಾಂಶ ಹೊರ ಬರಲಿದೆ.
ರಾಜ್ಯಸಭೆಯ 24 ಸ್ಥಾನಗಳಿಗೆ ಚುನಾವಣೆ ದಿನಾಂಕ
ವಿಧಾನ ಪರಿಷತ್ ಚುನಾವಣೆ ಪ್ರಕ್ರಿಯೆ ವೇಳಾಪಟ್ಟಿ:

ಜೂನ್ 11, 2020: ಚುನಾವಣಾ ಪ್ರಕ್ರಿಯೆ ಆರಂಭ

ಜೂನ್ 18 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ

ಜೂನ್ 19 ನಾಮಪತ್ರಗಳ ಪರಿಶೀಲನೆ

ಜೂನ್ 22 ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕ

*ಜೂನ್ 19: ಮತದಾನ, ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆ ವರೆಗೆ

ಜೂನ್ 19: ಸಂಜೆ 5ರ ನಂತರ ಮತ ಎಣಿಕೆ ಫಲಿತಾಂಶ

Leave a Reply

Your email address will not be published. Required fields are marked *

English Kannada